Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.09.2021 (Kids Special)
Share:

By Village Missionary Movement

Sunday, 26-Sep-2021

ಧೈನಂದಿನ ಧ್ಯಾನ(Kannada) – 26.09.2021 (Kids Special)

 

ವಿಧೇಯನಾಗದ ಜಿಂಗಿ

 

"ಮಕ್ಕಳೇ, ಎಲ್ಲಾ ವಿಷಯಗಳಲ್ಲಿ ನಿಮ್ಮ ತಂದೆತಾಯಿಗಳಿಗೆ ವಿಧೇಯ ರಾಗಿರ್ರಿ;..." - ಕೊಲೊಸ್ಸೆಯವರಿಗೆ 3:20

 

ಪಿಂಗಿ, ಜಿಂಗಿ ಎಂಬ ಹೆಸರಿನ ಎರಡು ಕೋತಿಗಳು ತನ್ನ ತಾಯಿಯೊಂದಿಗೆ ಆಲದ ಮರದಲ್ಲಿ ವಾಸಿಸುತ್ತಿದ್ದವು. ಆ ಆಲದ ಮರದ ಬಳಿ ಒಂದು ಕೊಳವಿತ್ತು. ಮೊಸಳೆಯು ತನ್ನ ಮರಿಗಳೊಂದಿಗೆ ಆ ಕೊಳದಲ್ಲಿ ವಾಸಿಸುತ್ತಿತ್ತು. ಆಗ ಈ ಪಿಂಗಿ ಮತ್ತು ಜಿಂಗಿ ತನ್ನ ತಾಯಿಯೊಂದಿಗೆ ಸೇರಿ ಆ ಆಲದ ಮರದ ಜೊಂಡು ಹಿಡಿದು ಆಕಡೆ ಈಕಡೆ ಗೆ ಉಯ್ಯಾಲೆ ಆಡುತ್ತಾ ಸಂತೋಷವಾಗಿ ಬದುಕುತ್ತಿದ್ದವು. ಇವುಗಳು ಪ್ರತಿದಿನ ಹೀಗೆ ಆಟ ಆಡುವುದನ್ನು ನೋಡುತ್ತಿದ್ದ ಮೊಸಳೆಗೆ, ಈ ಪುಟ್ಟ ಕೋತಿಗಳನ್ನು ಹೇಗಾದರೂ ಯಾಮಾರಿಸಿ ಕೆಳಗೆ ಬರುವಂತೆ ಮಾಡಿ ಅವುಗಳನ್ನು ತಿಂದು ಬಿಡಬೇಕೆಂಬ ಆಸೆ ಉಂಟಾಯಿತು.

 

 ಒಂದು ದಿನ ತಾಯಿ ಕೋತಿ ಪುಟ್ಟ ಕೋತಿಗಳ ಬಳಿ, “ನಾನು ಆಹಾರ ಹುಡುಕಲು ಹೊರಗೆ ಹೋಗುತ್ತಿದ್ದೇನೆ. ನೀವಿಬ್ಬರೂ ಸುರಕ್ಷಿತವಾಗಿರಬೇಕು. ಮರದಿಂದ ಕೆಳಗೆ ಇಳಿಯಲೇ ಬಾರದು ಸರೀನಾ” ಎಂದು ಹೇಳಿತು. ತಕ್ಷಣ ಪುಟ್ಟ ಕೋತಿಗಳು ಕೂಡ, "ಸರಿ ಅಮ್ಮಾ" ಎಂದು ಹೇಳಿದವು. ತಕ್ಷಣವೇ ಅವರ ತಾಯಿ ಕೋತಿ ಹೊರಟು ಹೋಯಿತು. ಇದನ್ನೆಲ್ಲ ನೋಡುತ್ತಿದ್ದ ಮೊಸಳೆಗೆ ಮನದೊಳಗೆ ಒಂದೇ ಸಂತೋಷ, ಈ ಪುಟ್ಟ ಕೋತಿಗಳನ್ನು ತಿನ್ನಲು ಇದೇ ಸರಿಯಾದ ಸಮಯ ಎಂದು ಭಾವಿಸಿ ಕೊಳದಿಂದ ಹೊರ ಬಂದು ಮರದ ಕಡೆ ನೋಡಿ, ಮೃದುವಾದ ಧ್ವನಿಯಲ್ಲಿ "ಹೇ ಪಿಂಗಿ, ಜಿಂಗಿ ಹೇಗಿದ್ದೀರ, ಹೌದು ನಿಮಗೆ ಈ ಮರದಲ್ಲೇ ತೂಗಾಡುತ್ತಿರಲು ಬೋರ್ ಆಗುತ್ತಿಲ್ವಾ, ನಾನು ಎಷ್ಟು ಜಾಲಿಯಾಗಿ ನೀರಿನಲ್ಲಿ ಈಜುತ್ತೇನೆ ಮತ್ತು ಸ್ನಾನ ಮಾಡುತ್ತೇನೆ. ನಿಮಗೆ ಅಂತಹ ಆಸೆ ಇಲ್ಲವೇ? ”ಎಂದಿತು. ತಕ್ಷಣವೇ, ಜಿಂಗಿ, "ನನಗೂ ನೀರಿನಲ್ಲಿ ಈಜುತ್ತಾ ಸ್ನಾನ ಮಾಡಲು ಆಸೆಯಾಗಿಯೇ ಇದೆ" ಎಂದಿತು. ತಕ್ಷಣವೇ ಮೊಸಳೆ, "ನಾವೆಲ್ಲರೂ ಸ್ನೇಹಿತರಾಗಿರೋಣ, ಬಾ ಜಿಂಗಿ ನಾನು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ" ಎಂದಿತು. ಜಿಂಗಿ ಕೂಡ ನೀರಿನಲ್ಲಿ ಸ್ನಾನ ಮಾಡುವ ಆಸೆಯಲ್ಲಿ ವೇಗ ವೇಗವಾಗಿ ಮರವನ್ನು ಬಿಟ್ಟು ಕೆಳಗೆ ಇಳಿಯಿತು.

 

ಪಿಂಗಿ, "ಹೇ ಜಿಂಗಿ ಕೆಳಗೆ ಇಳಿಯಬೇಡ, ಆ ಮೊಸಳೆ ನಿನ್ನನ್ನು ಕೊಂದುಬಿಡುತ್ತದೆ" ಎಂದಿತು. ಆದರೆ ಜಿಂಗಿಯೋ ಕೇಳದೆ ಕೆಳಗಿಳಿದು ಮೊಸಳೆಯ ಬೆನ್ನಿನ ಮೇಲೆ ಹೋಗಿ ಕುಳಿತು ಕೊಂಡಿತು. ಪಿಂಗಿಯ ಬಳಿ, “ನೀನು ಈ ಮರದ ಮೇಲೆ ತೂಗಾಡುತ್ತಿರು. ನಾನು ನೀರಿನಲ್ಲಿ ಈಜಾಡುತ್ತಾ ಸ್ನಾನ ಮಾಡಲು ಹೋಗುತ್ತೇನೆ” ಎಂದು ಹೇಳಿತು. ಜಿಂಗಿ ಮತ್ತು ಮೊಸಳೆ ಪಿಂಗಿ ಗೆ "Bye Bye" ಎಂದು ಹೇಳಿ ಹೊರಟರು. ಮೊಸಳೆ ಅರ್ಧದಷ್ಟು ನೀರಿನಲ್ಲಿ ಮುಳುಗಿದ ನಂತರ ಕೋತಿಯ ಬಳಿ, "ನಾನು ನಿನ್ನನ್ನು ಸ್ನಾನ ಮಾಡಲು ಕರೆಯಲಿಲ್ಲ ಕೊಂದು ತಿನ್ನಲೆಂದೇ ಕರೆದುಕೊಂಡು ಬಂದೆನು" ಎಂದಿತು. ಜಿಂಗಿಯೋ, "ಗೆಳೆಯ, ಬೇಡ ನನ್ನನ್ನು ಬಿಟ್ಟು ಬಿಡು" ಎಂದು ಬೇಡಿಕೊಂಡಿತು. ಅಷ್ಟರೊಳಗೆ ಮೊಸಳೆ ಆ ಮಂಗವನ್ನು ಹೊಡೆದು ತಿಂದು ಬಿಟ್ಟಿತು. ಇದನ್ನೆಲ್ಲಾ ಮರದಿಂದ ನೋಡುತ್ತಿದ್ದ ಪಿಂಗಿ, ಹೀಗೆ ತಾನು ಅವಿಧೇಯತೆಯಿಂದ ತನ್ನ ಜೀವನವನ್ನು ಹಾಳು ಮಾಡಿಕೊಂಡಿತೇ ಎಂದು ಭಾವಿಸಿ ಬಿಕ್ಕಿ ಬಿಕ್ಕಿ ಅತ್ತಿತು.

 

ಪುಟ್ಟ ತಮ್ಮ, ತಂಗಿ! ಈ ಮೊಸಳೆಯಂತೆಯೇ, ಸೈತಾನನು ನಿಮ್ಮ ಸ್ನೇಹಿತನ ಮೂಲಕ ನಿಮ್ಮ ಜೊತೆ ನಯವಾಗಿ ಮಾತನಾಡಿ, ಯಾಮಾರಿಸಿ ನಿನ್ನನ್ನು ಯೇಸಪ್ಪನಿಂದ ಬೇರ್ಪಡಿಸಲು ಪ್ರಯತ್ನಿಸುತ್ತಾನೆ. ಆದ್ದರಿಂದ ನೀನೇ ಜಾಗರೂಕನಾಗಿರಬೇಕು. ನಿನ್ನ ಹೆತ್ತವರು ಹೇಳುವುದನ್ನು ಕೇಳಿ ಅದಕ್ಕೆ ತಕ್ಕಂತೆ ವಿಧೇಯನಾಗಬೇಕು. ಓಕೆನಾ.

- Mrs. ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş holiganbet padişahbet giriş bets10 extrabet royalbet süperbetin jojobet padişahbet holiganbet galabet matbet matbet giriş hilbet bahiscasino celtabet antikbet betoffice