Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.09.2021
Share:

By Village Missionary Movement

Monday, 20-Sep-2021

ಧೈನಂದಿನ ಧ್ಯಾನ(Kannada) – 20.09.2021

 

ಶೋಧನೆಗಳನ್ನು ಜಯಿಸಿರಿ

 

 "...ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ... ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು." - 1 ಕೊರಿಂಥ 10:13

 

 ಒಂದು ದಿನ ಬಾಬು ಎಂಬ ಹುಡುಗನ ತಾಯಿ 4 ಕೇಕ್ ತಯಾರಿಸಿ ಅಂಗಡಿಗೆ ಹೋದರು. ಹೊರಡುವ ಮುನ್ನ, ಕೇಕ್ ಗಳನ್ನು ಸಂಜೆಯ ತಿಂಡಿಗಾಗಿ ಮಾಡಿಟ್ಟಿರುವುದಾಗಿಯೂ ಮತ್ತು ಅದಕ್ಕೂ ಮೊದಲು ಇದನ್ನು ತಿನ್ನಬಾರದು ಎಂಬುದಾಗಿಯೂ ಬಾಬು ಬಳಿ ಹೇಳಿಬಿಟ್ಟು ಹೋದರು. ಕೇಕ್ ನ ವಾಸನೆ ಮೂಗಿಗೆ ಚುಚ್ಚಿದಷ್ಟು ಬಾಬು ಆಸೆಯನ್ನು ನಿಗ್ರಹಿಸಲು ಸಾಧ್ಯವಾಗಲಿಲ್ಲ. 3 ಕೇಕ್ ಗಳನ್ನು ಖಾಲಿ ಮಾಡಿಬಿಟ್ಟನು. ತಾಯಿ ಮನೆಗೆ ಹಿಂದಿರುಗಿದಾಗ ಈ ವಿಷಯ ತಿಳಿದು ಅವರು ಬಾಬುವಿನ ತಪ್ಪಿಗೆ ಛೀಮಾರಿ ಹಾಕಿದರು. ಅವನೋ, "ಅಮ್ಮಾ! ಕೇಕ್ ವಾಸನೆ ಬರದಂತೆ ನನ್ನ ಮೂಗನ್ನು ಬಿಗಿಯಾಗಿ ಹಿಡಿದುಕೊಂಡೆ. ನಂತರ ಉಸಿರುಗಟ್ಟುವಿಕೆಯಿಂದ ನನ್ನ ಕೈಯನ್ನು ತೆಗೆದುಬಿಟ್ಟೆ. ನಂತರ ನನ್ನ ಕಾಲುಗಳು ವಿಧೇಯತೆ ತೋರದೇ ಹೋದದ್ದರಿಂದ ನಾನು ಅಡುಗೆಮನೆಗೆ ಹೋದೆ. ನಾನು ಅಲ್ಲಿಗೆ ಹೋದ ಕೂಡಲೇ, ನನ್ನ ಕೈ ಕೂಡ ನನಗೆ ವಿಧೇಯತೆ ತೋರದೆ ಹೋಯಿತು" ಎಂದನು.

 

 ಹೌದು, ಪ್ರಿಯರೇ, ನಾವು ಕೂಡ ಕೆಲವು ತಪ್ಪುಗಳನ್ನು ಆತುರವಾಗಿ ಮಾಡಿಬಿಟ್ಟು ಪರಿಸ್ಥಿತಿಗಳ ಮೇಲೂ, ಕೆಲವು ಸ್ನೇಹಿತರ ಮೇಲೂ, ಸೈತಾನನ ಮೇಲೂ ತಪ್ಪುಹೊರಿಸಿ ಬಿಡುತ್ತೇವೆ. ಹವ್ವಳು ಸರ್ಪದ ಮೇಲೂ, ಆದಾಮನು ಹವ್ವಳ ಮೇಲೂ ತಪ್ಪುಹೊರಿಸಿದಂತೆ, ನಿಜವಾಗಿಯು ಶೋಧನೆಗೆ ಯಾರು ಮತ್ತು ಯಾವುದು ಕಾರಣ? "ಪ್ರತಿಯೊಬ್ಬನು ತನ್ನ ಸ್ವಂತ ದುರಾಶೆಯಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಶೋಧಿಸಲ್ಪಡುತ್ತಾನೆ. 

(ಯಾಕೋಬನು 1:14) ಎಂದು ಸತ್ಯವೇದವು ಹೇಳುತ್ತದೆ. ನಮ್ಮ ಬಯಕೆಗಳು, ಶೋಧನೆಗಳನ್ನು ತರುವ ಸಂದರ್ಭಗಳು, ವಸ್ತುಗಳು, ಒಂದು ವ್ಯಕ್ತಿಯೊಂದಿಗೆ ಬೆರೆಯುವಾಗ ಶೋಧನೆಯೊಳಗೆ ಬಿದ್ದು ಹೋಗುತ್ತೇವೆ. ಹಣದ ಆಸೆ ಹೊಂದಿರುವ ಒಬ್ಬ ವ್ಯಕ್ತಿ ಲಂಚದಲ್ಲಿ ಮೋಸದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ವಸ್ತುಗಳ ಮೇಲಿನ ಆಸೆ ಕಳ್ಳತನಕ್ಕೆ ಕಾರಣವಾಗುತ್ತದೆ. ಮಾಂಸದ ಕಾಮವು ವ್ಯಭಿಚಾರದಲ್ಲಿ ಬೀಳಿಸುತ್ತದೆ.

 

ಪಕ್ಷಿಗಳನ್ನು ಗಮನಿಸಿ ನೋಡಿದರೆ ಅವುಗಳು ಒಂದು ಸ್ಥಳದಲ್ಲಿ ಕುಳಿತುಕೊಳ್ಳುವದಕ್ಕಿಂತ ಮುಂಚೆ ಅಥವಾ ಆಹಾರ ತಿನ್ನುವಾಗ ತನ್ನ ಸುತ್ತಲೂ ಏನಾದರೂ ಅಪಾಯವಿದೆಯೇ? ಎಂದು ಬಹಳ ಸೂಕ್ಷ್ಮವಾಗಿ ಗಮನಿಸುತ್ತವೆ. ಹಾಗೆ ನಾವು ಕೂಡ ಪ್ರತಿದಿನವೂ ನಮಗೆ ಎದುರಾಗಬಹುದಾದ ಶೋಧನೆಗಳಲ್ಲಿ ಎಚ್ಚರವಾಗಿದ್ದು ಪ್ರಾರ್ಥಿಸಬೇಕು. ಶೋಧನೆ ಯೊಳಗೆ ಬೀಳದಂತೆ ಎಚ್ಚರವಾಗಿದ್ದು ಪ್ರಾರ್ಥಿಸಬೇಕೆಂದು ಯೇಸು ಆಲೋಚನೆ ಹೇಳುತ್ತಿದ್ದಾರೆ. (ಮಾರ್ಕನು 14:38) ಕರ್ತನ ಪ್ರಾರ್ಥನೆಯಲ್ಲಿ, ಶೋಧನೆ ಮತ್ತು ಕೇಡಿಗೆ ಒಳಗಾದಂತೆ ಪ್ರಾರ್ಥಿಸಲು ಕಲಿಸಿಕೊಡುತ್ತಾರೆ.

 

ಅಂತಿಮವಾಗಿ, ಯೇಸು ಮಾಡಿದಂತೆ, ನಾವು ದೇವರ ವಾಕ್ಯಗಳಿಗೆ ವಿಧೇಯರಾಗಿ, ಶೋಧನೆಗಾರನಾದ ಸೈತಾನನನ್ನು ಎದುರಿಸಿ ನಿಲ್ಲಬೇಕು. ಶೋಧನೆಗಳನ್ನು ಜಯಿಸಲು ಕರ್ತನು ತೋರಿಸಿರುವ ಮಾರ್ಗಗಳನ್ನು ಹಿಂಬಾಲಿಸೋಣ!

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

7000 ಮಿಷನರಿಗಳ ಮೂಲಕ 1 ಲಕ್ಷ ಗ್ರಾಮಗಳನ್ನು ಭೇಟಿಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino atlasbet bahiscasino atlasbet matbet matbet giriş bahiscasino celtabet queenbet casibom jojobet