By Village Missionary Movement
Monday, 04-Oct-2021ಧೈನಂದಿನ ಧ್ಯಾನ(Kannada) – 04.10.2021
ಸಿಂಹ
"ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವು ಕೊಂಚವಾಗಿದೆ." - ಜ್ಞಾನೋಕ್ತಿ 24:10
ಡಿಸ್ಕವರಿ ಚಾನೆಲ್‌ನಲ್ಲಿ ಕಾಡು ಮೃಗಗಳ ರಾಜನಾದ ಸಿಂಹದ ಬಗ್ಗೆ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿದರು. ಸಿಂಹವು ಇತರ ಎಲ್ಲಾ ಪ್ರಾಣಿಗಳಲ್ಲಿ ಕಂಡುಬರದ ಅನೇಕ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಇದರ ವಿಶಿಷ್ಟತೆಯೆಂದರೆ ಅದು ದೈಹಿಕವಾಗಿ ಮಾತ್ರವಲ್ಲ, ಹೃದಯದಲ್ಲಿಯೂ ಅಸುರ ಶಕ್ತಿಯನ್ನು ಹೊಂದಿದೆ. ಸಿಂಹ ತನ್ನ ಗುಂಪಿನಲ್ಲಿದ್ದಾಗ ಮಾತ್ರವಲ್ಲ, ಏಕಾಂಗಿಯಾಗಿರುವಾಗಲೂ ಏನು ನೋಡಿದರೂ ಹೆದರುವುದಿಲ್ಲ. ಭಯ, ಹಿಂಜರಿಕೆ, ಬಳಲಿಕೆ ಮತ್ತು ಶರಣಾಗತಿಯಂತಹ ಯಾವುದೇ ಸೋತುಹೋಗುವ ಸ್ವಭಾವವನ್ನೂ ಸಿಂಹದ ಬಳಿ ಕಾಣಲು ಸಾಧ್ಯವಿಲ್ಲ. ಹತ್ತು ಪ್ರಾಣಿಗಳು ಒಟ್ಟಾಗಿ ಸೇರಿ ಹೋರಾಡಲು ಬಂದರೂ ಆ ಎಲ್ಲಾ ಪ್ರಾಣಿಗಳನ್ನು ಸಿಂಹ ಏಕಾಂಗಿಯಾಗಿ ಎದುರಿಸಿ ನಿಲ್ಲುತ್ತದೆ. ಪರಿಶುದ್ಧ ಗ್ರಂಥವು ಕೂಡ ಸಿಂಹದ ಬಗ್ಗೆ ಅದ್ಭುತವಾದ ಮಾತುಗಳನ್ನು ಹೇಳುತ್ತಿದೆ. " ಮೃಗಗಳಲ್ಲಿ ಪರಾಕ್ರಮಶಾಲಿ, ಯಾವುದಕ್ಕೂ ಹಿಂಜರಿಯದ ಸಿಂಹ " ಎಂದು ತಮ್ಮ ಮಾತುಗಳಲ್ಲಿ ಹೊಗಳಲ್ಪಟ್ಟಿದೆ.
ಇಂದು ನೀವು ಯಾವುದೋ ಒಂದು ಕಾರ್ಯದಿಂದ ಬಳಲಿ ಹೋಗಿದ್ದೀರಾ? ದೇವರು ತಾನು ಸೃಷ್ಟಿಸಿದ ಸಿಂಹದ ಬಗ್ಗೆ ಹೇಳಿದ್ದನ್ನು ಇಂದು ನೀವು ಓದಿದ್ದೀರಲ್ಲವೇ? ಒಂದು ಮೃಗಕ್ಕೇ ಇಷ್ಟು ವಿಶೇಷವಾದ ಧೈರ್ಯವನ್ನು, ಗಾಂಭೀರ್ಯವನ್ನು ನೀಡಿರುವಾಗ, ಆತನ ಸ್ವಾರೂಪ್ಯದಲ್ಲಿ ಸೃಷ್ಟಿಮಾಡಲ್ಪಟ್ಟಿರುವ ಮನುಷ್ಯನಿಗೆ ಆತನು ಇನ್ನೆಷ್ಟು ಬಲವನ್ನು ಕೊಟ್ಟಿರುತ್ತಾರೆ ಎಂಬುದನ್ನು ಯೋಚಿಸಿ ನೋಡಿ ರಿ. ಅದಕ್ಕಾಗಿಯೇ ಅಪೊಸ್ತಲನಾದ ಪೌಲನು, "ನನ್ನನ್ನು ಬಲಪಡಿಸುವಾತನಲ್ಲಿದ್ದು ಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ" (ಫಿಲಿಪ್ಪಿ. 4:13) ಎಂದರು. ತನ್ನ ಕ್ರೈಸ್ತ ಜೀವನದಲ್ಲಿ ನಾನು ಬಲಹೀನನಾಗಿ ಹೋಗಿದ್ದೇನೆ ಎಂದು ಪೌಲನು ಎಂದಿಗೂ ಅಧೈರ್ಯವಾಗಿ ಮಾತನಾಡಲೇ ಇಲ್ಲ. ಬದಲಾಗಿ ತನ್ನ ಬಲಹೀನತೆ ಯಲ್ಲಿ ದೇವರ ಬಲವು ಪೂರ್ಣಸಾಧಕವಾಗುತ್ತದೆ ಎನ್ನುತ್ತಾರೆ. ಆದ್ದರಿಂದ ಇದನ್ನು ಓದುತ್ತಿರುವ ಒಬ್ಬರಾದರೂ ಬಳಲಿಹೋಗಬೇಡಿರಿ.
ಇಂದಿನ ಧ್ಯಾನ ವಾಕ್ಯದಲ್ಲಿ, ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವು ಕೊಂಚವಾಗಿದೆ ಎಂದು ಓದಿದೆವು. ನಾವು ಅನಿರೀಕ್ಷಿತವಾಗಿ ಕೆಲವು ಅಪಾಯಗಳು ಮತ್ತು ನಷ್ಟಗಳನ್ನು ನೋಡಿದಾಗ ಬಹಳ ಮಾನಸಿಕವಾಗಿ ಕುಗ್ಗಿಹೋಗುತ್ತೇವೆ. 1 ಸಮುವೇಲ. 30 ನೇ ಅಧ್ಯಾಯದಲ್ಲಿ ದಾವೀದನು ತುಂಬಾ ಕಷ್ಟಕರವಾದ ಸಮಸ್ಯೆಯೊಂದನ್ನು ಎದುರಿಸುತ್ತಾರೆ. ದಾವೀದನು ಅಧೈರ್ಯ ಪಡದೆ ತನ್ನ ದೇವರಾದ ಕರ್ತನಲ್ಲಿ ತನ್ನನ್ನು ಬಲಪಡಿಸಿಕೊಳ್ಳುವುದನ್ನು ಇಲ್ಲಿ ಓದುತ್ತೇವೆ. ಇಕ್ಕಟ್ಟಿನ ಸಮಯದಲ್ಲಿ ಬಳಲಿ ಹೋಗಬೇಡಿರಿ. ದೇವರ ವಾಕ್ಯಗಳನ್ನು ಓದಿರಿ, ಧ್ಯಾನಿಸಿರಿ, ನಮ್ಮ ದೇವರು ಕೊಡುವ ಬಲದಲ್ಲಿ ನಿಮ್ಮನ್ನು ನವೀಕರಿಸಿಕೊಳ್ಳಿರಿ.
- P. ಜಾಕೋಬ್ ಶಂಕರ್
ಪ್ರಾರ್ಥನಾ ಅಂಶ:
You tube, Twitter, what's app ಮೂಲಕ ಹೊರಬರುವ ದೈವಿಕ ಸಂದೇಶಗಳ ಮೂಲಕ ಕ್ರಿಸ್ತನನ್ನು ತಿಳಿಯದ ಜನರು ರಕ್ಷಣೆ ಹೊಂದುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482