By Village Missionary Movement
Thursday, 16-Sep-2021ಧೈನಂದಿನ ಧ್ಯಾನ(Kannada) – 16.09.2021
ವಿರೋಧಾಭಾಸದ ನಾಯಕತ್ವ
"ಬರಬೇಕಾದಾತನು ನೀನೋ ಇಲ್ಲವೆ ನಾವು ಬೇರೊಬ್ಬನಿಗಾಗಿ ನೋಡಬೇಕೋ ಅಂದನು” - ಮತ್ತಾಯ 11:3
ಒಂದು ಕನ್ವೆನ್ಷನ್ ಕೂಟದಲ್ಲಿ ಬೋಧಕರೊಬ್ಬರು ಪ್ರಸಂಗ ಮಾಡುತ್ತಿದ್ದರು. ಸೇವೆಯಾದರೂ ಸರಿ, ಕುಟುಂಬವಾದರೂ ಸರಿ, ವಿರೋಧಾಭಾಸವು ಅಗತ್ಯವೇ ಎಂದು ಮಾತನಾಡಿದರು. ಹೊಸದಾಗಿ ರಕ್ಷಣೆ ಹೊಂದಿದ್ದ ನನಗೆ ಇದು ಸ್ವಲ್ಪ ವಿರೋಧಾಭಾಸ ವಾಗಿಯೇ ಇತ್ತು. ಕುಟುಂಬವೋ, ಸೇವೆಯೋ, ಕೆಲಸ ಎಂದು ಬಂದರೆ ಒಂದೇ ರೀತಿ ತಾನೇ ಇರಬೇಕು. ಇದೇನು ಹೊಸ ಉಪದೇಶ ಎಂದು ನನ್ನೊಳಗೆ ಆಲೋಚನೆಗಳು ಉಂಟಾದವು.
ಕರ್ತನ ಮಾರ್ಗವನ್ನು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವ ಕರ್ತನ ಶಬ್ದವಾಗಿದ್ದ ಯೋಹಾನನು, ಮತ್ತಾಯ 3-ನೇ ಅಧ್ಯಾಯದಲ್ಲಿ ಯೇಸುಕ್ರಿಸ್ತನ ಬಗ್ಗೆ ಬಹಳ ತೊಂದರೆಗೀಡಾದವರಾಗಿ ಮಾತನಾಡಿದರು. ತಮಗೆ ನಾಯಕನಾಗಿದ್ದ ಯೇಸುವಿನ ಬಗ್ಗೆ ಯೋಹಾನನಿಗೆ ಸಂಶಯಗಳು ಅರ್ಥಮಾಡಿಕೊಳ್ಳದ ಸ್ಥಿತಿ ಉಂಟಾದದ್ದರಿಂದ ಮಾತುಗಳಲ್ಲಿ ಆಲೋಚನೆಗಳಲ್ಲಿ ಎಡವುತ್ತಿದ್ದರು. ಸೆರೆಮನೆಯಲ್ಲಿದ್ದ ತನ್ನನ್ನು ಯೇಸು ಭೇಟಿಮಾಡಲೂ ಇಲ್ಲ ಮತ್ತು ಆತನನ್ನು ಬಿಡುಗಡೆ ಮಾಡಲು ಯಾವುದೇ ಪ್ರಯತ್ನವನ್ನೂ ಮಾಡಲಿಲ್ಲ ಎಂಬುದು ಯೋಹಾನನ ಆಲೋಚನೆಯಾಗಿ ಇದ್ದಿರಬಹುದು.
ಅನೇಕ ಸಂದರ್ಭಗಳಲ್ಲಿ ನಾವು ನಿರೀಕ್ಷಿಸಿದಂತೆ ಕೆಲವು ಕಾರ್ಯಗಳು ಅಸ್ತಿತ್ವದಲ್ಲಿರುವುದಿಲ್ಲ. ಒಂದು ಕುಟುಂಬದಲ್ಲಿ ಐದು ಜನರಿದ್ದರೆ ಐದು ಜನರೂ ಒಂದೇ ರೀತಿ ಯೋಚಿಸುವುದಿಲ್ಲ ಮತ್ತು ವರ್ತಿಸುವುದಿಲ್ಲ. ಕುಟುಂಬದಲ್ಲಿರುವ ನಾಯಕತ್ವದ ಕಾರ್ಯಗಳನ್ನು ಸ್ವೀಕರಿಸಲು ಮನಸ್ಸಿಲ್ಲ. ಅದರಂತೆ ನಾಯಕತ್ವವನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಠಿಣವಾಗಿಯೇ ಇದೆ. ಇದರಲ್ಲಿ ವಿಶೇಷ ಏನೆಂದರೆ ಕೆಲವೊಮ್ಮೆ ಸತ್ಯವೇದದ ವಾಕ್ಯಗಳೇ ನಮಗೆ ವಿರೋಧಾತ್ಮಕವಾಗಿ ಕಾಣುತ್ತವೆ. ಉದಾಹರಣೆಗೆ, ಏಸಾ, ಯಾಕೋಬನ ಬಗ್ಗೆ ದೇವರ ಮಾರ್ಗದರ್ಶನವನ್ನು ನೋಡಿರಿ. (ರೋಮಾ 9: 10-16)
ಪರಿಶುದ್ಧ ಗ್ರಂಥವು ಹೇಳುವ ಪ್ರಕಾರ, ಅರ್ಥಮಾಡಿಕೊಳ್ಳುವುದು ಎಂಬುದು ನಂಬಿಕೆ ಮತ್ತು ವಿಧೇಯತೆಯ ಮೇಲೆ ಆಧಾರಗೊಂಡಿದೆ. ದೇವರು ಕೊಟ್ಟಿರುವ ಸತ್ಯವೇದವು ದೋಷರಹಿತವಾದದ್ದು ಎಂದು ನಾವು ನಂಬಿದಾಗ ಮಾತ್ರವೇ ಅದರಲ್ಲಿ ಯಾವುದೇ ವಿರೋಧಾಭಾಸಗಳಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯ.
- P. ಜಾಕೋಬ್ ಶಂಕರ್
ಪ್ರಾರ್ಥನಾ ಅಂಶ:
ಒಡಿಶಾದ ಕುಮ್ಮಾ ಬ್ಲಾಕ್ ನಲ್ಲಿ ಒರಿಯಾದಲ್ಲಿ ಹೊಸದಾಗಿ ಸೇವೆ ಆರಂಭಿಸಲು, ಏಕೈಕ ದರ್ಶನವುಳ್ಳ ಸೇವಕರು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482