Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.10.2021
Share:

By Village Missionary Movement

Tuesday, 05-Oct-2021

ಧೈನಂದಿನ ಧ್ಯಾನ(Kannada) – 05.10.2021

 

ಕೆಲಸ

 

“ತನ್ನ ಹೊಲವನ್ನು ವ್ಯವಸಾಯ ಮಾಡುವವನು ರೊಟ್ಟಿಯಿಂದ ತೃಪ್ತಿ ಹೊಂದುವನು; ..." - ಜ್ಞಾನೋಕ್ತಿ 12:11

 

ಸೊಚಿರೊ ಹೋಂಡಾ ಎಂಬವರು ಟೊಯೋಟಾ ಕಂಪೆನಿಗೆ ಪಿಸ್ಟನ್ ಉತ್ಪಾದನಾ ಘಟಕ ಒಂದನ್ನು ಸ್ಥಾಪಿಸಬೇಕೆಂದು ಬಹಳ ದಿನಗಳು ಆಸೆಪಟ್ಟರು. 1928 ನೇ ವರ್ಷದಲ್ಲಿ ಅದನ್ನು ರೂಪಿಸಿದರು. ಒಂದು ವರ್ಷದ ಕಠಿಣ ಪರಿಶ್ರಮದ ನಂತರ, ಮಾದರಿ ಪಿಸ್ಟನ್ ಅನ್ನು ಬಹಳ ನಿರೀಕ್ಷೆಯೊಂದಿಗೆ ಟೊಯೋಟಾ ಕಂಪನಿಗೆ ತೆಗೆದುಕೊಂಡು ಹೋದರು. ಆದರೆ ನಿರೀಕ್ಷಿತ ಗುಣಮಟ್ಟವು ನಿಮ್ಮ ಪಿಸ್ಟನ್‌ನಲ್ಲಿ ಇಲ್ಲ ಎಂದು ತಿರಸ್ಕರಿಸಿದರು. ಆದರೂ ಅವರು ಸತತ ಪ್ರಯತ್ನದಿಂದ ಪಿಸ್ಟನ್ ಅನ್ನು ತಮ್ಮ ಗುಣಮಟ್ಟಕ್ಕೆ ತಕ್ಕಂತೆ ತಯಾರಿಸಿ ಕೊಟ್ಟರು. ಆದರೆ ಎರಡನೆಯ ಮಹಾಯುದ್ಧದ ಕಾರಣ ಕಾರ್ಖಾನೆ ಕಟ್ಟಲು ಮಿಶ್ರಣವು ಸಿಗಲಿಲ್ಲ. ಬೇರೆ ಮಿಶ್ರಣವನ್ನು ಕಂಡುಹಿಡಿದು ಕಾರ್ಖಾನೆಯನ್ನು ನಿರ್ಮಿಸಿದರು. ಅಮೆರಿಕಾ ಎಸೆದ ಬಾಂಬಿನಿಂದ ಕಾರ್ಖಾನೆಯು ನೆಲಮಟ್ಟವಾಯಿತು. ಕಚ್ಚಾ ವಸ್ತುಗಳನ್ನು ಟೊಯೊಟಾ ಕಂಪೆನಿಗೆ ಮಾರಾಟ ಮಾಡಿದರು. ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಎಲ್ಲರೂ ಸೈಕಲ್ ಬಳಸುತ್ತಿದ್ದರು. ಆತ ತನ್ನ ಮನೆಯಲ್ಲಿದ್ದ ಹುಲ್ಲು ಕತ್ತರಿಸುವ ಯಂತ್ರದ ಮೋಟಾರ್ ತೆಗೆದು ಸೈಕಲ್ ಗೆ ನೇತಾಕಿ ರಸ್ತೆಯಲ್ಲಿ ವ್ಯಾಪಾರ ಮಾಡಿದರು. ಪ್ರತಿಯೊಬ್ಬರೂ ತಮಗೆ ಇದರಂತೆ ಬೇಕೆಂದು ಕೇಳಿದರು. ಇದರ ಫಲಿತಾಂಶವೇ ಹೋಂಡಾ ಮೋಟಾರ್ ಸೈಕಲ್. ಇಂದು ಅದರ ಮಾರಾಟದ ಬಗ್ಗೆ ನಾವೇ ತಿಳಿದಿದ್ದೇವೆ.

 

ಸತ್ಯವೇದವು ಹೇಳುತ್ತದೆ, ತನ್ನ ಭೂಮಿಯನ್ನು ವ್ಯವಸಾಯ ಮಾಡುವವನು ರೊಟ್ಟಿಯಿಂದ ತೃಪ್ತಿ ಹೊಂದುವನು ಎಂದು! ಹೌದು, ನೀವು ಯಾವುದಕ್ಕಾಗಿ ದುಡಿಯುತ್ತೀರೋ ಅದು ನಿಮಗೆ ಸಿಗುತ್ತದೆ. ನಾವು ದುಡಿಯುವ ದುಡಿಮೆ ಎಂದಿಗೂ ವ್ಯರ್ಥವಾಗುವುದಿಲ್ಲ. ಚುರುಕಾದ ಮನುಷ್ಯನ ಕೈ ಸಂಪತ್ತನ್ನು ಉಂಟುಮಾಡುತ್ತದೆ ಎಂದು ಸತ್ಯವೇದವು ಹೇಳುತ್ತದೆ. ದೇಶವೆಲ್ಲಾ ಬರಗಾಲದಲ್ಲಿರುವಾಗ ಇಸಾಕನು ಆ ದೇಶದಲ್ಲಿ ಬೀಜವನ್ನು ಬಿತ್ತಿ ಅದೇ ವರುಷದಲ್ಲಿ ನೂರರಷ್ಟು ಬೆಳೆಯನ್ನು ಹೊಂದಿದನು.

 

ಪ್ರಿಯರೇ! ನೀವು ಸೋಮಾರಿಗಳಾಗಿದ್ದೀರಾ? ಅಥವಾ ನೀವು ದುಡಿಯುತ್ತಲೇ ಇದ್ದೀರಾ? ನೀವು ದುಡಿಮೆ ಮುಂದುವರಿಸಿದರೆ ಲಾಭ ಖಚಿತ. ನಿರಾಶೆ ಮತ್ತು ಪ್ರತಿಕೂಲತೆಯ ನಡುವೆಯೂ ಸೊಚಿರೊ ಹೋಂಡಾ ರವರ ಹಾಗೆ, ಇಸಾಕನ ಹಾಗೆ ದಣಿವರಿಯದೆ ಕೆಲಸ ಮಾಡುತ್ತಲೇ ಇರಬೇಕು. ಹಾಗೆ ಕೆಲಸ ಮಾಡುತ್ತಿದ್ದರೆ ನೀವು ಹೊಸ ಹೊಸ ಯೋಜನೆಗಳನ್ನು ಪಡೆಯುತ್ತೀರಿ. ನಾವು ಕೂಡ ಮುಂದೆ ಸಾಗಬಹುದು.

- Mrs. ಅನ್ಬುಜೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಸಹ ಸೇವಕರು ಕೆಲಸ ಮಾಡುವ ಹಳ್ಳಿಗಳಲ್ಲಿ ಅದ್ಬುತ ಕ್ರಿಯೆಗಳು ನಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino betcio bahiscasino atlasbet matbet matbet giriş bahiscasino celtabet queenbet casibom jojobet