Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.09.2021
Share:

By Village Missionary Movement

Thursday, 23-Sep-2021

ಧೈನಂದಿನ ಧ್ಯಾನ(Kannada) – 23.09.2021

 

ಲೂಕ

 

"ಲೂಕನು ಮಾತ್ರ ನನ್ನ ಜೊತೆಯಲ್ಲಿ ದ್ದಾನೆ." - 2 ತಿಮೊಥೆ 4:11

 

ಡ್ಯಾನಿ ಎಂಬ ಚಿತ್ರಗಾರನ ಮೇಜಿನ ಮೇಲಿದ್ದ ಪೇಪರ್ ಮತ್ತು ಪೆನ್ಸಿಲ್ ಕೆಲವೇ ದಿನಗಳಲ್ಲಿ ಸ್ನೇಹಿತರಾದರು. ಒಂದು ದಿನ ಡ್ಯಾನಿ ಕುರ್ಚಿಯಲ್ಲಿ ಕುಳಿತು ಪೆನ್ಸಿಲನ್ನು ಎತ್ತಿದ ಕೂಡಲೇ ಪೇಪರ್ ಬಹಳ ಅಳುತ್ತಾ, "ನಾನು ಬರೋದಿಲ್ಲ" ಎಂದಿತು. "ಡ್ಯಾನಿ ಬೇರೆ ಪೇಪರನ್ನು ಎತ್ತಿಕೊಂಡು ಬರೆಯಲು ಪ್ರಾರಂಭಿಸಿದರು. ಪೆನ್ಸಿಲ್ ಗೆ ತುಂಬಾ ಬೇಸರ, "ಯಾಕೆ ಅಳುತ್ತಿದ್ದೆ" ಎಂದು ಪೇಪರ್ ಬಳಿ ಕೇಳಿತು. ಡ್ಯಾನಿ ನಿನ್ನನ್ನು ಕೈಯಲ್ಲಿ ಎತ್ತಿಕೊಂಡರೇನೆ ಚೂಪಾದ ಆಯುಧದಿಂದ ನಿನ್ನನ್ನು ನೋಯಿಸುತ್ತಾರೆ. ಆಗ ನಾನು ಬಂದರೆ ನಿನ್ನ ಚೂಪಾದ ತುದಿ ನನ್ನನ್ನು ಚುಚ್ಚುತ್ತದೆ ನನಗೆ ತುಂಬಾ ನೋವಾಗುತ್ತದೆ. ನಾನು ನನ್ನ ಶುದ್ಧತೆಯನ್ನು ಕಳೆದುಕೊಳ್ಳುತ್ತೇನೆ” ಎಂದಿತು. ಪೆನ್ಸಿಲ್ ಹೇಳಿತು, "ನಾವು ಕಷ್ಟಪಟ್ಟರೂ ಬಹಳ ಸುಂದರವಾಗಿ, ಹೆಮ್ಮೆಗೆ ಪಾತ್ರರಾಗಿ ಮಾರ್ಪಡುತ್ತೇವೆ. ನನಗೆ ಚೂಪಾದ ಲೆಡ್ ಇದ್ದರೇನೆ, ಇಷ್ಟು ಸುಂದರವಾದ ಚಿತ್ರವನ್ನು ಬರೆಯಲು ಸಾಧ್ಯ. ನೀನು ಬಿಳಿಯಾಗಿರುವುದಕ್ಕಿಂತ ಹೆಚ್ಚಾಗಿ, ನಿನ್ನ ಮೇಲೆ ಹಲವು ಡಿಸೈನ್ ಗಳನ್ನು ಚಿತ್ರಿಸಿರುವುದು ಎಷ್ಟು ಹೆಮ್ಮೆ! ಬಹಳ ಗೌರವಾನ್ವಿತನಾಗಿ ಮಾರ್ಪಡುತ್ತೀಯ! ಇದು ನಿನಗೆ ಹೆಮ್ಮೆಯ ವಿಷಯವಲ್ಲವೇ! ” ಎಂದಿತು.

 

ಈ ಪೇಪರ್ ನಂತೆಯೇ, ಮನುಷ್ಯರೂ ಕೂಡ ನಾವು ಕಷ್ಟದಲ್ಲಿದ್ದಾಗ ಬಿಟ್ಟು ಓಡಲು ಯೋಚಿಸುತ್ತಾರೆ. ಆದರೆ ಅಪೊಸ್ತಲರ ಕೃತ್ಯಗಳು ಮತ್ತು ಲೂಕ ಸುವಾರ್ತೆಯನ್ನು ಬರೆದ ಲೂಕ ಎಂಬ ದೇವ ಮನುಷ್ಯನು ಯಾವುದೇ ರೀತಿಯ ಕಷ್ಟಕರವಾದ ಸನ್ನಿವೇಶದಲ್ಲಿಯೂ ಪೌಲನೊಂದಿಗೆ ಸೇರಿ ತನ್ನ ಸೇವೆಯನ್ನು ನೆರವೇರಿಸಿದರು. ಪೌಲನು ತನ್ನ ಸುವಾರ್ತೆಯ ನಿಮಿತ್ತವಾಗಿ ಸೆರೆಮನೆಯಲ್ಲಿ ಬಂಧಿಸಲ್ಪಟ್ಟ ಸಂದರ್ಭದಲ್ಲೂ ಲೂಕ ಅವರನ್ನು ಬಿಟ್ಟು ಓಡಿಹೋಗದೇ ಜೊತೆಯಲ್ಲೇ ಇದ್ದರು. ಲೂಕ ಒಬ್ಬ ವೈದ್ಯ! ಉತ್ತಮ ವಿದ್ಯಾಭ್ಯಾಸವಿದ್ದರೂ, ಸಮಾಜದಲ್ಲಿ ಒಂದು ಒಳ್ಳೆಯ ಸ್ಥಾನದಲ್ಲಿದ್ದರೂ ಅವರು ಕ್ರಿಸ್ತನ ಮೇಲಿನ ಪ್ರೀತಿಯಿಂದಾಗಿ ಎಲ್ಲಾ ಸಂದರ್ಭಗಳಲ್ಲಿಯೂ ಪೌಲನ ಜೊತೆಯಲ್ಲೇ ಇದ್ದಾರೆ. ತಿಮೊಥೆಯನಿಗೆ ಸೆರೆಮನೆಯಿಂದ ಪತ್ರ ಬರೆಯುವಾಗ ಪೌಲನು ಹೇಳುತ್ತಾರೆ, "ಲೂಕನು ಮಾತ್ರ ನನ್ನೊಂದಿಗಿದ್ದಾನೆ" (2 ತಿಮೊಥೆ. 4:11) ಎಂದರು. ತನ್ನ ದೈನಂದಿನ ಜೀವನದಲ್ಲಿ ಕ್ರಿಸ್ತನ ಸ್ವಭಾವವನ್ನು ಬಹಿರಂಗಪಡಿಸಿದರು.

 

ಪ್ರಿಯರೇ! ಲೂಕನ ಜೀವನದಿಂದ ನಾವು ಕಲಿತುಕೊಂಡ ವಿಷಯಗಳು ನಮ್ಮ ಜೀವನದಲ್ಲಿ ಇವೆಯೇ? ಎಂದು ಯೋಚಿಸೋಣ. ಎಲ್ಲಾ ಸಂದರ್ಭಗಳಲ್ಲಿಯೂ ನಾಚಿಕೆ ಪಡದೆ ಸುವಾರ್ತೆಯನ್ನು ಸಾರುವವರಾಗಿದ್ದರು. ಕ್ರಿಸ್ತನ ನಿಮಿತ್ತವಾಗಿ ಕಟ್ಟಲ್ಪಟ್ಟವರಂತಿದ್ದ ಪೌಲನಿಗೆ ಸಹಾಯ ಮಾಡುವವರಾಗಿದ್ದರು. ನಾವು ಕೂಡ ಎಲ್ಲಾ ಸಂದರ್ಭಗಳಲ್ಲಿಯೂ ಸೇವಕರಿಗೆ ಸಹಾಯ ಮಾಡೋಣವಾ? ಅವರ ಕಷ್ಟಗಳಲ್ಲಿ ನಾಚಿಕೆ ಪಡದೆ ಅವರಿಗೆ ಹೆಗಲು ಕೊಡುವವರಾಗಿರೋಣವಾ? ಲೂಕನು ಆ ರೀತಿಯಾಗಿ ಇದ್ದುದರಿಂದ ಆತನು ಕ್ರಿಸ್ತನ ಶಿಷ್ಯನಲ್ಲದೇ ಹೋದರೂ ಎರಡು ಪತ್ರಿಕೆಗಳನ್ನು ಬರೆಯಲು ಪವಿತ್ರಾತ್ಮನು ಜೊತೆಯಿದ್ದು ಸಹಾಯ ಮಾಡಿದರು. ಆದ್ದರಿಂದ ಅದರಂತೆ ನಾವೂ ಇರುವಾಗ ಪವಿತ್ರಾತ್ಮನು ಈ ಲೋಕದಲ್ಲಿ ಯು, ಪರಲೋಕದಲ್ಲಿ ಯು ನಮ್ಮನ್ನು ಉನ್ನತವಾಗಿಡುತ್ತಾರೆ ಎಂಬುದರಲ್ಲಿ ಸಂದೇಹವೇ ಇಲ್ಲ.

- Mrs. ಅನ್ಬುಜ್ಯೋತಿ ಸ್ಟಾಲಿನ್

 

 ಪ್ರಾರ್ಥನಾ ಅಂಶ:

 ಮೋಕ್ಷ ಪ್ರಯಾಣ ಎಂಬ ದೈನಂದಿನ ಧ್ಯಾನ ಪತ್ರಿಕೆಯನ್ನು ಮುದ್ರಿಸಲು ಬೇಕಾಗಿರುವ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş