Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.09.2021
Share:

By Village Missionary Movement

Monday, 27-Sep-2021

ಧೈನಂದಿನ ಧ್ಯಾನ(Kannada) – 27.09.2021

 

ನಮ್ಮ ಮನೆಯನ್ನು ನವೀಕರಿಸೋಣ

 

"...ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ..." - ಪ್ರಕಟಣೆ. 21:5

 

ತುಂಬಾ ಮೋಸವಾದ ಸ್ಥಿತಿಯಲ್ಲಿ ಆ ಮನೆ ಕಾಣಲ್ಪಟ್ಟಿತು. ಆ ಮನೆಯನ್ನು ನೋಡಿಕೊಂಡು ಹೋಗುವ ಪ್ರತಿಯೊಬ್ಬರೂ ಅಯ್ಯೋ ಪಾಪ ಎಂದು ಅಂದುಕೊಳ್ಳುತ್ತಿದ್ದರು. ಎಷ್ಟು ಒಳ್ಳೆಯ ಮನೆ, ಆದರೆ ಅದರ ಮಾಲೀಕರು ಅದನ್ನು ಸರಿಯಾಗಿ ನಿರ್ವಹಿಸದ ಕಾರಣದಿಂದಾಗಿ ಅದು ಅವ್ಯವಸ್ಥೆಯಾಗಿದೆ ಎಂದು ಮಾತಾಡಿಕೊಳ್ಳುತ್ತಿದ್ದರು. ಆ ಮನೆಯನ್ನು ಇನ್ನೊಬ್ಬ ವ್ಯಕ್ತಿ ತೆಗೆದುಕೊಂಡರು. ಎಲ್ಲರೂ "ಈ ಮನೆಯನ್ನಾ ತೆಗೆದುಕೊಳ್ಳುತ್ತಿದ್ದೀಯ?" ಎಂದು ಕೇವಲವಾಗಿ ಮಾತನಾಡಿದರು. ಆದರೆ ಆ ಹೊಸ ಮಾಲೀಕನು ಮನೆಯನ್ನು ರಿಪೇರಿ ಮಾಡಲು ಆರಂಭಿಸಿದರು. ಆಗ ಅದು ಮೊದಲು ಇದ್ದದ್ದಕ್ಕಿಂತ ಮೋಸವಾಗಿ ಹೊರಗೆ ಕಾಣುತ್ತಿತ್ತು. ಅದನ್ನು ನೋಡುವವರೆಲ್ಲಾ ಹೊಸ ಮಾಲೀಕನನ್ನು ಹುಚ್ಚನಂತೆ ನೋಡುತ್ತಿದ್ದರು. ಕೆಲವು ತಿಂಗಳುಗಳ ನಂತರ ಆ ಮನೆಯನ್ನು ಹಾದು ಹೋಗುವವರು ಆ ಮನೆಯನ್ನು ಮೆಚ್ಚಿಕೊಳ್ಳಲಾರಂಭಿಸಿದರು.

 

ಹೌದು, ಆ ಪಾಳುಬಿದ್ದ ಮೋಸವಾದ ಮನೆ ಹೊಸ ಮಾಲೀಕನ ಕೈಗೆ ಬಂದ ನಂತರ ಅವರದನ್ನು ಅನೇಕರು ನೋಡಿ ವಿಸ್ಮಯ ಹೊಂದುವ ರೀತಿಯಲ್ಲಿ ಬದಲಾಯಿಸಿಬಿಟ್ಟರು. ಇಂದು ಇದನ್ನು ಓದುತ್ತಿರುವ ನನ್ನ ಪ್ರಿಯರೇ ನಿಮ್ಮನ್ನೂ ದೇವರು ಅಧಿಕವಾಗಿ ಪ್ರೀತಿಸುತ್ತಿದ್ದಾರೆ. ದೇವರ ಚಿತ್ತವಿಲ್ಲದೇ ನೀವು ಇದನ್ನು ಓದಲು ಸಾಧ್ಯವೇ ಇಲ್ಲ. ದಾವೀದನು ಗೊಲ್ಯಾತನ ಮುಂದೆ ನಿಂತಾಗ ನಾನು ಇಲ್ಲಿಗೆ ಬಂದದ್ದಕ್ಕೆ ಪ್ರಯೋಜನ ವಿಲ್ಲವೇ? ಎಂದು ಕೇಳಿದನು. ಹೌದು ಇದನ್ನು ಓದುತ್ತಿರುವ ನಿಮಗೂ ಇಂದು ಒಂದು ಪ್ರಯೋಜನವಿದೆ. ನಾನು ಮೋಸವಾದವನು (ಳು) ಇನ್ನು ನನ್ನ ಜೀವನವನ್ನು ಸರಿಮಾಡಲು ಸಾಧ್ಯವೇ ಇಲ್ಲ. ನನ್ನನ್ನು ನೋಡುವ ಎಲ್ಲರೂ ಕೇವಲವಾಗಿ ನಗುತ್ತಾರೆ. ಇವನು ಇನ್ನು ಮುಂದೆ ಅಷ್ಟೇ, ಇವನ ಜೀವನ ಮುಗಿದಂತೆಯೇ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ನೀವು ಚಿಂತಿಸುತ್ತಿದ್ದೀರಾ? ಈ ಮಾತು ನಿಮಗೇ. ನಿಮ್ಮ ದೇಹವೆಂಬ ಆಲಯವನ್ನು ನೀವು ಸರಿಮಾಡದೇ ಬಿಟ್ಟು ಬಿಟ್ಟದ್ದರಿಂದ ನಿಮ್ಮ ಜೀವನ ಅಸ್ತವ್ಯಸ್ತವಾಗಿರಬಹುದು. ನಿಮ್ಮ ಪ್ರಯತ್ನದಿಂದ ಸರಿಮಾಡಲು ಪ್ರಯತ್ನಿಸಿ ಸೋಲಿನ ಕಣ್ಣೀರು ಸುರಿಸುತ್ತಿರಬಹುದು. ಆ ರೀತಿಯಾಗಿ ಕಣ್ಣೀರು ಸುರಿಸುತ್ತಿರುವ ನಿಮ್ಮನ್ನು ನೋಡಿ ದೇವರು ಹೀಗೆ ಹೇಳುತ್ತಿದ್ದಾರೆ, "ನಿನ್ನ ಜೀವವನ್ನು ನನಗೆ ಕೊಡು ನಾನು ಅದನ್ನು ನವೀಕರಿಸುತ್ತೇನೆ" ಎಂದು! ಇಂದೇ ನಿಮ್ಮ ಜೀವನವನ್ನು ಅವರ ಕೈಗಳಲ್ಲಿ ಒಪ್ಪಿಸಿ ಕೊಡಲು ನೀವು ಸಿದ್ಧವಾಗಿದ್ದೀರ?

 

ಅರ್ಪಿಸಿದೆ ನನ್ನನ್ನು ಸಂಪೂರ್ಣವಾಗಿ

ಅದ್ಭುತನೇ ನಿಮ್ಮ ಕೈಗಳಲ್ಲಿ

ಎಲ್ಲವೂ ನಿಮಗೆ ಸ್ವಂತವೆಂದು

ನನ್ನನ್ನೇ ನಿಮ್ಮ ಬಳಿ ಸಮರ್ಪಿಸಿಕೊಂಡೆ

ಎಲ್ಲವೂ ಕ್ರಿಸ್ತನಿಗೆ

ಎಲ್ಲವೂ ಅರ್ಪಿಸುವೆ

ನನ್ನ ಎಲ್ಲಾ ಗುಣಲಕ್ಷಣಗಳು ಮತ್ತು ಬಯಕೆಗಳು ಕ್ರಿಸ್ತನಿಗೆ

 

ಅನೇಕರು ನೋಡಿ ವಿಸ್ಮಯ ಹೊಂದುವಂತೆ ನಿಮ್ಮ ಜೀವನ ಬದಲಾಗುವುದು ಖಚಿತ!

- Mrs. ತವಮಣಿ ವೈರವೇಲ್

 

ಪ್ರಾರ್ಥನಾ ಅಂಶ:

You tube, Twitter, WhatsApp ಮೂಲಕ ದೇವರ ವಾಕ್ಯಗಳನ್ನು ಕೇಳುವ ಪ್ರತಿಯೊಬ್ಬರೂ ದೇವರಿಗಾಗಿ ಕೆಲಸ ಮಾಡುವ ಸೈನಿಕರಾಗಿ ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş