Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.09.2021
Share:

By Village Missionary Movement

Monday, 13-Sep-2021

ಧೈನಂದಿನ ಧ್ಯಾನ(Kannada) – 13.09.2021

 

ಸ್ವಸ್ಥವಾಗಲು ಮನಸ್ಸುಂಟೋ?

 

 "...ನಿನಗೆ ಸ್ವಸ್ಥವಾ ಗುವದಕ್ಕೆ ಮನಸ್ಸುಂಟೋ..." - ಯೋಹಾನ 5:6

 

ಯೇಸು ಕ್ರಿಸ್ತನು ಹಬ್ಬಕ್ಕಾಗಿ ಯೆರೂಸಲೇಮಿಗೆ ಬಂದಾಗ, ಕುರೀ ಅಗಸೇಬಾಗಲಿನ ಹತ್ತಿರದಲ್ಲಿದ್ದ ಬೇತ್ಸಥಾ ಎಂಬ ಕೊಳಕ್ಕೆ ಹೋದರು. ಅಲ್ಲಿ 38 ವರ್ಷಗಳಿಂದ ಅನಾರೋಗ್ಯದಿಂದ ಮಲಗಿದ್ದ ಒಬ್ಬ ವ್ಯಕ್ತಿ ಇದ್ದನು. ಯೇಸು ಅವನಿಗೆ, "ನಿನಗೆ ಸ್ವಸ್ಥವಾಗಲು ಮನಸ್ಸುಂಟೋ?" ಎಂದು ಕೇಳಿದ್ದನ್ನು ನಾವು ಸತ್ಯವೇದದಲ್ಲಿ ಓದುತ್ತೇವೆ. ಅವನು ವಾಸಿಯಾಗಲು ಇಷ್ಟವಿಲ್ಲದೇನಾ ಅಲ್ಲಿ ಮಲಗಿದ್ದನು? ಇದು ಎಂತಹ ಪ್ರಶ್ನೆಯೆಂದು ತೋರುತ್ತದಲ್ಲವೇ! ಇವನು 38 ವರ್ಷಗಳಿಂದ ಅಲ್ಲೇ ಮಲಗಿರುವುದರಿಂದ, ಜೀವನದ ಮೇಲೆ ನಂಬಿಕೆ ಕಳೆದುಕೊಂಡವನಾಗಿ, ಇನ್ನು ಸಾಯುವವರೆಗೂ ಈ ಸ್ಥಳವೇ ನಮಗೆ ಗತಿ ಎಂದು ಹತಾಶೆ ಮತ್ತು ವೇದನೆಯಲ್ಲಿದ್ದಿರಬಹುದು. ಅವರು ಈ ಪ್ರಶ್ನೆಯನ್ನು ಅವನ ಹತಾಶೆ ಮತ್ತು ವೇದನೆಯನ್ನು ಬದಲಿಸಲು ಮತ್ತು ಅವನು ತನ್ನ ಸ್ಥಿತಿಯನ್ನು ಅರಿತುಕೊಳ್ಳಲು ಕೇಳಿದರು.

 

ಇವರಾದರೂ ತನ್ನನ್ನು ಆ ಬೇತ್ಸಥಾ ಕೊಳಕ್ಕೆ ಮೊದಲು ಇಳಿಸುತ್ತಾರಾ ಎಂದು ಯೋಚಿಸಿರಬಹುದು. ತನ್ನನ್ನು ಪ್ರಶ್ನೆ ಮಾಡಿದ್ದು ಯೇಸು ಎಂದು ಅವನಿಗೆ ತಿಳಿದಿರಲಿಲ್ಲ. ತನ್ನ ಕುಂದುಕೊರತೆಯನ್ನು ಅವರಿಗೆ ಹೇಳುತ್ತಾನೆ. ಯೇಸು ತಕ್ಷಣವೇ ಅವನಿಗೆ "ಎದ್ದು, ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ನಡೆ" ಎಂದು ಹೇಳಿದಾಗ ವಿಧೇಯನಾಗಿ ಎದ್ದನು, ನಡೆದನು, ಸ್ವಸ್ಥವಾದನು. ಎಂತಹ ಅದ್ಭುತ ನೋಡಿ,! ಯೇಸು ಅವನ ಬಳಿ ಆ ಪ್ರಶ್ನೆಯನ್ನು ಕೇಳದೆ ಸುಮ್ಮನೆ, ಎದ್ದೇಳು, ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ ಎಂದು ಹೇಳಿದ್ದರೆ, ಅವನು ತಕ್ಷಣ ಆ ಮಾತಿಗೆ ವಿಧೇಯನಾಗುತ್ತಿದ್ದನು ಎಂಬುದು ಸಂದೇಹವೇ. ಅವನನ್ನು ಸ್ವಸ್ಥ ಮಾಡುವ ಮುನ್ನ ಅವನು ಸ್ವಸ್ಥತೆ ಹೊಂದಿಕೊಳ್ಳುವಂತೆ ಅವನನ್ನು ತಯಾರು ಮಾಡುವ ಸಲುವಾಗಿಯೇ ಅವರು ಆ ಪ್ರಶ್ನೆಯನ್ನು ಕೇಳಿದರು.

 

ಇಂದಿಗೂ ನಮ್ಮ ಕರ್ತನಾದ ಯೇಸು ನಮ್ಮಲ್ಲಿ ಪ್ರತಿಯೊಬ್ಬರನ್ನೂ ನೋಡಿ ಕೇಳುತ್ತಿದ್ದಾರೆ. "ನಿನಗೆ ಸ್ವಸ್ಥವಾಗಲು ಮನಸ್ಸುಂಟೋ?" ಎಂದು! ಮೊದಲು, ನಮ್ಮ ಪರಿಸ್ಥಿತಿ ಏನೆಂದು ನಾವು ಅರಿತುಕೊಳ್ಳಬೇಕು. ನಮ್ಮ ಆತ್ಮದಲ್ಲಿ ಬಲಹೀನತೆ, ಅನಾರೋಗ್ಯ ಇರಬಹುದು, ಮದ್ಯಪಾನ, ಮಾದಕ ದ್ರವ್ಯಗಳು, ಸಿಗರೇಟುಗಳು ಮತ್ತು ಇತರ ಅನೇಕ ಕೆಟ್ಟ ಅಭ್ಯಾಸಗಳಿಗೆ ದಾಸರಾಗಿ ಅದನ್ನು ಬಿಡಲಾಗದೆ ಪರಿತಪಿಸುತ್ತಿರಬಹುದು. ಅಥವಾ ಅದನ್ನು ಬಿಟ್ಟುಬಿಡುವ ಉದ್ದೇಶವೂ ಇಲ್ಲದಿರಬಹುದು. ಇದನ್ನು ಓದುತ್ತಿರುವ ಪ್ರತಿಯೊಬ್ಬರಿಗೂ ಇದು ದೇವರ ಕರೆಯುವಿಕೆಯಾಗಿ ಬರುತ್ತಿದೆ. ದೇವರೇ, ನಾನು ಸ್ವಸ್ಥವಾಗಲು ಬಯಸುತ್ತಿದ್ದೇನೆ. ನಿಮ್ಮ ರಕ್ತದಿಂದ ನನ್ನ ಪಾಪಗಳನ್ನು ತೊಳೆದು, ನನ್ನನ್ನು ಶುದ್ಧೀಕರಿಸಿ, ನನ್ನನ್ನು ಬಿಡಿಸಿ ಎಂದು ಈಗಲೇ ಅವರು ಬಳಿ ಕೇಳಿರಿ. "ಕೇಳಿಕೊಳ್ಳುವ ಪ್ರತಿಯೊಬ್ಬನು ಹೊಂದಿಕೊಳ್ಳುವನು" ಎಂಬ ವಾಕ್ಯದ ಪ್ರಕಾರ ಕೂಡಲೇ ಪಾಪದಿಂದ ಬಿಡುಗಡೆಯಾಗುತ್ತೀರ, ರೋಗದಿಂದಲೂ ಸ್ವಸ್ಥವಾಗುತ್ತೀರ. ಅವರ ಪ್ರೀತಿಯ ಧ್ವನಿಗೆ ವಿಧೇಯರಾದರೆ ತಕ್ಷಣವೇ ವಿಮೋಚನೆ ಮತ್ತು ಆಶೀರ್ವಾದವನ್ನು ಹೊಂದಬಹುದು. ನಿನಗೆ ಸ್ವಸ್ಥವಾಗಲು ಮನಸ್ಸುಂಟೋ? ಯೇಸುವಿನ ಬಳಿಗೆ ಬಂದು ಬಿಡು! ಆಮೆನ್!

- Mrs. ಭುವನ ಧನಪಾಲನ್

 

ಪ್ರಾರ್ಥನಾ ಅಂಶ:

ಸಹ ಸೇವಕರ ಮೂಲಕವಾಗಿ ಭೇಟಿ ಮಾಡಲ್ಪಟ್ಟಿರುವ ಆಲಯಗಳಿಲ್ಲದ ಹಳ್ಳಿಗಳಲ್ಲಿ ಕರ್ತನ ಆಲಯವು ಕಟ್ಟಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet