By Village Missionary Movement
Sunday, 03-Oct-2021ಧೈನಂದಿನ ಧ್ಯಾನ(Kannada) – 03.10.2021 (Kids Special)
ಕ್ರಿಸ್ತನಿಗಾಗಿ ನೇರವಾಗಿ ನಿಲ್ಲು
"ನೀತಿವಂತರ ಮಾರ್ಗವು ಮಧ್ಯಾಹ್ನದವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ." - ಜ್ಞಾನೋಕ್ತಿ 4:18
Hai! ಪುಟಾಣಿಗಳೇ, ನಿಮಗೆ ಊರಿಗೆ ಹೋಗಬೇಕೆಂದರೆ ತುಂಬಾ ಸಂತೋಷತಾನೆ! ಅದರಲ್ಲೂ ನಿಮ್ಮ ಮಾಮ ಅಥವಾ ಅಜ್ಜಿಯ ಮನೆಗೆಲ್ಲಾ ಹೋದರೆ ನೀವು ಇನ್ನೂ Jolly ಆಗಿ ಇರುತ್ತೀರ ತಾನೇ.
ಅದರಂತೆಯೇ ದೀಪಕ್ ಎಂಬ ತಮ್ಮ ತನ್ನ ಮಾಮನ ಮನೆಗೆ ಹೋಗಿದ್ದನು. ಮಾಮನ ಮನೆಯಲ್ಲಿರುವ ಪುಟ್ಟ ತಮ್ಮನ ಬಳಿ ಸಂತೋಷದಿಂದ ಆಟವಾಡಿದನು. ಮಾಮ ಅವನನ್ನು ಅಂಗಡಿ ಬೀದಿ, park - ಗೆ ಮತ್ತು ಇನ್ನೂ ಅನೇಕ ಕಡೆ ಕರೆದುಕೊಂಡು ಹೋದರು. ಅವನಿಗೆ ಎಲ್ಲವು ತುಂಬಾ ಸಂತೋಷವಾಗಿತ್ತು. ಮಾಮ ದೀಪಕ್ ನ ಬಳಿ, “ದೀಪಕ್, ನೀನು ಚೆನ್ನಾಗಿ ಬೈಬಲ್ ಓದಿ ಪ್ರಾರ್ಥಿಸುತ್ತಿದ್ದೀಯಾ? ಕರ್ತನ ಮಗುವಾಗಿ ಜೀವಿಸುತ್ತಿದ್ದೀಯ?" ಎಂದು ಕೇಳಿದರು. ಅದಕ್ಕೆ ದೀಪಕ್, "ಸ್ನೇಹಿತರೊಂದಿಗೆ ಜಾಲಿಯಾಗಿ ಇದ್ದು ಬಿಟ್ಟು, ನಂತರ ಯೇಸುಕ್ರಿಸ್ತನ ಮಾರ್ಗದಲ್ಲಿ ನಡೆಯುತ್ತೇನೆ." ಎಂದನು. ಮಾಮ ಕೂಡ ತಲೆ ಆಡಿಸಿದರು.
ನಂತರ ಮಾಮ ಮತ್ತು ದೀಪಕ್ ಕಾರಿನಲ್ಲಿ ದೀಪಕ್ ನ ಊರಿಗೆ ಹೋದರು. ಊರಿನ ಬಳಿ ಎರಡು ಹಾದಿಗಳು ಬೇರ್ಪಡುತ್ತವೆ. ಒಂದು ಊರಿನೊಳಗೆ ಹೋಗುತ್ತದೆ. ಇನ್ನೊಂದು ಕಾಡಿನ ಕಡೆಗೆ ಹೋಗುತ್ತದೆ. ಮಾಮ ಆ ಕಾಡಿನ ದಾರಿಯಲ್ಲಿ ಕಾರನ್ನು ಓಡಿಸಿದರು. ದೀಪಕ್ ತನ್ನ ಮಾಮನಿಗೆ, "ಮಾಮ, ಈ ದಾರಿ ತಪ್ಪಾಗಿದೆ. ಇದು ಕಾಡಿಗೆ ಹೋಗುತ್ತದೆ. ಸರಿಯಾದ ಮಾರ್ಗವೂ ಅಲ್ಲ ” ಎಂದನು. ಅದಕ್ಕೆ ಮಾಮ "ನನಗೆ ಗೊತ್ತು! ಈ ಕಾಡು ತುಂಬಾ ಸುಂದರವಾಗಿದೆ. ಆದ್ದರಿಂದ ಸ್ವಲ್ಪ ದೂರ ಕಾಡಿನೊಳಗೆ ಹೋಗಿ, ಅದರ ಸೌಂದರ್ಯವನ್ನು ನೋಡಿ ಆನಂದಿಸಿ ಹಿಂತಿರುಗೋಣ ” ಎಂದರು. ಸೂರ್ಯ ಮುಳುಗಲಾರಂಭಿಸಿದ್ದಾನೆ. "ಮಾಮ, ಮಾಮ, ಇನ್ನು ಸ್ವಲ್ಪ ಹೊತ್ತಿನಲ್ಲಿ ಕತ್ತಲು ಆವರಿಸುತ್ತದೆ. ನನಗೆ ತುಂಬಾ ಭಯವಾಗುತ್ತಿದೆ. ಹಿಂತಿರುಗಿ ಹೋಗೋಣ ” ಎಂದನು. ಮಾಮ ಹೇಳಿದರು, "ಇಲ್ಲಿ ಭಯಾನಕ ಪ್ರಾಣಿಗಳೆಲ್ಲಾ ಇವೆ, ಯಾವುದಾದರೂ ಒಂದನ್ನಾದರು ನಾವು ನೋಡಿ ಬಿಟ್ಟು ಹೋಗೋಣ" ಎಂದರು.
ದೀಪಕ್ ಹೇಳಿದನು, "ಮಾಮ, ಆನೆ ಬಂದರೆ ಅದು ನಮ್ಮ ಕಾರಿನ ಮೇಲೆ ಬಿದ್ದು ಅದನ್ನೂ ಕೂಡ ಉರುಳಿಸಿ ಬಿಡುತ್ತದೆ. ಕಳೆದ ವಾರ ಚಿರತೆ, ಹುಲಿ ಒಂದು ಮರದ ಹಿಂದೆ ನಿಂತು ಇದ್ದಕ್ಕಿದ್ದಂತೆ ಜಿಗಿದು ಒಬ್ಬರನ್ನು ಸೀಳಿ ಕೊಂದು ಬಿಟ್ಟಿತು. ಬನ್ನಿ ಮಾಮ ಹಿಂತಿರುಗಿ ಹೋಗೋಣ ” ಎಂದನು.
ತಕ್ಷಣ ಮಾಮ ದೀಪಕ್ ನ ಬಳಿ, “ನೀನು ಮಾತ್ರ ಈ ಲೋಕದ ಸಂತೋಷವನ್ನು ಸ್ವಲ್ಪ ದಿನಗಳು ಅನುಭವಿಸಿ ಬಿಟ್ಟು, ನಂತರ ಕ್ರಿಸ್ತನ ಮಾರ್ಗದಲ್ಲಿ ನಡೆಯುತ್ತೇನೆ ಎಂದು ಹೇಳಿದೆಯಲ್ಲವೆ. ನೀನು ಹಿಂತಿರುಗಿ ಬರುವ ಹೊತ್ತಿಗೆ, ಅದು ನಿನ್ನ ಆತ್ಮವನ್ನು ನಾಶ ಮಾಡಿಬಿಡುತ್ತದೆ! ಆದ್ದರಿಂದ ಇಂದಿನಿಂದ ಯೇಸಪ್ಪನ ಮಗುವಾಗಿ ಇರುತ್ತೀಯ? ಎಂದು ಕೇಳಿದರು. ಆಗಲೇ ದೀಪಕ್ ತನ್ನ ತಪ್ಪನ್ನು ಗ್ರಹಿಸಿದನು.
ಪ್ರೀತಿಯ ತಮ್ಮ-ತಂಗಿ, ನೀವೂ ಕೂಡ ಯೇಸಪ್ಪನಿಗೆ ಇಷ್ಟವಾಗುವ ದಾರಿಯಲ್ಲಿ ನಡೆಯುತ್ತೀರ ತಾನೇ! Thank you. Holy life is a Jolly life.
- A. ಬ್ಯೂಲ
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482