By Village Missionary Movement
Wednesday, 15-Sep-2021ಧೈನಂದಿನ ಧ್ಯಾನ(Kannada) – 15.09.2021
ಒಡೆದು ಹಾಕುತ್ತಾರೆ! ರೂಪಿಸಲ್ಪಡುತ್ತೀರ !!
"...ಅದನ್ನು ಮತ್ತೊಂದು ಪಾತ್ರೆ ಯನ್ನಾಗಿ ಮಾಡಿದನು." - ಯೆರೆಮಿಯ 18: 4
ದೇವರ ವಿಷಯ ಎಂದು ಬಂದರೆ, ಅದು ನಮ್ಮ ಮಾನವನ ಮೆದುಳಿಗೆ ಸ್ವಲ್ಪ ಗೊಂದಲವನ್ನುಂಟು ಮಾಡುತ್ತದೆ. ಚಿಕ್ಕ ಮಕ್ಕಳು ಆಟವಾಡುತ್ತಿರುತ್ತಾರೆ, ಇದ್ದಕ್ಕಿದ್ದಂತೆ ಮಣ್ಣನ್ನು ತೆಗೆದುಕೊಂಡು ತಿನ್ನಲು ಪ್ರಾರಂಭಿಸುತ್ತಾರೆ. ಪೋಷಕರು ತಕ್ಷಣ ಕೈಮೇಲೆ ಒಂದು ಏಟನ್ನು ಹಾಕುತ್ತಾರೆ. ಸಣ್ಣ ಮಕ್ಕಳಿಗೋ ಅದರಿಂದ ಕಣ್ಣೀರು ಬರುತ್ತದೆ. ಅವರು ತಕ್ಷಣ ಅಳುತ್ತಾರೆ. ನಾವು ತರಗತಿಯಲ್ಲಿ ವಿದ್ಯಾರ್ಥಿಗಳಾಗಿದ್ದಾಗ ಇದ್ದಕ್ಕಿದ್ದಂತೆ ನಮ್ಮ ಸ್ವಭಾವಕ್ಕೆ ತಕ್ಕಂತೆ ಚೇಷ್ಟೆ ಮಾಡುತ್ತಿದ್ದೆವು. ಆಗ ಶಿಕ್ಷಕರು ನಮ್ಮನ್ನು ಗದರಿಸುತ್ತಾರೆ. ಕೆಲವೊಮ್ಮೆ ನಮ್ಮನ್ನು ಹೊಡೆದು ಬಿಡುತ್ತಾರೆ. ಇದು ನಮಗೆ ನೋವುಂಟು ಮಾಡುತ್ತದೆ. ಆದರೆ ಮೇಲಿನ ಎರಡೂ ಕಾರ್ಯಗಳು ನಮ್ಮನ್ನು ಸರಿಮಾಡುವುದಕ್ಕೆ ಹೊರತು, ಬೇರೆ ಯಾವ ಕಾರಣವೂ ಇಲ್ಲ, ಉದ್ದೇಶವೂ ಇಲ್ಲ.
ಪರಿಶುದ್ಧ ಗ್ರಂಥದಲ್ಲಿ, ದೇವರು ತನ್ನ ಜನರನ್ನು ಹೇಗೆ ನೋಡುತ್ತಾರೆ ಎಂಬುದನ್ನು ಯೆರೆಮಿಯ18- ನೇ ಅಧ್ಯಾಯದ ಮೂಲಕ ನಾವು ಗ್ರಹಿಸಿ ಕೊಳ್ಳಬಹುದು. ದೇವರು ತನ್ನ ಜನರನ್ನು ಕುಂಬಾರನ ಕೈಯಲ್ಲಿರುವ ಮಣ್ಣಿನ ಮಡಿಕೆಯಾಗಿ ರೂಪಿಸುವಾಗ ದಿಢೀರೆಂದು ಅದು ಕೆಟ್ಟು ಹೋಗಿಬಿಡುತ್ತದೆ. ಆದರೆ ಆ ಕುಂಬಾರನು ಆ ಮಣ್ಣನ್ನು ತನ್ನ ದೃಷ್ಟಿಗೆ ಚೆನ್ನಾಗಿ ಕಾಣುವಂತೆ, ಅದಕ್ಕೆ ಸ್ವಲ್ಪ ನೊವನ್ನುಂಟು ಮಾಡಿ, ಪರಿಸ್ಥಿತಿಗೆ ತಕ್ಕಂತೆ ಮತ್ತೊಂದು ಪಾತ್ರೆಯನ್ನಾಗಿ ರೂಪಿಸಿದನು, ದೇವರು ತನ್ನ ಜನರನ್ನು ಈ ಕಾರ್ಯಕ್ಕೆ ಹೋಲಿಸಿ ಮಾತನಾಡಿ, ಅವರನ್ನು ಸರಿಪಡಿಸುವುದನ್ನು ನಾವು ನೋಡಬಹುದು.
ಪ್ರಿಯರೇ! ದೇವರು ನಮ್ಮ ಕುಂಬಾರ. ನಾವು ಅವರ ಕೈಯಲ್ಲಿರುವ ಜೇಡಿಮಣ್ಣು. ನಮ್ಮ ಸ್ವಭಾವದಿಂದಾಗಿ ಕೆಲವೊಮ್ಮೆ ಹಾಳಾಗಿ ಹೋಗುತ್ತೇವೆ. ದೇವರು ನಮ್ಮನ್ನು ಸರಿಪಡಿಸುವುದಕ್ಕಾಗಿ ಕೆಲವು ಸಮಸ್ಯೆಗಳನ್ನೋ, ಹೋರಾಟಗಳನ್ನೋ, ಶೋಧನೆಗಳನ್ನೋ, ಅನುಮತಿಸುವ ಮೂಲಕ ನಮ್ಮನ್ನು ಒಡೆದು ಹಾಕಲು ಚಿತ್ತವಿಟ್ಟಿರುತ್ತಾರೆ. ದೇವರು ತಮ್ಮ ದೃಷ್ಟಿಗೆ ಉತ್ತಮವಾಗಿರುವಂತೆ ನಮ್ಮನ್ನು ಮತ್ತೊಂದು ಪಾತ್ರೆಯಾಗಿ ರೂಪಿಸುತ್ತಾರೆ. ಅಂದರೆ ನಮ್ಮನ್ನೂ, ನಮ್ಮ ಸ್ವಭಾವವನ್ನೂ ಬದಲಾಯಿಸುತ್ತಾರೆ. ನಂತರ ನಾವು ಉಪಯೋಗವಾಗುತ್ತೇವೆ, ದೇವರ ನಾಮವನ್ನು ಮಹಿಮೆಪಡಿಸುತ್ತೇವೆ. ಆದ್ದರಿಂದ ನಾವು ಅರ್ಥಮಾಡಿಕೊಳ್ಳಬೇಕಾದ ಒಂದು ವಿಷಯವೆಂದರೆ ದೇವರು ನಮ್ಮನ್ನು ಒಡೆದು ಹಾಕುತ್ತಾರೆ! ಅದರಿಂದಾಗಿ ನಾವು ಹಾಳಾಗಿ ಹೋಗುವುದಿಲ್ಲ! ರೂಪಿಸಲ್ಪಡುತ್ತೇವೆ! ಆದ್ದರಿಂದ ನಾವು ದೇವರ ಕೈಗಳಲ್ಲಿ ನಮ್ಮನ್ನು ಒಪ್ಪಿಸಿ ಕೊಡೋಣ. ದೇವರಿಗಾಗಿ ಉಪಯೋಗ ವಾಗೋಣ!
- T. ಶಂಕರ್ ರಾಜ್
ಪ್ರಾರ್ಥನಾ ಅಂಶ:
ಮಾಧ್ಯಮ ಸೇವೆಗಳ ಮೂಲಕ ಭೇಟಿಮಾಡಲ್ಪಡುವ ಆತ್ಮಗಳು ಇನ್ನೂ ದೇವರಿಗೆ ಹತ್ತಿರವಾಗಿ ಸಮೀಪಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482