Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.09.2021 (Kids Special)
Share:

By Village Missionary Movement

Sunday, 19-Sep-2021

ಧೈನಂದಿನ ಧ್ಯಾನ(Kannada) – 19.09.2021 (Kids Special)

 

DON'T WORRY

 

"ನಾನು ಭಯಭರಿತನಾಗಿಯೂ ಅದ್ಭುತ ವಾಗಿಯೂ ಮಾಡಲ್ಪಟ್ಟದ್ದರಿಂದ ನಿನ್ನನ್ನು ಕೊಂಡಾ ಡುತ್ತೇನೆ;..." - ಕೀರ್ತನೆ 139: 14

 

ಒಂದು ದಟ್ಟವಾದ ಕಾಡಿನಲ್ಲಿ ಪ್ರಾಣಿಗಳು, ಪಕ್ಷಿಗಳು ಮತ್ತು ಸಣ್ಣ ಪ್ರಾಣಿಗಳೆಲ್ಲಾ ಸಂತೋಷದಿಂದ ಬದುಕುತ್ತಿದ್ದವು. ಕಾಡಿನ ಮಧ್ಯದಲ್ಲಿ ಒಂದು ಕೊಳವೂ ಇತ್ತು. ಮೀನು ಮತ್ತು ಕಪ್ಪೆಗಳು ಜಿಗಿಯುತ್ತಾ ಆಟವಾಡುಡುತ್ತಿದ್ದ ದೃಶ್ಯ ನೋಡಲು ತುಂಬಾ ಸುಂದರವಾಗಿತ್ತು. ಈ ಕಾಡಿನಲ್ಲಿ ಇಬ್ಬರು ಸ್ನೇಹಿತರಿದ್ದರು. ನಿಮಗೂ ಸ್ನೇಹಿತರಿದ್ದಾರೆ ತಾನೇ! ಅವರೊಂದಿಗೆ ಮಾತನಾಡುತ್ತಲೇ ಇರುತ್ತೀರ, ಜಾಲಿಯಾಗಿ ಆಟ ಆಡುತ್ತೀರ ಅಲ್ವಾ? ಅದರಂತೆಯೇ, ಸ್ನೇಹಿತರಾಗಿದ್ದ ಮೊಲ ಮತ್ತು ಬಾತುಕೋಳಿ ಆಗಾಗ ಭೇಟಿಯಾಗುತ್ತಿದ್ದರು. ಒಂದು ದಿನ ಬಾತುಕೋಳಿ ಕೊಳದೊಳಗೆ ಇಳಿಯದೇ ದಡದಲ್ಲಿ ನಿಂತು ಕೊಂಡಿತ್ತು. ಆಗ ನೀರು ಕುಡಿಯಲು ಬಂದ ಮೊಲ ದುಃಖಿತನಾಗಿದ್ದ ತನ್ನ ಸ್ನೇಹಿತ ಬಾತುಕೋಳಿಯನ್ನು ನೋಡಿ, "ಯಾಕೆ ನೀನು ಇಂದು ತುಂಬಾ ಚಿಂತಿಸುತ್ತಿದ್ದೀಯ?" ಎಂದು ಕೇಳಿತು. ಅದಕ್ಕೆ ಬಾತುಕೋಳಿ, "ಹೌದು, ನಾನು ನನಗೇ ಇಷ್ಟವಾಗುತ್ತಿಲ್ಲ, ಬಾಯಿ ತುಂಬಾ ತಡೆಯಾಗಿದೆ, ಆದರೆ ಆ ಕೊಕ್ಕರೆಯ ಬಾಯಿ ತುಂಬಾ ಉದ್ದವಾಗಿರುವುದರಿಂದ ಅದು ಮೀನನ್ನು ಸುಲಭವಾಗಿ ಹಿಡಿದು ತಿನ್ನುತ್ತಿದೆ, ನನ್ನಿಂದ ಹಾಗೆ ಸಾಧ್ಯವಾಗುತ್ತಿಲ್ಲ. ದೇಹವನ್ನು ನೋಡು ದೋಣಿಯ ಹಾಗಿದೆ. ಇದನ್ನಿಟ್ಟುಕೊಂಡು ಆಡುತ್ತಾ ಕದಲುತ್ತಾ ಮೆಲ್ಲಗೆ ನಡೆಯಬೇಕಾಗಿದೆ. ವೇಗವಾಗಿ ನಡೆಯಲು ಸಾಧ್ಯವೇ ಆಗುತ್ತಿಲ್ಲ, ಕಾಲು ನೋಡು ಅಗಲವಾಗಿ ಇರುವುದರಿಂದ ನಾನು ಓಡಲು ಕೂಡ ಸಾಧ್ಯವಾಗುತ್ತಿಲ್ಲ. ಹೀಗೆಲ್ಲಾ ಇರುವುದರಿಂದ ನಾನು ಸಂತೋಷವಾಗಿರಲು ಸಾಧ್ಯವಾಗುತ್ತಿಲ್ಲ” ಎಂದು ಬಾತುಕೋಳಿ ಚಿಂತೆಗೊಳಗಾಯಿತು.

 

"ಏನೋ ಗೆಳೆಯ ಹೀಗೆ ಹೇಳ್ಬಿಟ್ಟೆ! ನನ್ನನ್ನು ನೋಡು, ಕಿವಿ ದೊಡ್ಡದಾಗಿದೆ, ಮುಂಭಾಗದಲ್ಲಿರುವ ಎರಡು ಕಾಲುಗಳು ಚಿಕ್ಕದಾಗಿಯೂ, ಹಿಂಭಾಗದಲ್ಲಿರುವ ಎರಡು ಕಾಲುಗಳು ದೊಡ್ಡದಾಗಿಯೂ ಇವೆ. ಆದರೆ ದೇವರು ನಮ್ಮನ್ನು ಹೀಗೆ ಸೃಷ್ಟಿಸಿದ್ದು ಒಳ್ಳೇದಕ್ಕಾಗಿಯೇ”ಎಂದು ಮೊಲ ಹೇಳಿತು. ಬಾತುಕೋಳಿಗೆ "ಹೇಗೆ ಇದು ಒಳ್ಳೇದೆಂದು ಹೇಳುತ್ತೀಯ" ಎಂದು ಕೇಳಿತು. "ಒಂದು ದಿನ ಕಾಡಿನಲ್ಲಿ ಸಿಂಹ ಘರ್ಜಿಸಿದ ಶಬ್ದ ನಿನಗೆ ಕೇಳಿಸಿತಾ, ನಾನು ತಕ್ಷಣ ನನ್ನ ದೊಡ್ಡ ಕಿವಿಗಳನ್ನು ಮೇಲಕ್ಕೆತ್ತಿ ಶಬ್ದ ಎಲ್ಲಿಂದ ಬರುತ್ತಿದೆ ಎಂದು ಕಂಡುಕೊಂಡೆ. ನನ್ನನ್ನು ಬೆನ್ನಟ್ಟಿದ ಸಿಂಹದಿಂದ ತಪ್ಪಿಸಿಕೊಳ್ಳಲು ನಾನು ನನ್ನ ಪಾದಗಳಿಂದ ಜಿಗಿದು ಜಿಗಿದು ತಪ್ಪಿಸಿಕೊಂಡೆ. ಆಗಲೇ ದೇವರು ನನ್ನನ್ನು ಎಷ್ಟು ವಿಶೇಷವಾಗಿ ಸೃಷ್ಟಿಸಿದ್ದಾರೆ ಎಂದು ತಿಳಿದು ದೇವರಿಗೆ ಕೃತಜ್ಞತೆ ಸಲ್ಲಿಸಿದೆ" ಎಂದು ಮೊಲ ಹೇಳಿದ ಕೂಡಲೇ ಬಾತುಕೋಳಿ ವೇಗವಾಗಿ ನೀರಿನೊಳಗೆ ಇಳಿದು ಲಬಕ್ ಲಬಕ್ ಎಂದು ಎರಡು ಮೀನುಗಳನ್ನು ತಿನ್ನುತ್ತಾ ಹೇಳಿತು, " ಹೌದು, ಗೆಳೆಯ ನೀನು ಹೇಳಿದ್ದು ಸರಿ. ನನ್ನನ್ನೂ ದೇವರು ಬಹಳ ವಿಶೇಷವಾಗಿ ಸೃಷ್ಟಿಸಿದ್ದಾರೆ. ಇನ್ನು ಮೇಲೆ feel ಮಾಡದೇ ಸಂತೋಷವಾಗಿ ಇರುತ್ತೇನೆಂದು" ಹೇಳುತ್ತಾ ನೀರಿನಲ್ಲಿ ತೇಲುತ್ತಾ ಹೊರಟಿತಂತೆ.

 

ಏನು ಪುಟಾಣಿಗಳೇ! ನೀವು ಮೃಗಗಳ ಕಥೆಯನ್ನು ಕೇಳುದ್ರಲ್ಲಾ, ನೀವೂ ಕೂಡ ಬಾತುಕೋಳಿಯಂತೆ ಚಿಂತಿಸುತ್ತಿದ್ದೀರಾ? ನಾನು ಕಪ್ಪುಗಿದ್ದೇನೆ, ಮೂಗು ಚಪ್ಪಟೆಯಾಗಿದೆ, ತುಂಬಾ ದಪ್ಪವಾಗಿದ್ದೇನೆ ಎಂದೆಲ್ಲಾ feel ಮಾಡಬಾರದು. ಯೇಸು ನಿಮ್ಮನ್ನು ವಿಭಿನ್ನವಾಗಿ ಸೃಷ್ಟಿಸಿದ್ದರೂ, ವಿಶೇಷವಾಗಿ ಪ್ರೀತಿಸುತ್ತಿದ್ದಾರೆ ಅಲ್ವಾ? ಯೇಸಪ್ಪ ನಿಮ್ಮನ್ನು ಪ್ರೀತಿಸುತ್ತಿರುವುದರಿಂದ ನೀವು ವಿಶೇಷವೇ ತಾನೇ! ಆದ್ದರಿಂದ Don't worry. Okay.

- Sis. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş