By Village Missionary Movement
Sunday, 10-Oct-2021ಧೈನಂದಿನ ಧ್ಯಾನ(Kannada) – 10.10.2021 (Kids Special)
ಚಿಟ್ಟೆ
“ಇಗೋ, ನನ್ನ ಅಂಗೈಗಳಲ್ಲಿ ನಿನ್ನನ್ನು ಚಿತ್ರಿಸಿದ್ದೇನೆ; " — ಯೆಶಾಯ 49:16
ಮುದ್ದು ಪುಟಾಣಿ ಮಕ್ಕಳೇ? ನಿಮ್ಮೆಲ್ಲರನ್ನು ನೋಡಲು ತುಂಬಾ ಆಸೆಯಾಗಿದೆ. ಈ ಕಥೆಯ ಮೂಲಕ ನಿಮ್ಮನ್ನು ಭೇಟಿ ಮಾಡುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ. ನೀವು ಪ್ರತಿ ಭಾನುವಾರ ಕಲಿತುಕೊಳ್ಳುತ್ತಿರುವ ಹಾಡನ್ನು ತಪ್ಪದೇ ಮರೆಯದೆ ಹಾಡುತ್ತಿದ್ದೀರಾ? ನೀವು ಹಾಡು ಹಾಡಿದರೆ ಶತ್ರುವಾದ ಸೈತಾನನು ನಡುಗಿ ಹೋಗುತ್ತಾನೆ. ನೀವು Jesus - ಅನ್ನು ಸ್ತುತಿಸಿ ಹಾಡುವುದರಲ್ಲಿ ತುಂಬಾ ಶಕ್ತಿ ಇದೆ. ಇದರಿಂದಾಗಿ ಹಾಡುಗಳನ್ನು ಮರೆಯದೆ ಹಾಡುತ್ತಲೇ ಇರಿ. ಸರಿ ಇಂದು ಚಿಟ್ಟೆಯ ಕಥೆಯೊಂದನ್ನು ಕೇಳೋಣವಾ?
School-ಗೆ ಹೋಗದೇ ತುಂಬಾ ದಿನಗಳಿಂದ Leave-ನಲ್ಲೇ ಇರುವುದರಿಂದ ತುಂಬಾ bore ಆಗಿತ್ತು ಇಬ್ಬರು ಸ್ನೇಹಿತರಿಗೆ. ಅವರು ವಾಸಿಸುತ್ತಿದ್ದ ಹಳ್ಳಿಯು ತುಂಬಾ ಸುಂದರವಾಗಿ ಹಚ್ಚ ಹಸಿರಾಗಿತ್ತು. ಹೊಲದ ಪಕ್ಕದಲ್ಲಿ walking ಹೋಗಿ ಬರೋಣ ಎಂದು ಇಬ್ಬರೂ ಹೊರಟರು, Super-ಆಗಿ ತಂಪಾದ ಗಾಳಿ ಬೀಸುತ್ತಿತ್ತು. ಚಿಟ್ಟೆಯೊಂದು ಆಕಡೆ ಈಕಡೆ ಹಾರಾಡುತ್ತಿರಲು ಈ ಇಬ್ಬರು ಸ್ನೇಹಿತರೂ ಅದನ್ನು ಹಿಡಿಯಲು ಪ್ರಯತ್ನಿಸಿದರು. ನೀವೂ ಕೂಡ ಚಿಟ್ಟೆಯನ್ನು ಹಿಡಿಯಲು ಇಷ್ಟಪಡುತ್ತೀರ ತಾನೇ! ಓಹ್ ... ಹಿಡುಕೊಂಡು ಆಟ ಆಡಿದ್ದೀರಾ? ಇದು ಕಲರ್ ಕಲರ್ ಆಗಿ ಇರುತ್ತದೆ, ನೋಡಲು ತುಂಬಾ ಸಂತೋಷವಾಗಿರುತ್ತದೆ ಹೌದು ತಾನೇ!
ಒಬ್ಬ ತಮ್ಮ ಆ ಚಿಟ್ಟೆಯನ್ನು ಹಿಡುಕೋಬಿಟ್ಟನು. ಲೋ! Friend ನಿನಗೆ ಒಂದು ಪ್ರಶ್ನೆ ಕೇಳ್ತಿನಿ ಹೇಳ್ತಿಯಾ? ಈ ಚಿಟ್ಟೆ ನನ್ನ ಕೈಯೊಳಗೆ ಇನ್ನೂ ಜೀವಂತವಾಗಿದೆಯಾ? ಸತ್ತು ಹೋಗಿದೆಯಾ ಎಂದು ಕೇಳಿದನು. ಆ Friend ಸ್ವಲ್ಪ ಹೊತ್ತು ಯೋಚಿಸಿ, ಜೀವಂತವಾಗಿದೆ ಎಂದು ಹೇಳಿದರೆ ಅದನ್ನು ಹಿಸುಕಿ ಸಾಯಿಸಿ ಬಿಡುತ್ತಾನೆ. ಸತ್ತು ಹೋಗಿದೆ ಎಂದು ಹೇಳಿದರೆ ಜೀವಂತವಾಗಿ ಹಾರಲು ಬಿಡುತ್ತಾನೆ ಎಂದು ಯೋಚನೆ ಮಾಡಿ, ಆ ಚಿಟ್ಟೆ ಜೀವಂತವಾಗಿರುವುದು ಸಾಯುವುದು ಎರಡೂ ನಿನ್ನ ಕೈಯಲ್ಲೇ ಇದೆ ಎಂದು ಬುದ್ಧಿವಂತಿಕೆಯಿಂದ ಉತ್ತರ ಕೊಟ್ಟನು. ಚೆನ್ನಾಗಿ ಉತ್ತರ ಕೊಟ್ಟೆ ಗೆಳೆಯ! ಅಂದನು. ನಂತರ ಚಿಟ್ಟೆಗೆ ಹೆದರಬೇಡ ಹೋಗು ಎಂದು ಹೇಳಿ ಸುಂದರವಾಗಿ ಹಾರಲು ಬಿಟ್ಟನು.
ಪ್ರೀತಿಯ ತಮ್ಮ- ತಂಗಿ! ಚಿಟ್ಟೆಗೆ ಯಾವ ಅಪಾಯವು ಸಂಭವಿಸಬಾರದೆಂದು ನೆನೆಸಿ ಆ ಸ್ನೇಹಿತ ಎಷ್ಟು ಬುದ್ಧಿವಂತಿಕೆಯಿಂದ ಉತ್ತರಿಸಿದನು ಎಂದು ನೀವು ನೋಡುದ್ರಾ? ಯೇಸಪ್ಪ ನಿಮ್ಮನ್ನು ಅಂಗೈಯಲ್ಲಿ ಚಿತ್ರಿಸಿದ್ದಾರೆ. ಅವರು ನಿಮ್ಮನ್ನು ಭದ್ರವಾಗಿ ಕಾಪಾಡಿಕೊಳ್ಳುತ್ತಾರೆ. ನೀವು ನಿಮ್ಮನ್ನು ಯೇಸಪ್ಪನ ಕೈಯೊಳಗೆ ಸಮರ್ಪಿಸಿಕೊಳ್ಳಬೇಕು. ಯೇಸಪ್ಪನ ಕೈಯಿಂದ ಯಾರೂ ನಿಮ್ಮನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಸೈತಾನ ಮತ್ತು ದುಷ್ಟರ ಕೈಗೆ ಸಿಲುಕದಂತೆ ನಮ್ಮನ್ನು ಕಾಪಾಡಿ ದೇವರೇ! ಎಂದು ಪ್ರಾರ್ಥಿಸಲು ಮರೆಯಲೇ ಬಾರದು. ಚಿಟ್ಟೆಯಂತೆ, ಹಾರುತ್ತಾ ಅನೇಕರಿಗೆ ಸಾಕ್ಷಿಯಾಗಿ ಜೀವಿಸಬೇಕೆಂದು ನಿಮ್ಮನ್ನು ಹಾರೈಸುತ್ತೇನೆ. Bye ಪುಟಾಣಿಗಳೇ!
- Sis. ದೆಬೋರಾಳ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482