Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.01.2021 (Kids Special)
Share:

By Village Missionary Movement

Sunday, 03-Jan-2021

ಧೈನಂದಿನ ಧ್ಯಾನ(Kannada) – 03.01.2021 (Kids Special)

ಹೊಸ ಬದಲಾವಣೆ

 "...ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ ಅಂದನು..." - ಪ್ರಕಟಣೆ 21:5

ಹಲೋ ಪುಟಾಣಿಗಳೇ! Happy New year 
ಈ ಹೊಸವರ್ಷವನ್ನು ನೋಡುವಂತೆ ಕೃಪೆ ಮಾಡಿದ ದೇವರಿಗೆ ಕೃತಜ್ಞತೆ ಹೇಳೋಣ.2021 ನೇ ವರ್ಷದಲ್ಲಿ ದೇವರು ಹೊಸ ಕಾರ್ಯಗಳನ್ನು ಮಾಡಲು ಶಕ್ತನಾಗಿದ್ದಾನೆ. ನೀವು ವಯಸ್ಸಿಗೆ ತಕ್ಕಹಾಗೆ ಬೆಳೆದರೇನೆ ನಿಮ್ಮ ಹೆತ್ತವರು ಸಂತೋಷಪಡುತ್ತಾರೆ. ಅದರಂತೆಯೇ ಯೇಸಪ್ಪ ಕೂಡ ಅವರನ್ನು ಮೆಚ್ಚಿಸುವ ಕಾರ್ಯಗಳಲ್ಲಿ ಬೆಳೆದಿದ್ದೇವಾ? ಹೊಸದಾಗಿ ಏನಾದರೂ ಬದಲಾವಣೆ  ಉಂಟಾಗಿದೆಯಾ ಎಂದು ನೋಡುತ್ತಾರೆ. ಯೇಸಪ್ಪನಿಗೆ ಹಿಡಿಸುವ ಕಾರ್ಯದಲ್ಲಿ ನೀನು ಬೆಳೆದಿದ್ದೀಯಾ?

ಒಂದು ವ್ಯಾಪಾರಿ ತನ್ನ ವ್ಯಾಪಾರವನ್ನು ಮುಗಿಸಿಕೊಂಡು ಬರುವ ಮಾರ್ಗದಲ್ಲಿ ಬಸ್ ನಿಲ್ದಾಣದ ಬಳಿಯಲ್ಲಿ ಒಂದು ದೊಡ್ಡ ಹೋಟೆಲ್ ನ್ನು ಕಂಡರು. ಆ ಹೋಟೆಲ್ ನೋಡುವುದಕ್ಕೆ ದೊಡ್ಡದಾಗಿತ್ತು. ಊಟ ಕೂಡ super ಆಗಿ ಇರುತ್ತದೆ ಎಂದು ನೆನಸಿ ಒಳಗೆ ಹೋದರು. ಯಾವುದೇ ರೀತಿಯ ಆಹ್ವಾನವೂ ಇಲ್ಲ ಟೇಬಲ್ ಗಳ ಮೇಲೆ ನೊಣಗಳು ಸುತ್ತಿಕೊಂಡಿದ್ದವು ಊಟ ಶುದ್ಧವಾಗಿರಲಿಲ್ಲ. ಆಹಾರವನ್ನು ತೆಗೆದುಕೊಂಡು ಬಾಯಲ್ಲಿ ಇಟ್ಟುಕೊಂಡರೆ ವಾಂತಿ ಬಂದುಬಿಟ್ಟಿತು. ಅಯ್ಯೋ! ದೊಡ್ಡ ಹೋಟೆಲ್ ಊಟ ಚೆನ್ನಾಗಿರುತ್ತದೆ ಎಂದು ನೆನೆಸಿದ್ದು ತಪ್ಪಾಯ್ತು, ಎಂದು ನೆನೆಸುತ್ತಾ ಹೇಗೋ ಕಷ್ಟಪಟ್ಟು ತಿಂದು ಮುಗಿಸಿ ಹೊರಟರು. ಹೋಟೆಲ್ ನಿರ್ವಹಣೆಯು ಸರಿಯಿಲ್ಲದ್ದರಿಂದ ಅದರ ಬೆಲೆ ಕಳೆದುಕೊಂಡಿತು.

ಎರಡು ವರ್ಷಗಳು ಕಳೆದು ಅದೇ ವ್ಯಾಪಾರಿ ಆ ಹೋಟೆಲನ್ನು ಕಂಡರು. ಬ್ರಹ್ಮಾಂಡವಾಗಿ ಸುಂದರವಾಗಿ ಕಾಣಲ್ಪಡುತ್ತಿತ್ತು. ಕಾರ್, ಬೈಕ್ ಗಳೆಲ್ಲ ಅಧಿಕವಾಗಿ ನಿಂತಿದ್ದವು. ಬಹಳ ದೊಡ್ಡ ದೊಡ್ಡ ಗುಂಪುಗಳು ಅಲೆಗಳ ಹಾಗೆ ಹರಿದು ಬರುತ್ತಿದ್ದರು. ಬಹಳ ಜನರು ಸಾಲಿನಲ್ಲಿ ನಿಂತುಕೊಂಡಿದ್ದರು. ಸರಿ, ಒಳಗೆ ಹೋಗಿ ನೋಡೋಣ ಎಂದು ಹೋದರು. ಎಲ್ಲರೂ ಕೂಡ ಆಸೆಯಿಂದ ತಿನ್ನುತ್ತಿದ್ದರು. ಆ ಸ್ಥಳವೆಲ್ಲಾ ಬಹಳ ಶುದ್ಧವಾಗಿತ್ತು. ಈ ಬದಲಾವಣೆಗೆ ಏನು ಕಾರಣ ಎಂದು ಸುತ್ತಲೂ ನೋಡಿದರು. ಹೊಸ ನಿರ್ವಹಣೆಯ ಕೆಳಗೆ ಈ ಹೋಟೆಲ್ ಸೇರಿಕೊಂಡಿದೆ ಎಂಬ ಮಾತು ಒಂದು board  ನಲ್ಲಿ ಬರೆಯಲ್ಪಟ್ಟಿತ್ತು. ಒಂದು ಮನುಷ್ಯನು ಸರಿಯಾಗಿ ಕಾರ್ಯನಿರ್ವಹಿಸುವಾಗ ಎಷ್ಟೊಂದು ಜನರು ಆಶೀರ್ವಾದ ಹೊಂದಿಕೊಳ್ಳುತ್ತಾರೆ ಎಂಬುದನ್ನು ಆ ವ್ಯಾಪಾರಿ ತಿಳಿದುಕೊಂಡರು.

ಪ್ರೀತಿಯ ತಮ್ಮ-ತಂಗಿ, ಹೊಸವರ್ಷದಲ್ಲಿ ನೀವು ನನ್ನನ್ನು ಮುನ್ನಡೆಸಿ. ನಿಮ್ಮ ನಿರ್ವಹಣೆಯ ಕೆಳಗೆ ನಾನು ಬದುಕಲು ನನ್ನನ್ನು ಸಮರ್ಪಿಸಿಕೊಳ್ಳುತ್ತೇನೆ ಎಂದು ಯೇಸಪ್ಪನಿಗೆ  ಹೇಳುವುದಾದರೆ, ನಿನ್ನನ್ನು ಅನೇಕರಿಗೆ ಆಶೀರ್ವಾದಕರವಾಗಿ ಉಪಯೋಗಿಸುತ್ತಾರೆ. ನಿಮ್ಮ ಜೀವನದಲ್ಲಿ ಹೊಸಬದಲಾವಣೆಯು ಯೇಸಪ್ಪನಿಂದ ಮಾತ್ರವೇ ಉಂಟಾಗಲು ಸಾಧ್ಯ. Amen ಹೇಳುತ್ತೀರಾ?   ಓ? Super.
-    Mrs.ಜೀವಾ ವಿಜಯ್

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al