Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.09.2021
Share:

By Village Missionary Movement

Friday, 24-Sep-2021

ಧೈನಂದಿನ ಧ್ಯಾನ(Kannada) – 24.09.2021

 

ಹರ್ಷ ಮನಸ್ಸು

 

 "...ಆತನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಸೇವಿಸು..." - 1 ಪೂರ್ವಕಾಲ 28:9

 

ಒಂದು ಬಾರಿ ದೇಶಾದ್ಯಂತ ತಂಡೋರಾವನ್ನು ಬಾರಿಸಲಾಯಿತು. ಅದರ ಸಾರಾಂಶ ಏನೆಂದರೆ, ದೇಶವನ್ನು ಆಳುವ ರಾಜ ಆ ಊರಿನ ಪ್ರಾಂತ್ಯಗಳನ್ನು ಸಂಚರಿಸಿ ನೋಡಲು ಬರುವುದಾಗಿಯು, ಆತನ ಮನಸ್ಸನ್ನು ಆಕರ್ಷಿಸಿದವರಿಗೆ ಉಡುಗೊರೆ ನೀಡುವುದಾಗಿಯು ಒಂದು ಪ್ರಕಟಣೆಯನ್ನು ಘೋಷಿಸಲಾಯಿತು. ಜನರಿಗೆಲ್ಲ ಒಂದೇ ಸಂತೋಷ! ಹೇಗಾದರೂ ರಾಜನ ಮನಸ್ಸನ್ನು ಸೆಳೆದು ಉಡಗೊರೆಯನ್ನು ತೆಗೆದುಕೊಳ್ಳಲೇಬೇಕೆಂದು ಜನರು ತಮ್ಮ ನಗರದಾದ್ಯಂತ ಸ್ವಚ್ಛಗೊಳಿಸಿದರು. ಅವರವರ ಮನೆಯನ್ನು ಅಲಂಕರಿಸಿದರು. ಇನ್ನೂ ಕೆಲವರು ಹೊಸ ಬಟ್ಟೆಗಳನ್ನು ಧರಿಸಿ ಅಮೂಲ್ಯವಾದ ಆಭರಣಗಳನ್ನು ಧರಿಸಿ ಕೆಲವು ಉಡುಗೊರೆಗಳನ್ನು ತೆಗೆದುಕೊಂಡು, ರಾಜ ನಗರವನ್ನು ಸಂಚರಿಸಿ ನೋಡಲು ಬರುವಂತ ಆ ದಿನದಲ್ಲಿ ನಗರದ ಪ್ರಮುಖ ಬೀದಿಯಲ್ಲಿ ಬಂದು ನಿಂತುಕೊಂಡಿದ್ದರು. ಆದರೆ ಒಬ್ಬ ಬಡವ ಮಾತ್ರ ತನ್ನಿಂದ ಏನನ್ನೂ ಮಾಡಲು ಸಾಧ್ಯವಾಗದೆ ತನ್ನ ಮನೆಯ ಕೆಲಸಗಳನ್ನು ಉತ್ಸಾಹದಿಂದ ಮಾಡುತ್ತಿದ್ದನು. ರಾಜನು ಆ ನಿರ್ದಿಷ್ಟ ದಿನದಂದು ನಗರದ ಬೀದಿಗಳಲ್ಲಿ ಬರದೇ ಬೇರೆ ಮಾರ್ಗದಲ್ಲಿ ನಗರಕ್ಕೆ ಬಂದು ಜನರನ್ನು ನೋಡಲು ಬಯಸಿದರು. ಹಾಗೆ ಅವರು ಬಂದು ನೋಡಿದಾಗ ಅಲ್ಲಿ ಒಬ್ಬರೂ ಕಾಣದೇ ಹೋದುದರಿಂದ ನಿರಾಶೆಯಿಂದ ಹಿಂತಿರುಗುತ್ತಿದ್ದರು, ಹಿಂತಿರುಗುವ ದಾರಿಯಲ್ಲಿ ಒಂದು ಚಿಕ್ಕ ಮನೆಯಲ್ಲಿ ಯಾರೋ ಒಬ್ಬರು ಉತ್ಸಾಹದಿಂದ ಕೆಲಸ ಮಾಡುತ್ತಿರುವುದನ್ನು ನೋಡಿ ಹರ್ಷ ಹೃದಯದಿಂದ ಕೈಯಲ್ಲಿ ತಂದಿದ್ದ ಅಮೂಲ್ಯ ಉಡುಗೊರೆಗಳನ್ನು ಆ ಬಡವನಿಗೆ ಕೊಟ್ಟರು. ನಂತರ ಅವರು ಬೇರೆ ಮಾರ್ಗದಲ್ಲಿ ಅರಮನೆಗೆ ಹಿಂತಿರುಗಿ ಹೋದರು. ಆದರೆ ಅಲ್ಲಿ ಪ್ರಮುಖ ಬೀದಿಯಲ್ಲಿ ಕಾಯುತ್ತಿದ್ದ ಜನರಿಗೆ ನಿರಾಶೆ ಮಾತ್ರವೇ ಉಳಿಯಿತು.

 

ನಮ್ಮ ಸತ್ಯವೇದದಲ್ಲಿ ಕೂಡ 2 ಪೂರ್ವಕಾಲ. 17: 6 ನೇ ವಾಕ್ಯದಲ್ಲಿ ಯೆಹೋಷಾಫಾಟನೆಂಬ ರಾಜನ ಬಗ್ಗೆ ಸತ್ಯವೇದವು ಈ ರೀತಿಯಾಗಿ ಗುರುತಿಸುತ್ತಿದೆ. "ಕರ್ತನ ಮಾರ್ಗಗಳಲ್ಲಿ ಅವನ ಹೃದಯವು ಉಲ್ಲಾಸ ಗೊಂಡಿತು." ಕರ್ತನು ಯೆಹೋಷಾಫಾಟನೊಂದಿಗಿದ್ದರು, ಅವನು ಬಾಳ್‍ದೇವರುಗಳನ್ನು ಅವಲಂಬಿಸದೆ ತನ್ನ ತಂದೆಯ ದೇವರನ್ನು ಹುಡುಕುತ್ತಾ, ಅವರ ವೇದವಾಕ್ಯಗಳಂತೆ ನಡೆದುಕೊಂಡನು. ಕರ್ತನು ಅವನ ರಾಜ್ಯವನ್ನು ವಿಸ್ತರಿಸಿ ಸಕಲ ವಿಧವಾದ ಆಶೀರ್ವಾದಗಳೊಂದಿಗೆ ಆಶೀರ್ವದಿಸಿದರು. 

 

ಹೌದು! ಪ್ರೀತಿಯ ದೇವರ ಮಕ್ಕಳೇ ಇದನ್ನು ಓದುವಾಗ ನನ್ನ ಮನಸ್ಸಿಗೆ ಬಹಳ ಆಶ್ಚರ್ಯವಾಯಿತು. ಕರ್ತನ ಮಾರ್ಗದಲ್ಲಿ ನಡೆಯಲು ನಿಮ್ಮ ಮನಸ್ಸು ಉತ್ಸಾಹವಾಗಿದೆಯೇ? ತನ್ನ ಕೆಲಸದಲ್ಲಿ ಉತ್ಸಾಹದಿಂದ ತೊಡಗಿ ಉಡುಗೊರೆಯನ್ನು ಪಡೆದುಕೊಂಡ ಆ ಬಡವನಂತೆ, ನಾವು ಕೂಡ ಕರ್ತನ ಮಾರ್ಗದಲ್ಲಿ ಉತ್ಸಾಹದಿಂದ ನಡೆದು, ಯೆಹೋಷಾಫಾಟನ ಹಾಗೆ ಆಶೀರ್ವಾದಗಳನ್ನು ಪಡೆದುಕೊಳ್ಳೋಣ.

- Mrs. ಮಂಜುಳಾ

 

ಪ್ರಾರ್ಥನಾ ಅಂಶ:

ನಮ್ಮ New Life Home-ನಲ್ಲಿ ಇರುವ ಮಕ್ಕಳ ಕಾಲೇಜು ಶುಲ್ಕದ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş