By Village Missionary Movement
Wednesday, 29-Sep-2021ಧೈನಂದಿನ ಧ್ಯಾನ(Kannada) – 29.09.2021
ಪೋಷಕರ ಗಮನಕ್ಕೆ
"ಎಲ್ಲಾ ವಿಷಯಗಳಲ್ಲಿ ನಿನ್ನನ್ನು ಸತ್ಕಾರ್ಯಗಳ ಮಾದರಿಯಾಗಿ ತೋರಿಸಿಕೊ..." - ತೀತನಿಗೆ 2:7
ಒಂದು ಕಾಲೇಜಿನಲ್ಲಿ, ಬಡ ಕುಟುಂಬದ ಇಬ್ಬರು ಸಹೋದರರು ವ್ಯಾಸಂಗ ಮಾಡುತ್ತಿದ್ದರು. ಅಣ್ಣನು ತನ್ನ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸದೆ, ಮದ್ಯದ ಚಟಕ್ಕೆ ದಾಸನಾಗಿದ್ದನು. ಕುಟುಂಬದವರನ್ನು ಬೆದರಿಸಿ ಹಣ ತೆಗೆದುಕೊಂಡು ಕುಡಿಯುವುದು ಅವನಿಗೆ ಅಭ್ಯಾಸವಾಗಿತ್ತು. ಆದರೆ ಅವನ ತಮ್ಮನಿಗೆ ಓದುವುದರಲ್ಲಿ ತುಂಬಾ ಆಸಕ್ತಿ ಇತ್ತು ಮತ್ತು ಅವನಿಗೆ ಕಾಲೇಜಿನಲ್ಲಿ ಒಳ್ಳೆಯ ಗೌರವವಿತ್ತು. ಕಾಲೇಜು ಪ್ರಾಧ್ಯಾಪಕರಿಗೆ ಮಾತ್ರ ಆಶ್ಚರ್ಯ. ಒಂದೇ ಕುಟುಂಬದಲ್ಲಿ ಒಂದೇ ಪರಿಸ್ಥಿತಿಯಲ್ಲಿ ಬೆಳೆದ ಇಬ್ಬರಿಗೂ ಇಷ್ಟೊಂದು ವ್ಯತ್ಯಾಸವಾ, ತಮ್ಮ ಒಳ್ಳೆಯವನಾಗಿದ್ದಾನೆ, ಅಣ್ಣ ಊರೇ ನಿಂದಿಸುವಷ್ಟು ಕೆಟ್ಟವನಾಗಿದ್ದಾನೆ ಎಂದು. ಪ್ರಾಧ್ಯಾಪಕರು ಇಬ್ಬರನ್ನೂ ಕರೆದು, "ನಿಮ್ಮ ನಡವಳಿಕೆಗೆ ಯಾರು ಹೊಣೆ?" ಎಂದು ಕೇಳಿದಾಗ, ಇಬ್ಬರೂ ಒಂದೇ ಉತ್ತರವನ್ನು ನೀಡಿದರು. "ನನ್ನ ವರ್ತನೆಗೆ ನನ್ನ ತಂದೆಯೇ ಕಾರಣ." "ಅಪ್ಪ ಏನು ಮಾಡಿದರು?" ಎಂದು ಅಣ್ಣನ ಬಳಿ ಕೇಳಿದಾಗ, “ನನಗೆ ವಿವರ ತಿಳಿದ ದಿನದಿಂದ ಹಗಲು ರಾತ್ರಿ ಕುಡಿದು ಬಂದು ಜಗಳವಾಡುತ್ತಾರೆ. ನಾನು ತಿಂದಿರುವ ಏಟುಗಳ ಲೆಕ್ಕವೇ ಇಲ್ಲ. ಅವರ ಮಗನಾಗಿರುವ ನಾನು ಹೇಗಿರುತ್ತೇನೆ. ಹಾಗಾಗಿ ನಾನು ಕೂಡಾ ಕುಡುಕನಾಗಿಬಿಟ್ಟೆ” ಎಂದನು. ತಮ್ಮನ ಬಳಿ ಕೇಳಿದಾಗ, ಇದೇ ಉತ್ತರವನ್ನು ನೀಡಿದನು. "ಮೋಸವಾದ ತಂದೆಗೆ ಮಗನಾಗಿರುವ ನಾನು ಅವರಂತೆ ಮೋಸವಾದ ವ್ಯಕ್ತಿಯಾಗಬಾರದು ಎಂದು ಭಾವಿಸುತ್ತೇನೆ. ನನ್ನ ವರ್ತನೆಗೆ ನನ್ನ ತಂದೆಯೇ ಸಂಪೂರ್ಣ ಕಾರಣ" ಎಂದನು.
ನನ್ನ ಪ್ರೀತಿಯ ಪೋಷಕರೇ, ನಿಮ್ಮ ಮಕ್ಕಳನ್ನು ನೀವು ಹೇಗೆ ಬೆಳೆಸುತ್ತಿದ್ದೀರ? ನಾವು ಧ್ಯಾನ ಮಾಡಿದ ಮೇಲ್ಕಂಡ ವಿಷಯದಲ್ಲಿ ಹೇಳಲ್ಪಟ್ಟಿರುವಂತೆ ನೀವು ಮಕ್ಕಳ ಕಣ್ಣ ಮುಂದೆ ಯಾವ ರೀತಿಯ ಸಾಕ್ಷಿಯಾಗಿದ್ದೀರಿ? ಪೋಷಕರೇ, ನಿಮ್ಮ ಮಕ್ಕಳು ನಿಮ್ಮನ್ನು ನೋಡುತ್ತಾ ಬೆಳೆಯುತ್ತಿದ್ದಾರೆ. ನಿಮ್ಮ ನಡತೆ ಹೇಗಿದೆಯೋ ಹಾಗೆಯೇ ನಿಮ್ಮ ಮಕ್ಕಳು ಕೂಡ ಇರುತ್ತಾರೆ. ನಿಮ್ಮ ಮಕ್ಕಳಿಗೆ ನೀವು ಪಕ್ಷಪಾತ ತೋರಿಸುತ್ತಿದ್ದೀರಾ? ಇದು ತುಂಬಾ ತಪ್ಪು. ನಿಮಗೆ ಎಷ್ಟು ಮಕ್ಕಳಿದ್ದರೂ ಸರಿ, ಅವರನ್ನು ಸಮಾನವಾಗಿ ಬೆಳೆಸಲು ಅಭ್ಯಾಸ ಮಾಡಿಕೊಳ್ಳಿರಿ. ನಿಮ್ಮ ಮಕ್ಕಳು ಕೆಟ್ಟದ್ದನ್ನು ಮಾಡಲು ಅಲ್ಲ, ಒಳ್ಳೆಯದನ್ನು ಮಾಡಲು ಮಾದರಿಯಾಗಿರಿ, ಅದರಂತೆ ಮಕ್ಕಳೂ ಬದುಕಲು ಕಲಿಸಿಕೊಡಿ. ಇದರಿಂದಾಗಿ ದೈವಿಕ ಸಂತತಿಯನ್ನು ಹೊಂದಲು ಸಾಧ್ಯ. ಏಕೆಂದರೆ ಒಂದು ಮಗು ಒಳ್ಳೆಯ ರೀತಿಯಲ್ಲಿ ಮತ್ತು ಕೆಟ್ಟ ರೀತಿಯಲ್ಲಿ ವರ್ತಿಸಲು ಪೋಷಕರೇ ಕಾರಣ. ಆದ್ದರಿಂದ ಪೋಷಕರೇ! ನಿಮ್ಮ ಮಕ್ಕಳನ್ನು ಯಾವ ರೀತಿಯಲ್ಲಿ ಬೆಳೆಸಲಿದ್ದೀರ, ನಿಮ್ಮ ಮಕ್ಕಳ ಮುಂದೆ ಉತ್ತಮ ಮಾದರಿಯಾಗಿದ್ದು ಬದುಕಿ ತೋರಿಸಿರಿ. ಕರ್ತನು ನಿಮ್ಮನ್ನು ಆಶೀರ್ವದಿಸಲಿ. ಆಮೆನ್ ....
- Mrs. ಎಸ್ತೆರ್ ಗಾಂಧಿ
ಪ್ರಾರ್ಥನಾ ಅಂಶ:
ನಮ್ಮ ರಾಕ್‌ಲ್ಯಾಂಡ್ ಬೈಬಲ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ, ಅವರು ದೇವರ ಕೈಗಳಲ್ಲಿ ಒಂದು ಸಾಧನವಾಗಿ ಉಪಯೋಗವಾಗಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482