Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.10.2021
Share:

By Village Missionary Movement

Thursday, 07-Oct-2021

ಧೈನಂದಿನ ಧ್ಯಾನ(Kannada) – 07.10.2021

 

ದುಷ್ಪ್ರೇರಣೆಯನ್ನು ಒಪ್ಪಲೇಬೇಡ!

 

"ಮಗನೇ, ಪಾಪಿಗಳು ದುಷ್ಪ್ರೇರಣೆಯನ್ನು ಮಾಡಿದರೆ ನೀನು ಒಪ್ಪಲೇಬೇಡ." – ಜ್ಞಾನೋಕ್ತಿ 1:10

 

ಸುಂದರವಾದ ಅರಮನೆಯೊಂದರಲ್ಲಿ ಎಂಟು ಕಾಲಿನ ಕೀಟವು ಅಚ್ಚುಕಟ್ಟಾಗಿ ಒಂದು ಜಾಲವನ್ನು ಹೆಣೆದು, ಆ ಜಾಲದ ಮಧ್ಯದಲ್ಲಿ ಸುಖವಾಗಿ ನಿದ್ದೆ ಮಾಡುತ್ತಿತ್ತು. ಇದನ್ನು ನೋಡಿದ ನೊಣ, "ನಾನೂ ಕೂಡ ಹೀಗೆ ಉಲ್ಲಾಸವಾಗಿದ್ದು ಆಡಲು ನನ್ನ ಬಳಿ ಈ ರೀತಿಯ ಬಲೆಯು ಇಲ್ಲವೇ" ಎಂದು ಹೇಳಿತು. ಇದನ್ನು ಕೇಳಿದ ಎಂಟು ಕಾಲಿನ ಕೀಟ, "ನೀನೂ ಬಾ, ನಾವು ಜಾಲಿಯಾಗಿ ಇರಬಹುದು" ಎಂದು ಹೇಳಿತು. ನೊಣ ಈ ಆಸೆಯಾದ ಮಾತುಗಳನ್ನು ಕೇಳಿ, ಬಲೆಯೊಳಗೆ ಸಿಕ್ಕಿಕೊಂಡಿತು. ಎಷ್ಟೇ ಪ್ರಯತ್ನಿಸಿದರೂ, ಹೋರಾಡಿದರೂ ನೊಣಕ್ಕೆ ತನ್ನನ್ನು ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೆಲವೇ ಸಮಯದಲ್ಲಿ ನೊಣ ಆ ಎಂಟು ಕಾಲಿನ ಕೀಟಕ್ಕೆ ಆಹಾರವಾಯಿತು.

 

ಇಂದಿನ ಜಗತ್ತಿನಲ್ಲಿ, ಪಾಪ ಮಾಡುವಂತೆ ಪ್ರೇರೇಪಿಸುವ ದೃಶ್ಯಗಳು ಮತ್ತು ಅವಕಾಶಗಳನ್ನು ಸೈತಾನನು ಅಂಗೈಯಲ್ಲೇ ತಂದುಬಿಟ್ಟನು. "ಇದೆಲ್ಲಾ ತಪ್ಪಲ್ಲ ಮಗ" ಎಂದು ಹೇಳಿ ನಮ್ಮನ್ನು ಪಾಪಕ್ಕೆ ಮಾರುವ ಸ್ನೇಹ ಸಮೂಹವಿದೆ. ಕೆಲಸದ ಸ್ಥಳದಲ್ಲಿ, ಓದುವ ಸ್ಥಳದಲ್ಲಿ ನಿಮ್ಮ ಸ್ನೇಹಿತರು ಹೇಳಬಹುದು, "ಸ್ವಲ್ಪ ಕುಡಿಯಿರಿ, ಇದೇನೂ ಪಾಪವಲ್ಲ" ಎಂದು ಹೇಳಿ ದುಷ್ಪ್ರೇರಣೆಯಿಂದ ನಿನ್ನ ಬಳಿ ಮಾತನಾಡಬಹುದು. ಪರಸ್ತ್ರೀಯ ತುಟಿಗಳು ಜೇನಿನಗೂಡಿನಂತೆ ಹರಿಯುತ್ತದೆ, ಅವಳ ಬಾಯಿ ಎಣ್ಣೆಗಿಂತಲೂ ನಯವಾಗಿರುತ್ತದೆ ಎಂದು ಸತ್ಯವೇದವು ಹೇಳುತ್ತದೆ. ಪಾಪದ ಸಂಬಳ ಮರಣ. ಇದು ದಿನಗಳು ಕಳೆಯುತ್ತಾ ಬಹಳ ಕಹಿಯಾಗಿ ಮಾರ್ಪಡುತ್ತದೆ. ನೀನು ಇದರಿಂದಾಗಿ ಬಿಡುಗಡೆಯಾಗಬೇಕೆಂದು ಬಯಸಿದರೂ, ನಿನ್ನಿಂದ ಸಾಧ್ಯವಾಗುವುದಿಲ್ಲ. ಆಗ ನಿನ್ನ ಮನಸ್ಸು ಯೋಚಿಸುತ್ತದೆ. "ಅಯ್ಯೋ! ನಾನು ಧರ್ಮೋಪದೇಶವನ್ನು ಕೇಳಲಿಲ್ಲವೇ. ನನ್ನ ತಂದೆ ಮತ್ತು ತಾಯಿ ನನ್ನನ್ನು ಗದರಿಸಿದಾಗ, ನಾನು ಅದನ್ನು ನಿರ್ಲಕ್ಷ್ಯ ಮಾಡಿಬಿಟ್ಟೆನೆ! ಈಗ ಇದರಿಂದ ಹೇಗೆ ಹೊರಬರಲು ಸಾಧ್ಯ. ಯಾರು ಈ ಪಾಪದಿಂದ ನನ್ನನ್ನು ಮೇಲೆತ್ತಲು ಸಾಧ್ಯ?" ಎಂದು ಯೋಚಿಸುವಂತೆ ತೋರುತ್ತದೆ.

 

ಪಾಪವನ್ನು ನೀರಿನಂತೆ ಕುಡಿಯುವ ಯುವಕರೇ! ನಿಮಗೆ ಸತ್ಯವೇದವು ಹೇಳುವ ಆಲೋಚನೆ ಏನು? ನನ್ನ ಮಗನೇ, ನಿನ್ನ ಪಾದವನ್ನು ಅವರ ಹಾದಿಯಿಂದ ದೂರವಿಡು, ಮತ್ತು ಅವರೊಂದಿಗೆ ನಡೆಯಬೇಡ. ದುಷ್ಟರ ಆಲೋಚನೆಯಂತೆ ನಡೆಯದೆ ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ ಧರ್ಮನಿಂದಕರೊಡನೆ ಕುಳಿತುಕೊಳ್ಳಬೇಡ! ಹೌದು, ಹೀಗೆ ಸರಿಯಾಗಿ ನಮ್ಮ ನೆನಪುಗಳು, ಆಲೋಚನೆಗಳು ಮತ್ತು ಹೃದಯದ ಬಯಕೆಗಳನ್ನು ಒತ್ತಿ ತೋರಿಸುವ ಸತ್ಯವೇದವೆಂಬ ಕನ್ನಡಿಯ ಮುಂದೆ ನಿಂತು ನಿಮ್ಮನ್ನು ಸ್ವಚ್ಛವಾಗಿಟ್ಟುಕೊಂಡರೆ, ನೀನು ಜೀವಿಸುವ ಈ ಲೋಕದಲ್ಲಿ, ನಿನ್ನನ್ನು ನೋಡುವ ದೇವರ ದೃಷ್ಟಿಯಲ್ಲಿ ವಿಶೇಷವಾದ ವ್ಯಕ್ತಿಯಾಗಿಯೂ ಮತ್ತು ಆಶೀರ್ವದಿಸಲ್ಪಟ್ಟವನಾಗಿಯೂ ಇರುತ್ತೀಯ.

- D. ಫಿಲಿಪ್ ಬಾಲಮುರುಗನ್

 

ಪ್ರಾರ್ಥನಾ ಅಂಶ:

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ದೇವರ ಸಂದೇಶಗಳ ಮೂಲಕ ಅನೇಕರು ಪುನಶ್ಚೇತನಗೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş