Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.09.2021
Share:

By Village Missionary Movement

Saturday, 18-Sep-2021

ಧೈನಂದಿನ ಧ್ಯಾನ(Kannada) – 18.09.2021

 

ನಿರಾತಂಕದ ಹೃದಯವೇ! ಸಿಟ್ಟಾಗಬೇಡ!

 

"ಮೊರ್ದೆಕೈಯು ತನಗೆ ಸಾಷ್ಟಾಂಗನಮಸ್ಕಾರ ಮಾಡುವದಿಲ್ಲವೆಂದು ಹಾಮಾನನು ನೋಡಿ ಬಹು ಕೋಪವುಳ್ಳವನಾದನು." - ಎಸ್ತೇರಳು 3: 5

 

ನಾವು ಉಪಯೋಗಿಸುವ ಕಾರು ಅಥವಾ ಬೈಕ್ ನಂತಹ ವಾಹನಗಳ ಭಾಗಗಳಲ್ಲಿ ಅಥವಾ ಇಂಜಿನ್ ಗಳಲ್ಲಿ ಉಷ್ಣವು ಹೆಚ್ಚಾಗುವುದರಿಂದ ಯಾವ ಪ್ರಯೋಜನವೂ ಇರುವುದಿಲ್ಲ. ಗಾಡಿ ಚೆನ್ನಾಗಿ ಓಡಲು ಅದು ಅಡ್ಡಿಯಾಗಿದೆ. ಇದು ಸಂಭವಿಸಲು ಕಾರಣವೇನು? ಒಣ ಭಾಗಗಳು ಒಂದಕ್ಕೊಂದು ಉಜ್ಜಿಕೊಳ್ಳುತ್ತವೆ. ಘರ್ಷಣೆಯನ್ನು ತಡೆಗಟ್ಟಲು ಎಣ್ಣೆಯನ್ನು ಹಾಕಬೇಕು. ಇಂಜಿನ್‌ನಲ್ಲಿ ಅಧಿಕ ಬಿಸಿಯಾಗುವುದು ಅಪಾಯ. ಇದರಂತೆಯೇ, ನಮ್ಮ ಜೀವನದಲ್ಲಿಯೂ "ಕೋಪ" ಅಥವಾ "ಕ್ರೋಧ" ಹಾನಿಕಾರಕವಾಗಬಹುದು.

 

ಸತ್ಯವೇದದಲ್ಲಿ, ಎಸ್ತೇರಳ ಪುಸ್ತಕದಲ್ಲಿ ಉಲ್ಲೇಖಿಸಿರುವ ಬಾಬಿಲೋನ್ ರಾಜನಾದ ಅಹಷ್ವೇರೋಷನು, ಹಾಮಾನನನ್ನು ಪದವಿಯಲ್ಲಿ ಹೆಚ್ಚಿಸಿ ಅವನಿಗೆ ದೊಡ್ಡ ಅಧಿಕಾರವನ್ನು ಕೊಟ್ಟು ತನ್ನ ಒಡ್ಡೋಲಗದ ಎಲ್ಲಾ ಸರದಾರರಲ್ಲಿ ಅವನಿಗೆ ಪ್ರಥಮಾಸನವನ್ನು ಅನುಗ್ರಹಿಸಿದನು. ಹಾಮಾನನನ್ನು, ರಾಜನ ಸೇವಕರೆಲ್ಲರೂ ಸಾಷ್ಟಾಂಗ ನಮಸ್ಕಾರ ಮಾಡಬೇಕೆಂದು ಆಜ್ಞಾಪಿಸಿದನು. ಆದರೆ ಮೊರ್ದೆಕೈ ತನಗೆ ಸಾಷ್ಟಾಂಗ ನಮಸ್ಕಾರ ಮಾಡುವುದಿಲ್ಲವೆಂದು ಹಾಮಾನನು ನೋಡಿ ಬಹು ಕೋಪವುಳ್ಳವನಾದನು. ಅವನು ಮೊರ್ದೆಕೈಯೊಬ್ಬನ ಮೇಲೆಯೇ ಕೈಯೆತ್ತುವದು ಸಾಲದೆಂದೆಣಿಸಿ ಇವನು ಯೆಹೂದಜನಾಂಗದವನೆಂದು ಕೇಳಿದ ಮೇಲೆ ಅಹಷ್ವೇರೋಷನ ರಾಜ್ಯದಲ್ಲಿದ್ದ ಮೊರ್ದೆಕೈಯ ಬಂಧುಗಳನ್ನು ಅಂದರೆ ಎಲ್ಲಾ ಯೆಹೂದ್ಯರನ್ನು ಸಂಹರಿಸಬೇಕೆಂದು ನಿರ್ಣಯಿಸಿಕೊಂಡನು. ಆದರೆ ಈ ಕಾರ್ಯವು ವಿಭಿನ್ನವಾಗಿ ಬದಲಾಯಿತು. ಆದ್ದರಿಂದ ಹಾಮಾನನು ಮೊರ್ದೆಕೈಯನ್ನು ನೇತುಹಾಕಿಸುವದಕ್ಕೆ ಸಿದ್ಧಮಾಡಲ್ಪಟ್ಟಿದ್ದ ಮರಕ್ಕೆ ಅವನನ್ನೇ ನೇತುಹಾಕಿದರು. ಹಾಮಾನನ ಜೀವನ ಏಕೆ ಆ ರೀತಿಯಾಗಿ ಅಂತ್ಯಗೊಂಡಿತು. ಒಂದು ಸಣ್ಣ ಕೋಪವನ್ನು ಮನಸ್ಸಿನಲ್ಲಿ ಇಟ್ಟುಕೊಂಡದ್ದರಿಂದಲೇ!

 

ನಮ್ಮ ಜೀವನದಲ್ಲಿಯೂ ಯಾವುದೋ ಒಂದು ನಿರಾಶೆ, ಕೃತಜ್ಞತೆ ಇಲ್ಲದೇ, ಅಗೌರವವಾಗಿ ನಡೆದುಕೊಳ್ಳುತ್ತಾರೆ ಎಂಬ ಚಿಂತನೆಯು ನಮ್ಮೊಳಗೆ ಅಡಗಿ ಸಿಟ್ಟನ್ನೆಬ್ಬಿಸುತ್ತದೆ. ಇದು ನಮ್ಮ ಜೀವನದ ಹರಿವು ಸರಾಗವಾಗಿ ಹೋಗುವುದನ್ನು ತಡೆಯುತ್ತದೆ. ಸಿಟ್ಟುಗಾರನು ಎಂದು ಎಣಿಸಲ್ಪಡದ ಹಾಗೆ ಕರ್ತನ ಮಾತುಗಳು, ಪವಿತ್ರಾತ್ಮನ ಅಭಿಷೇಕವು ನಮ್ಮನ್ನು ಸಮಾಧಾನದಿಂದ ಇರುವಂತೆ ಮಾಡಲಿ. ಕರ್ತನು ತನ್ನ ಪ್ರೀತಿಯನ್ನು ಮತ್ತು ಸಹಾಯವನ್ನು ಸಾವಿರ ಮಾರ್ಗಗಳಲ್ಲಿ ತೋರಿಸುತ್ತಾರೆ. ನಮ್ಮ "disappointments" ಎಲ್ಲಾ "His appointments". ಹಾಗಾಗಿ ಕೋಪವನ್ನು ಹೋಗಲಾಡಿಸಲು ದೇವರ ಬಳಿ ಪ್ರಾರ್ಥಿಸಬೇಕು. "ದೇವರಾತ್ಮನ ಮೂಲಕ ನಂಬಿಕೆಯಿಂದ ನೀತಿವಂತರಾಗುತ್ತೇವೆಂಬುವ ನಿರೀಕ್ಷೆ ಸಫಲವಾಗುವದೆಂದು ಎದುರುನೋಡುತ್ತೇವೆ" 

(ಗಲಾತ್ಯ 5:5). ಆದ್ದರಿಂದ ನಿರಾತಂಕದ ಹೃದಯವೇ ಕರ್ತನನ್ನೇ ನಂಬು! ಹಲ್ಲೆಲೂಯಾ!

- A. ಬ್ಯೂಲ

 

ಪ್ರಾರ್ಥನಾ ಅಂಶ:

ಆಂಧ್ರಪ್ರದೇಶ, ಒಡಿಶಾ ಮತ್ತು ಛತ್ತೀಸ್ ಗಢ ರಾಜ್ಯಗಳಲ್ಲಿ ಸೇವೆ ಮಾಡುತ್ತಿರುವ ಸೇವಕರ ಅತ್ಯವಶ್ಯಕ ಅಗತ್ಯಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş holiganbet padişahbet giriş bets10 extrabet royalbet süperbetin jojobet padişahbet holiganbet galabet matbet matbet giriş hilbet bahiscasino celtabet antikbet betoffice