Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.09.2021
Share:

By Village Missionary Movement

Tuesday, 28-Sep-2021

ಧೈನಂದಿನ ಧ್ಯಾನ(Kannada) – 28.09.2021

 

ರೂಪಿಸಲು ಬಿಟ್ಟುಕೊಡು 

 

"ನಾನು ನಿನ್ನನ್ನು ಗರ್ಭದಲ್ಲಿ ರೂಪಿಸುವದಕ್ಕೆ ಮುಂಚೆ ನಿನ್ನನ್ನು ತಿಳಿದಿದ್ದೆನು;..." - ಯೆರೆಮಿಯ 1:5

 

ಒಬ್ಬ ರೈತ ತನ್ನ ಭೂಮಿಯನ್ನು ಎರಡು ಬಾರಿ ಉಳುಮೆ ಮಾಡುತ್ತಿದ್ದರು. ಇದನ್ನು ನೋಡಿದ ಪಟ್ಟಣದ ನಿವಾಸಿಯೊಬ್ಬರು ಹೇಳಿದರು, "ನೀವು ಈಗಾಗಲೇ ಉಳುಮೆ ಮಾಡಿದ್ದೀರಲ್ಲಾ ಪುನಃ ಏಕೆ ಎರಡನೇ ಬಾರಿ ಕೂಡ ಉಳುಮೆ ಮಾಡಿ ನಿಮ್ಮ ದುಡಿಮೆ ಮತ್ತು ಸಮಯವನ್ನು ವ್ಯರ್ಥ ಮಾಡುತ್ತಿದ್ದೀರಿ" ಎಂದರು. ಅದಕ್ಕೆ ಆ ರೈತ, “ನಾನು ಮೊದಲ ಸಲ ಉಳುಮೆ ಮಾಡಿದಾಗ, ಕೆಲವು ಪ್ರದೇಶಗಳಲ್ಲಿ ಮಣ್ಣು ಬಿಗಿಯಾಗಿತ್ತು. ಹೀಗಾಗಿ ನಾನು ಬಿತ್ತಿದ ಬೀಜವು ಅದರ ಪೂರ್ಣ ಫಲವನ್ನು ಕೊಡಲು ಸಾಧ್ಯವಾಗದೇ ಹೋಗುತ್ತದೆ. ಆದರೆ ಎರಡನೇ ಉಳುಮೆಯ ನಂತರ ಅದರ ಸ್ಥಿತಿ ಬದಲಾಗಿ ಬಿತ್ತಿದ ಬೀಜಗಳು ಸುಲಭವಾಗಿ ಬೇರು ಬಿಟ್ಟು ಮೊಳಕೆಯೊಡೆದು ಉತ್ತಮವಾದ ಫಲಕೊಡಲು ಸಾಧ್ಯ” ಎಂದರು.

 

ಕಣ್ಣೀರಿನ ಪ್ರವಾದಿ ಎಂದು ನಾವು ಕರೆಯುವ ಯೆರೆಮಿಯ ನನ್ನು, ದೇವರು ತಾಯಿಯ ಗರ್ಭದಲ್ಲಿ ರೂಪಿಸುವುದಕ್ಕಿಂತ ಮುಂಚೆಯೇ ಆರಿಸಿಕೊಂಡು ಪರಿಶುದ್ಧಗೊಳಿಸಿ ಜನರಿಗೆ ಅವರನ್ನು ಪ್ರವಾದಿಯಾಗಿ ರೂಪಿಸಿ ಕಳುಹಿಸಿದರು. ಅವನು ಚಿಕ್ಕ ಮಗುವಾಗಿದ್ದಾಗಲೇ, ರಾಜ್ಯಗಳನ್ನು ಕಟ್ಟಲು, ಸ್ಥಾಪಿಸಲು, ಉರುಳಿಸಲು ಮತ್ತು ಹಿಡಿಯಲು ದೇವರು ಅವನಿಗೆ ಅಧಿಕಾರವನ್ನು ಕೊಟ್ಟರು. ದೇಶದ ಜನರು ಪಾಪ ಮಾಡಿದಾಗಲೆಲ್ಲಾ ಇವರು ಎಚ್ಚರಿಸುತ್ತಿದ್ದರು. ಆದರೆ ಯಾರೂ ಕೂಡ ಇವರು ಹೇಳುತ್ತಿದ್ದ ಮಾತನ್ನು ಕೇಳಲಿಲ್ಲ. ಬದಲಾಗಿ, ಅವರಿಗೆ ಚಿತ್ರಹಿಂಸೆ ಕೊಟ್ಟು ಭಾದಿಸುತ್ತಿದ್ದರು. ಹಾಗೆ ಮಾಡುವಾಗ ಅವರು ಜನರ ಮೇಲೆ ದ್ವೇಷವನ್ನು ತೋರಿಸದೆ ಅವರನ್ನು ದೇವರ ಕೋಪದಿಂದ ಬಿಡಿಸಲು ಕೊನೆಯವರೆಗೂ ಹೋರಾಡಿದರು. ಅವರಿಗಾಗಿ ಕಣ್ಣೀರು ಬಿಟ್ಟು ಅತ್ತು ಗೋಳಾಡಿದರು. ಕೊನೆಯವರೆಗೂ ಅವರನ್ನು ದೇವರ ವಾಕ್ಯಗಳಿಂದ ಎಚ್ಚರಿಸಿದರು. ಇದೇ ದೇವರು ಬಹಳ ಇಷ್ಟವಾಗಿ ಎದರುನೋಡುವ ಗುಣಲಕ್ಷಣವಾಗಿದೆ.

 

ಪ್ರೀತಿಯ ದೇವರ ಮಗುವೇ, ನಿನ್ನನ್ನು ಕೂಡ ದೇವರು ರೂಪಿಸುವಾಗ ಕೆಲವು ಕಠಿಣವಾದ ಪರಿಸ್ಥಿತಿಗಳಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ. ಇವೆಲ್ಲವೂ ನಿನ್ನ ಮೂಲಕ ದೇಶದಲ್ಲಿ ಮಹಿಮೆಯಾದ ಕಾರ್ಯಗಳನ್ನು ಮಾಡುವುದಕ್ಕಾಗಿಯೇ ಎಂಬುದನ್ನು ಅರಿತುಕೋ. ನೀನು ದಿಗ್ಭ್ರಾಂತನಾಗಿ ಆ ಇಕ್ಕಟ್ಟಾದ ಪರಿಸ್ಥಿತಿಯಲ್ಲಿ ಕರ್ತನೇ ನಿಮ್ಮ ಚಿತ್ತದಂತೆಯೇ ಆಗಲಿ ಎಂದು ನಿನ್ನನ್ನು ಸಮರ್ಪಿಸುವಾಗ ಆ ಭೂಮಿಯಂತೆ ನಾವೂ ಕೂಡ ಉತ್ತಮ ಫಲಗಳನ್ನು ಕೊಡಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಯೆರೆಮಿಯನಂತೆ ಮತ್ತೊಬ್ಬರಿಗಾಗಿ ಅತ್ತು ಪ್ರಾರ್ಥಿಸುವ ಶ್ರೇಷ್ಠವಾದ ಗುಣವು ನಮ್ಮಲ್ಲಿ ರೂಪುಗೊಳ್ಳುತ್ತದೆ. ಇದನ್ನೆಲ್ಲಾ ನನ್ನಿಂದ ಸಹಿಸಲು ಸಾಧ್ಯವಿಲ್ಲ ಎಂದು ನಾವು ಹೇಳುವುದಾದರೆ ನಮ್ಮಿಂದ ದೇವರಿಗೆ ಯಾವ ಪ್ರಯೋಜನವೂ ಇಲ್ಲ.

- K. ಮನೋಜಕುಮಾರ್

 

ಪ್ರಾರ್ಥನಾ ಅಂಶ:

ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ನಮ್ಮ ಸೇವೆಯ ಕಾರ್ಯಕ್ರಮಗಳ ಮೂಲಕ ದೇವರು ಅನೇಕರನ್ನು ಮುಟ್ಟುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş