Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.10.2021
Share:

By Village Missionary Movement

Friday, 01-Oct-2021

ಧೈನಂದಿನ ಧ್ಯಾನ(Kannada) – 01.10.2021

 

ತಾಯಿಯ ಬೋಧನೆ

 

 "...ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ." - ಜ್ಞಾನೋಕ್ತಿಗಳು 1: 8 

 

ಗ್ಲೆನ್ ಕನ್ನಿಂಗ್‌ಹ್ಯಾಮ್‌ ಎಂಬ ಚಿಕ್ಕ ಹುಡುಗನಿಗೆ ತಂದೆ ಇಲ್ಲ. ತಾಯಿಯ ಆರೈಕೆಯಲ್ಲಿ ಬೆಳೆದವನು. "ನಂಬುವವನಿಗೆ ಎಲ್ಲವೂ ಸಾಧ್ಯ" , "ನಂಬುವವನು ಹೆದರುವುದಿಲ್ಲ" ಎಂಬ ವಾಕ್ಯಗಳನ್ನು ಚಿಕ್ಕ ವಯಸ್ಸಿನಲ್ಲೇ ಅವನ ಮನಸ್ಸಿನಲ್ಲಿ ಆಳವಾಗಿ ಬಿತ್ತಿದ್ದರು ಅವರ ತಾಯಿ. ಗ್ಲೆನ್ ಗೆ ಒಲಿಂಪಿಕ್ ಫುಟ್ಬಾಲ್ ಚಾಂಪಿಯನ್ ಆಗಲು ಆಸೆ, "ಎಟುಕದ ಹಣ್ಣಿಗೆ ಆಶಿಸಬೇಡ" ಎಂದು ಹೇಳುವ ಬದಲು, ಅವನ ತಾಯಿ "ಕರ್ತನಲ್ಲಿ ನಂಬಿಕೆಯಿಂದಿರು. ಅವರಿಗೆ ಮೆಚ್ಚುಗೆಯಾದ, ಒಳ್ಳೆಯಕಾರ್ಯಗಳನ್ನು ನಿನ್ನಿಂದಾಗುವಷ್ಟು ಮಾಡು, ಕರ್ತನು ನಿನ್ನ ಹೃದಯದ ಬಯಕೆಯನ್ನು ನೆರವೇರಿಸುತ್ತಾರೆ" ಎಂದು ಹೇಳಿದರು.

 

ಐರ್ಲೆಂಡ್‌ನಲ್ಲಿರುವ ಒಂದು ಸಣ್ಣ ಹಳ್ಳಿಯಲ್ಲಿ ಒಂದು ಪ್ರಾಥಮಿಕ ಶಾಲೆಯಲ್ಲಿ 4 ನೇ ತರಗತಿ ಓದುತ್ತಿದ್ದನು ಗ್ಲೆನ್. ಬಡ ವಿದ್ಯಾರ್ಥಿಗಳು ಮಾತ್ರವೇ ಆ ಶಾಲೆಯಲ್ಲಿ ಓದುತ್ತಾರೆ. ಚಳಿಯನ್ನು ತಡೆದುಕೊಳ್ಳಲು ಸರಿಯಾದ ಬಟ್ಟೆ ಅವರ ಬಳಿ ಇಲ್ಲದ ಕಾರಣ ಅವರು ಚಳಿಯಿಂದಾಗಿ ತರಗತಿಯಲ್ಲಿ ನಡುಗುತ್ತಿದ್ದರು. ಮಧ್ಯಾಹ್ನ 1 ಗಂಟೆಗೆ School ಮುಗಿದ ಕೂಡಲೇ ಗ್ಲೆನ್ ಒಣ ಕಡ್ಡಿಗಳನ್ನು ಆರಿಸಿಕೊಂಡು ಅವುಗಳನ್ನು ಒಂದು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ಭದ್ರಪಡಿಸಿ, ಬೆಳಿಗ್ಗೆ ಬೇಗನೆ ಎದ್ದು 7 ಗಂಟೆಗೆ ಶಾಲೆಗೆ ಹೋಗಿ ಮಧ್ಯದಲ್ಲಿ ಕಡ್ಡಿಗಳನ್ನು ಹಾಕಿ ಬೆಂಕಿ ಹಚ್ಚಿ ಆ ಪುಟ್ಟ ಕಟ್ಟಡವನ್ನು ಬೆಚ್ಚಗೆ ಮಾಡಿ ಬಿಡುತ್ತಿದ್ದನು. ಇದರಿಂದಾಗಿ ಬಡ ವಿದ್ಯಾರ್ಥಿಗಳು ಸಂತೋಷಪಡುತ್ತಿದ್ದದ್ದು ಅವನ ಮನಸ್ಸಿಗೆ ತೃಪ್ತಿಯನ್ನುಂಟು ಮಾಡುತ್ತಿತ್ತು. ದೇವರಿಗೆ ಕೃತಜ್ಞತೆ ಹೇಳುತ್ತಿದ್ದನು.

 

ಒಂದು ದಿನ ಅವನು ಬೆಂಕಿಯನ್ನು ಹಚ್ಚಿಬಿಟ್ಟು ಬೆಳಿಗ್ಗೆ ಬೇಗನೆ ಎದ್ದಿದ್ದ ಆಯಾಸದಿಂದಾಗಿ ಬೆಂಚಿನ ಮೇಲೆ ಮಲಗಿ ನಿದ್ದೆಮಾಡಿ ಬಿಟ್ಟನು. ಗಾಳಿಯಲ್ಲಿ ಅಲುಗಾಡುತ್ತಿದ್ದ ಪರದೆಗೆ ಬೆಂಕಿ ಹೊತ್ತಿಕೊಂಡು ಗ್ಲೆನ್ ಗೆ ಒಂದು ದೊಡ್ಡ ಅಪಘಾತ ಸಂಭವಿಸಿದ್ದರಿಂದ ಅವನ ಕಾಲುಗಳು ನಡೆದಾಡುವ ಶಕ್ತಿಯನ್ನೇ ಕಳೆದುಕೊಂಡಿತು. ಚಕ್ರದ ಕುರ್ಚಿಯಲ್ಲಿ ಶಾಲೆಗೆ ಬಂದನು. ಎರಡು ತಿಂಗಳುಗಳ ನಂತರ ಅವನು ದೇವರ ಬಳಿ ಪ್ರಾರ್ಥಿಸಿಬಿಟ್ಟು ನಂಬಿಕೆಯಿಂದ ಗಾಡಿಯಿಂದ ಜಿಗಿದು ಬೇಲಿಯನ್ನು ಹಿಡಿದು ನಡುಗುತ್ತಾ ನಿಂತನು. "ದೇವರಿಗೆ ಅಸಾಧ್ಯವಾದದ್ದು ಒಂದೂ ಇಲ್ಲ" ಎಂದು ತಾಯಿ ಹೇಳಿ ಕೊಟ್ಟಿದ್ದ ವಾಗ್ದಾನವನ್ನು ಹೇಳುತ್ತಾ, ಹೇಳುತ್ತಾ ಕಠಿಣವಾದ ತರಬೇತಿ ಹೊಂದಿದ ನಂತರ, ಒಲಿಂಪಿಕ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಎರಡು ಗೋಲ್ ಹಾಕಿ ಚಾಂಪಿಯನ್ ಆಗಿ ಬಿಟ್ಟನು.

 

ಪ್ರಿಯರೇ! ಪ್ರಪಂಚವೇ ಆಶ್ಚರ್ಯವಾಗಿ ನೋಡುವ ಮಟ್ಟಕ್ಕೆ ಗ್ಲೆನ್ ಬೆಳೆದದ್ದಕ್ಕೆ ಕಾರಣವೇನೆಂದರೆ, ಆತನ ತಾಯಿ ಆತನಿಗೆ ಬಾಲ್ಯದಲ್ಲಿ ಕಲಿಸಿದ ಬೋಧನೆ, ನಂಬಿಕೆಯ ವಾಕ್ಯಗಳು ಮತ್ತು ಕರ್ತನಿಗೆ ಇಷ್ಟವಾಗಿ ನಡೆದುಕೊಳ್ಳುವುದು. ಹೌದು, ನಮ್ಮ ಜೀವನ ಆಶೀರ್ವದಿಸಲ್ಪಡಲು, ಹೆಚ್ಚಿಸಲ್ಪಡಲು ಹೆತ್ತವರ ಮಾತುಗಳಿಗೆ ವಿಧೇಯರಾಗುವುದು ಅತ್ಯಗತ್ಯ, ಇದನ್ನು ಓದುತ್ತಿರುವ ನಾವೂ ಕೂಡ ಹೆತ್ತವರ ಮಾತುಗಳಿಗೆ ಕಿವಿಗೊಡೋಣ, ಆಶೀರ್ವಾದವಾಗಿ ಜೀವಿಸೋಣ.

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino