By Village Missionary Movement
Thursday, 30-Sep-2021ಧೈನಂದಿನ ಧ್ಯಾನ(Kannada) – 30.09.2021
ಕೊರತೆಯುಳ್ಳ ಮಾರ್ಗದರ್ಶಕ
"...ನಿನ್ನ ಹೆಸರಿನ ನಿಮಿತ್ತ ನನ್ನನ್ನು ನಡಿಸು; ನನಗೆ ಮಾರ್ಗ ದರ್ಶಕನಾಗಿರು." - ಕೀರ್ತನೆ 31:3
ಸಹೋ. ಭಗತ್ ಸಿಂಗ್ ಕೆನಡಾ ದೇಶದ ವಿನ್ನಿಪೆಗ್ ಎಂಬ ನಗರದಲ್ಲಿ ಒಂದು ಆರಾಧನೆಯಲ್ಲಿ ಭಾಗವಹಿಸಿ ಹೊರಡುವ ಸಮಯದಲ್ಲಿ ಪರಿಚಯವೇ ಇಲ್ಲದ ಒಬ್ಬ ವ್ಯಕ್ತಿ ಅವಸರವಾಗಿ ಆತನ ಬಳಿಗೆ ಓಡಿ ಬಂದು, ಅವರ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡರು. "ಸಹೋದರನೇ, ನೀವೇಕೆ ಭಾರತಕ್ಕೆ ಹೋಗಿ ಅಲ್ಲಿ ಸುವಾರ್ತೆಯನ್ನು ಪ್ರಕಟಿಸಬಾರದು?" ಎಂದು ಕೇಳಿದರು. ಅದಕ್ಕೆ ಭಗತ್ ಸಿಂಗ್ “ನಾನೊಬ್ಬ ಇಂಜಿನಿಯರ್, ನಾನು ಹಲವು ವರ್ಷಗಳಿಂದ ಇಂಜಿನಿಯರಿಂಗ್ ಓದಿದ್ದೇನೆ. ಅದಲ್ಲದೆ ನಾನು ವಾಕ್ಚಾತುರ್ಯವಿಲ್ಲದವನು, ನನ್ನ ಮಾತೂ ನಾಲಿಗೆಯೂ ಮಂದವಾಗಿವೆ. ಒಂದು ಸಣ್ಣ ಗುಂಪಿನ ಮುಂದೆ ನಿಂತು ಮಾತನಾಡಲು ಸಹ ನನ್ನಿಂದ ಸಾಧ್ಯವಿಲ್ಲ. ನನಗೆ ವೇದಿಕೆಯ ಭಯ, ಸಂಕೋಚ, ತೊಡೆಗಳ ನಡುಕ, ನಾಲಿಗೆ ಮಂದವಾಗಿದೆ ಹೀಗೆಲ್ಲಾ ಇರುವ ನಾನು ಹೇಗೆ ಬೋಧಕನಾಗಲು ಸಾಧ್ಯ? " ಎಂದು ಹೇಳಿದರು. ಆದರೆ ಕೊನೆಗೆ ದೇವರು ಆತನನ್ನು ಲಕ್ಷಾಂತರ ಜನರಿಗೆ ಆಶೀರ್ವಾದಕರವಾಗಿಯೂ ಕರ್ತನಲ್ಲಿ ಅನೇಕರನ್ನು ಮುನ್ನಡೆಸುವ ಪರಿಶುದ್ಧ ಮಾರ್ಗದರ್ಶಕನಾಗಿಯೂ ಮಾರ್ಪಡಿಸಿ ಬಲವಾಗಿ ಉಪಯೋಗಿಸಿದರು.
ಪರಿಶುದ್ಧ ಗ್ರಂಥದಲ್ಲಿ ಮೋಶೆ ಎಂಬ ದೇವ ಮನುಷ್ಯನು ವಾಕ್ಚಾತುರ್ಯವಿಲ್ಲದವನು ಮತ್ತು ಮಂದ ನಾಲಿಗೆಯೆಂಬ ಕೊರತೆಯುಳ್ಳವರು. ಆದರೆ ಕರ್ತನೋ ಇವರನ್ನು ಲಕ್ಷಾಂತರ ಇಸ್ರಾಯೇಲ್ ಜನರನ್ನು ಮುನ್ನಡೆಸುವ ಒಬ್ಬ ನಾಯಕ, ಮಾರ್ಗದರ್ಶಕ ಮತ್ತು ಶಿಕ್ಷಕನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಮೋಶೆಯ ಕೈಯಿಂದ ಕರ್ತನು ಇಸ್ರಾಯೇಲ್ ಜನರ ಮುಂದೆ ಅನೇಕ ವಿಧವಾದ ಅದ್ಭುತ, ಅತಿಶಯ ಕಾರ್ಯಗಳನ್ನು ಮಾಡಿದರು. ಮೋಶೆ ದೇವರಿಂದ ಶಾಂತ ಗುಣವುಳ್ಳವನು ಎಂಬ ಬಿರುದನ್ನು ಪಡೆದಿದ್ದರೂ ಕೊನೆಗೆ ಕಾನಾನ್ ದೇಶವನ್ನು ಸ್ವತಂತ್ರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಾರಣವೇನೆಂದರೆ, ಕರ್ತನು ಮೋಶೆಗೆ ಬಂಡೆಯನ್ನು ನೋಡಿ ಮಾತನಾಡಲು ಹೇಳುತ್ತಾರೆ. ಆದರೆ ಅವರು ತನ್ನ ಕೋಲಿನಿಂದ ಎರಡು ಬಾರಿ ಬಂಡೆಯನ್ನು ಹೊಡೆದರು. ಮೋಶೆ ತನ್ನ ತಾಳ್ಮೆಯನ್ನು ಕಳೆದುಕೊಂಡು ಕೋಪವನ್ನು ಹೊರಪಡಿಸಿದರು ಇದರಿಂದಾಗಿ ಅವರು ಕಾನಾನ್ ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.
ಇದನ್ನು ಓದುತ್ತಿರುವ ನೀವು ನಿಮ್ಮ ಕುಟುಂಬವನ್ನು ಮುನ್ನಡೆಸಲು ಮಾರ್ಗದರ್ಶಕರಾಗಿ, ಶಿಕ್ಷಕರಾಗಿ ಮತ್ತು ನಾಯಕರಾಗಿ ಇರಬಹುದು. ನಮ್ಮೊಳಗೆ ಕೋಪ, ಕಹಿ ಮತ್ತು ದ್ವೇಷ ಹುಟ್ಟಿದಾಗ ತಕ್ಷಣವೇ ಸರಿಮಾಡಿಕೊಳ್ಳೋಣ. ಇಲ್ಲದಿದ್ದರೆ, ದೊಡ್ಡ ಆಶೀರ್ವಾದವನ್ನು ಕಳೆದುಕೊಳ್ಳ ಬೇಕಾಗುತ್ತದೆ. ಮತ್ತು ದೇವರು ನಮ್ಮಲ್ಲಿ ಪ್ರತಿಯೊಬ್ಬರನ್ನು ಈ ಪ್ರಪಂಚದ ಮಾರ್ಗದರ್ಶಕ ಮತ್ತು ಶಿಕ್ಷಕರನ್ನಾಗಿ ಮಾಡಿದ್ದಾರೆ. ಕತ್ತಲೆಯಲ್ಲಿ ಮತ್ತು ಪಾಪದಲ್ಲಿ ಜೀವಿಸುತ್ತಿರುವ ಜನರನ್ನು ವಿಮೋಚಿಸುವ ಮಾರ್ಗದರ್ಶಕರಾಗಿಯೂ, ಆತನ ಹೆಸರನ್ನು ಪ್ರಕಟಿಸುವ ಗುರುಗಳಾಗಿಯೂ ನಮ್ಮನ್ನು ಇಟ್ಟಿದ್ದಾರೆ. ನಾವು ಕೊರತೆಯುಳ್ಳ ಮಾರ್ಗದರ್ಶಕರಾಗಿದ್ದರೂ ದೇವರು ನಮ್ಮನ್ನು ಕೊರತೆಯಿಲ್ಲದ ಮಾರ್ಗದರ್ಶಕರಾಗಿ ಜೀವಿಸುವಂತೆ ಖಂಡಿತವಾಗಿಯೂ ನಮಗೆ ಸಹಾಯ ಮಾಡುತ್ತಾರೆ.
- Mrs. ಶಕ್ತಿ ಶಂಕರರಾಜ್
ಪ್ರಾರ್ಥನಾ ಅಂಶ:
ನಮ್ಮ ಸೇವೆಯಲ್ಲಿ ಹೊಸದಾಗಿ ನಮ್ಮೊಂದಿಗೆ ಸೇರಿರುವ ಸೇವಕರಿಗೆ ದೇವರು ಏಕೈಕ ದರ್ಶನವನ್ನು ದಯಪಾಲಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482