Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.09.2021
Share:

By Village Missionary Movement

Tuesday, 14-Sep-2021

ಧೈನಂದಿನ ಧ್ಯಾನ(Kannada) – 14.09.2021

 

ಜಾಲೀಮರ

 

"ಬೆಚಲೇಲನು ಜಾಲೀಮರದಿಂದ ಮಂಜೂಷವನ್ನು ಮಾಡಿದನು." - ವಿಮೋಚನ. 37: 1

 

ಜಾಲೀ ಮರವು ಇಸ್ರಾಯೇಲ್ ದೇಶದಲ್ಲಿ ಕಂಡುಬರುವ ಒಂದು ಬಗೆಯ ಮರವಾಗಿದೆ. ಈ ಮರದ ಎಲ್ಲಾ ಭಾಗಗಳಲ್ಲಿಯೂ ಉದ್ದವಾದ ಮುಳ್ಳುಗಳು ಕಂಡುಬರುತ್ತವೆ. ಅದು ಗಾಳಿಯಲ್ಲಿ ಅಲುಗಾಡುವಾಗಲೆಲ್ಲಾ, ರೆಂಬೆಗಳ ಮೇಲಿನ ಮುಳ್ಳುಗಳು ಅಲುಗಾಡುತ್ತಾ ಆ ಮರವನ್ನೇ ಚುಚ್ಚುತ್ತವೆ, ಇದರಿಂದಾಗಿ ಅದರೊಳಗಿನಿಂದ ನೀರಿನಂತಹ ಅಂಶ ಸೋರುತ್ತದೆ. ಆ ಮರವು ಈಗಲೇ ಅರಣ್ಯ ಸ್ಥಳವಾಗಿದೆ. ಈಗಾಗಲೇ ನೀರಿಲ್ಲದೆ ಹೋರಾಡಿ ಬೆಳೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ತನ್ನ ಮುಳ್ಳುಗಳಿಂದಲೇ ಚುಚ್ಚಲ್ಪಟ್ಟು ತನ್ನಲ್ಲಿರುವ ನೀರು ಕೂಡ ಹೊರಬರುತ್ತದೆ. ಹೀಗೆ ನೀರು ಹೊರಹೋಗುತ್ತಾ, ಹೋಗುತ್ತಾ ಆ ಮರ ತನ್ನನ್ನು ಬಿಗಿಗೊಳಿಸಲು ಪ್ರಾರಂಭಿಸುತ್ತದೆ. ಅಂತಿಮವಾಗಿ ಮರವು ಬಿಗಿಯಾಗಿ ಮುಳ್ಳುಗಳನ್ನು ಉದುರಿಸಲು ಆರಂಭಿಸುತ್ತದೆ. ಈ ಮರದಿಂದ ತಯಾರಿಸಿದ ಉತ್ಪನ್ನಗಳನ್ನು 4000 ವರ್ಷಗಳಿಗಿಂತ ಹೆಚ್ಚಾಗಿ ಬಳಸಲಾಗುತ್ತದೆ. ಯಾರಿಗೂ ಬೇಡವಾದ ಒಂದು ಅನುಪಯುಕ್ತ ಮುಳ್ಳು ಮರ, ಇದನ್ನು ನಮ್ಮ ದೇವರು ನೆನಪಿಸಿಕೊಂಡರು. ವಿಮೋ. 25: 8 ರಲ್ಲಿ ಯಾಜಕ ಗುಡಾರದಲ್ಲಿ ಉಪಯೋಗಿಸುವ ಮಂಜೂಷ, ಮೇಜು, ಹಲಗೆಗಳಂತಹ ಎಲ್ಲಾ ಮರಗೆಲಸಗಳನ್ನು ಈ ಮರದಿಂದಲೇ ಮಾಡಲಾಗಿತ್ತು. ದೇವರು ಯಾಜಕ ಗುಡಾರಕ್ಕಾಗಿ ಕೊಡಬೇಕೆಂದು ಹೇಳಿದ ಕಾಣಿಕೆಗಳಲ್ಲಿ ಜಾಲೀ ಮರವು ಒಂದಾಗಿತ್ತು.

 

ಇದರಂತೆಯೇ ಸತ್ಯವೇದದಲ್ಲಿ ಮಾರ್ಕ 5: 5 ರಲ್ಲಿ ರಾತ್ರಿ ಹಗಲು ಯಾವಾಗಲೂ ಬೆಟ್ಟಗಳಲ್ಲಿಯೂ ಸಮಾಧಿಗಳ ಲ್ಲಿಯೂ ಕೂಗುತ್ತಾ ಕಲ್ಲುಗಳಿಂದ ತನ್ನನ್ನು ತಾನೇ ಕೊಯ್ದುಕೊಳ್ಳುತ್ತಿದ್ದ ಮನುಷ್ಯನನ್ನು ಹುಡುಕಿ ಯೇಸು ಬಂದರು. ಅವನೊಳಗಿದ್ದ ನೂರಾರು ದೆವ್ವಗಳನ್ನು ಹೊರಹಾಕಿದರು. ಅವನು ಬಟ್ಟೆಗಳನ್ನು ಧರಿಸಿಕೊಂಡು ಸ್ವಸ್ಥಚಿತ್ತನಾದ ಮೇಲೆ ತಾನು ಆತನ ಜೊತೆಯಲ್ಲಿಯೇ ಇರುತ್ತೇನೆಂದು ಆತನನ್ನು ಬೇಡಿಕೊಂಡಾಗ, ಯೇಸು ಅವನನ್ನು ನೋಡಿ, ನಿನ್ನ ಮನೆಗೂ ಸ್ನೇಹಿತರ ಬಳಿಗೂ ಹೋಗಿ ಕರ್ತನು ನಿನ್ನ ಮೇಲೆ ಕರುಣೆಯಿಟ್ಟು ಎಂಥಾ ಮಹತ್ಕಾರ್ಯಗಳನ್ನು ಮಾಡಿ ದ್ದಾನೆಂದು ಅವರಿಗೆ ಹೇಳು ಎಂದು ಹೇಳಿ ಕಳುಹಿಸಿ ಬಿಟ್ಟರು. ಲೂಕ 7:39 ರ ಪ್ರಕಾರ ಅವನು ಹೋಗಿ ಊರೆಲ್ಲಾ ಅವರ ಬಗ್ಗೆ ಮತ್ತು ಅವರು ಮಾಡಿದ ಎಲ್ಲಾ ಅದ್ಭುತಗಳ ಬಗ್ಗೆ ತಿಳಿಸಿದನು. ಅಲ್ಲಿಯವರೆಗೆ ಯೇಸುವನ್ನು ಅಂಗೀಕರಿಸದ ಆ ಊರಿನವರು, ಅವನ ಸಾಕ್ಷಿಯನ್ನು ಕೇಳಿದ ನಂತರ, ಯೇಸುವಿಗಾಗಿ ಕಾದಿದ್ದು ಸಂತೋಷದಿಂದ ಆತನನ್ನು ಸ್ವೀಕರಿಸಿದರು.

 

ಜೀವನದಲ್ಲಿ ದೀರ್ಘಾವಧಿಯ ಗಾಯಗಳಿಂದ ನಿಮ್ಮಲ್ಲಿ ಯಾರಾದರೂ ಬೇಸತ್ತಿದ್ದೀರಾ? ಜಾಲೀ ಎಂಬ ಮುಳ್ಳು ಮರವನ್ನು ದೇವರು ಮರೆಯದೇ ತನ್ನ ಘನವಾದ ಕೆಲಸಕ್ಕಾಗಿ ಉಪಯೋಗಿಸಿಕೊಂಡರು. ಅಂತೆಯೇ, ತನ್ನನ್ನು ತಾನೇ ನೋಯಿಸಿಕೊಳ್ಳುತ್ತಿದ್ದ ಸಮಾಧಿ ಮನುಷ್ಯನನ್ನು ಕೂಡ ಮರೆಯಲಿಲ್ಲವೇ! ಅವನನ್ನೂ ತನ್ನ ನಾಮ ಮಹಿಮೆಗಾಗಿ ಉಪಯೋಗಿಸಿದರೇ. ಆ ಒಳ್ಳೆಯ ದೇವರು ಖಂಡಿತವಾಗಿಯೂ ನಿಮ್ಮ ಗಾಯಗೊಂಡ ಹೃದಯವನ್ನು ಸಂತೈಸುತ್ತಾರೆ. ಅವರೇ ಗುಣಪಡಿಸುವ ದೇವರು; ಆತನು ನಿಮ್ಮ ನೋವನ್ನು ನೀಗಿಸಿ ಸಂತೋಷದಿಂದ ಬದುಕುವಂತೆ ಮಾಡುತ್ತಾರೆ. ಆಮೆನ್!

- Mrs. ಮಂಜುಳಾ

 

ಪ್ರಾರ್ಥನಾ ಅಂಶ:

ನಮ್ಮ ಮಾಧ್ಯಮ ಸೇವೆಗಳಲ್ಲಿ ಕೆಲಸ ಮಾಡಲು ಪ್ರತಿಭಾವಂತ ಸಮರ್ಪಿತ ಸೇವಕರು ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al