By Village Missionary Movement
Friday, 17-Sep-2021ಧೈನಂದಿನ ಧ್ಯಾನ(Kannada) – 17.09.2021
EXPIRY DATE
"ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ; ಬಲ ಹೆಚ್ಚಿದರೆ ಎಂಭತ್ತು. ಕಷ್ಟಸಂಕಟಗಳೇ ಅದರ ಆಡಂಬರ ಅದು ಬೇಗನೆ ಗತಿಸಿಹೋಗುತ್ತದೆ; ..." - ಕೀರ್ತನೆಗಳು 90:10
ನಾವು ದಿನನಿತ್ಯ ಬಳಸುವ ಸಾಮಾಗ್ರಿಗಳು, ಅಂಗಡಿಗಳಲ್ಲಿ ಖರೀದಿಸಿ ಉಪಯೋಗಿಸುವ ಕೆಲವು ಉತ್ಪನ್ನಗಳಲ್ಲಿ Expiry Date ಎಂಬ ಒಂದನ್ನು ನಮೂದಿಸಲಾಗಿರುತ್ತದೆ. ಆ Expiry Date ಮುಕ್ತಾಯವಾಗುವಷ್ಟರಲ್ಲಿ ನಾವು ಅದನ್ನು ಬಳಸಬೇಕು. ಇಲ್ಲದಿದ್ದರೆ, ಯಾವ ವಸ್ತುವಾದರೂ ಸರಿ ಎಷ್ಟು ಹಣಕ್ಕೆ ಖರೀದಿಸಿದ್ದರೂ ಸರಿ, ನಂತರ ಆ ಸಾಮಗ್ರಿಗಳನ್ನು ಬಳಸಲಾಗುವುದಿಲ್ಲ. ವಿಶೇಷವಾಗಿ ಅದು ತಿನ್ನುವ ಪದಾರ್ಥವಾಗಿದ್ದರೆ ಕೆಟ್ಟುಹೋಗುತ್ತದೆ ಇಲ್ಲದಿದ್ದರೆ ಅದು ಗಬ್ಬು ನಾರುತ್ತದೆ. ಹಾಗಾಗಿ ನಾವು ಉತ್ಪನ್ನವನ್ನು ಖರೀದಿಸುವಾಗ ಅದರ Expiry Date ಅನ್ನು ನೋಡಿ ತೆಗೆದುಕೊಳ್ಳಲು ಗಮನ ಹರಿಸಬೇಕು.
ದೇವರಿಂದ ಸೃಷ್ಟಿಸಲ್ಪಟ್ಟ ಪ್ರತಿಯೊಬ್ಬರಿಗೂ ಈ ಭೂಮಿಯ ಮೇಲೆ Expiry Date ಇದೆ. ದೇವರು ನಮ್ಮನ್ನು ಯಾವ ಉದ್ದೇಶವೂ ಇಲ್ಲದೆ, ಯಾವ ಯೋಜನೆಯೂ ಇಲ್ಲದೆ ಸೃಷ್ಟಿಸಲಿಲ್ಲ. ಅಷ್ಟರೊಳಗೆ ನಾವು ದೇವರಿಗಾಗಿ ಮಾಡಬೇಕಾದ ಕಾರ್ಯಗಳನ್ನು ಮಾಡಿ ಮುಗಿಸಬೇಕು.
ಪರಿಶುದ್ಧ ಗ್ರಂಥದಲ್ಲಿ, ಒಂದು ಸ್ತ್ರೀ ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲದ ಭರಣಿಯನ್ನು ತೆಗೆದುಕೊಂಡು ಬಂದು ಯೇಸುವಿನ ತಲೆಯ ಮೇಲೆ ಹೊಯಿದಳು. ಆಗ ಯೇಸು ಆ ಸ್ತ್ರೀಯ ಬಗ್ಗೆ ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ ಎಂದರು ಹೀಗೆ ಆಕೆ ಯೇಸುವಿನ ಬಳಿ ಒಳ್ಳೆಯ ಸಾಕ್ಷಿಯನ್ನು ಪಡೆದುಕೊಂಡಳು. ಈ ಸ್ತ್ರೀಯ Expiry Date ಮುಗಿಯುವುದಕ್ಕಿಂತ ಮುಂಚೆ ಪರಲೋಕ ದೇವರಿಂದ ಒಳ್ಳೆಯ ಸಾಕ್ಷಿಯನ್ನು ಪಡೆದು ತನ್ನ ಕೆಲಸವನ್ನು ಮಾಡಿ ಮುಗಿಸಿದಳು.
ಇದನ್ನು ಓದುತ್ತಿರುವ ಪ್ರಿಯರೇ! ಪ್ರತಿಯೊಬ್ಬ ಮನುಷ್ಯನ ಆಯುಷ್ಕಾಲವು ಎಪ್ಪತ್ತು ವರ್ಷ, ಬಲ ಹೆಚ್ಚಿದರೆ ಎಂಭತ್ತು ವರ್ಷಗಳಿರಬಹುದು. ಆದ್ದರಿಂದ ನಾವು ಭೂಮಿಯ ಮೇಲೆ ಜೀವಿಸುವ ದಿನಗಳಲ್ಲಿ ನಮಗೆ ಕೃಪೆಯ ನಿಮಿತ್ತವಾಗಿ ದೇವರಿಂದ ದಯಪಾಲಿಸಲ್ಪಟ್ಟ ಆಯುಷ್ಕಾಲದಲ್ಲಿ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು, ನಮ್ಮ Expiry Date ಮುಗಿಯುವಷ್ಟರಲ್ಲಿ ನಮ್ಮಿಂದಾಗುವುದನ್ನು ಮಾಡೋಣ! ನಮ್ಮ ಜೀವನವನ್ನು ಬಹಳ ಪ್ರಯೋಜನಕರವಾಗಿ ಮಾರ್ಪಡಿಸಿ ಕೊಂಡು ಕಾರ್ಯ ಮಾಡೋಣ! ಏಕೆಂದರೆ ಪ್ರತಿದಿನವೂ ಕರ್ತನನ್ನು ಭಯದೊಂದಿಗೆ ಸೇವಿಸಲು ಅಭ್ಯಾಸ ಮಾಡಿಕೊಳ್ಳೋಣ. ದೇವರ ಬಳಿ ಕೃಪೆಯನ್ನು ಹೊಂದಿಕೊಳ್ಳಲು ಬಯಸೋಣ. ದೇವರು ಆಸೆಯನ್ನು ಪೂರೈಸುತ್ತಾರೆ.
- Mrs. ಬೇಬಿ ಕಾಮರಾಜ್
ಪ್ರಾರ್ಥನಾ ಅಂಶ:
ಆಂಧ್ರ ರೇಖಾ ಪುಣ್ಯಗಿರಿ ಬೆಟ್ಟದ ಹಳ್ಳಿಯಲ್ಲಿ ಆಲಯದ ನಿರ್ಮಾಣ ಕಾಮಗಾರಿ ಬೇಗನೆ ಮುಗಿಯುವಂತೆ, ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482