By Village Missionary Movement
Sunday, 12-Sep-2021ಧೈನಂದಿನ ಧ್ಯಾನ(Kannada) – 12.09.2021 (Kids Special)
ಗೋಪಿಕಾಳು - ಕೋಳಿ ಮರಿಗಳು
"...ಇಕ್ಕಟ್ಟಿನಲ್ಲಿ ನಾನು ಅವನ ಸಂಗಡ ಇದ್ದು ಅವನನ್ನು ತಪ್ಪಿಸಿ; ಘನಪಡಿಸುವೆನು." - ಕೀರ್ತನೆ 91:15
ಅದೊಂದು ಹಚ್ಚ ಹಸಿರಾದ ನೀರಿನ ತೊರೆಗಳು ಯಾವಾಗಲೂ ಹರಿಯುತ್ತಿದ್ದ ಸುಂದರವಾದ ಪುಟ್ಟ ಹಳ್ಳಿ. ಈ ಹಳ್ಳಿಯಲ್ಲಿ ಗೋಪಿಕಾ ಎಂಬ ಪುಟ್ಟ ಹುಡುಗಿ ವಾಸಿಸುತ್ತಿದ್ದಳು. ಅವಳಿಗೆ ಪಕ್ಷಿಗಳನ್ನು ಸಾಕುವುದೆಂದರೆ ತುಂಬಾ ಇಷ್ಟ. ಕುಟ್ಟೀಸ್ ನಿಮ್ಮ ಮನೆಯಲ್ಲಿ ನೀವು ಯಾವ ಪ್ರಾಣಿ ಮತ್ತು ಪಕ್ಷಿಗಳನ್ನೆಲ್ಲಾ ಸಾಕುತ್ತಿದ್ದೀರ. ಬೆಕ್ಕು, ನಾಯಿ, ಗಿಳಿ, ಕೋಳಿ ಇವೆಲ್ಲವನ್ನೂ ಸಾಕುತ್ತಿದ್ದೀರ ತಾನೇ! ಗೋಪಿಕಾ ಕೂಡ ತನ್ನ ಇಷ್ಟದಂತೆ 6 ಬಣ್ಣದ ಕೋಳಿ ಮರಿಗಳನ್ನು ಮತ್ತು ತಾಯಿ ಕೋಳಿಯನ್ನು ತೆಗೆದುಕೊಂಡು ಆಸೆಯಿಂದ ಸಾಕುತ್ತಿದ್ದಳು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅವಳು ಕೋಳಿ ಮರಿಗಳಿಗೆ ಆಹಾರ ನೀಡುವುದು, ನೀರುಹಾಕುವುದು ಮತ್ತು ಅದರ ಗೂಡನ್ನು ಶುಚಿಗೊಳಿಸುವುದು ಇಂತಹ ಕೆಲಸಗಳನ್ನು ತುಂಬಾ ಚುರು-ಚುರುಕಾಗಿ ಮಾಡುತ್ತಿದ್ದಳು. ನಂತರ ಅವಳು ಮರಿಗಳೊಂದಿಗೆ ಚಿಕ್ಕ-ಚಿಕ್ಕ ಚೆಂಡುಗಳನ್ನು ಎಸೆಯುತ್ತಾ ಆಟವಾಡುತ್ತಿದ್ದಳು. ನಂತರ ಅವಳು ಸ್ವಲ್ಪ ಹೊತ್ತು ಮರಿಗಳನ್ನು ತಾಯಿ ಕೋಳಿಯೊಂದಿಗೆ ಹೊರಗೆ ಬಿಟ್ಟು ಬಿಡುತ್ತಿದ್ದಳು. ಹೀಗೆ ಪ್ರತಿದಿನವೂ ಮಾಡುತ್ತಿದ್ದಳು.
ಎಂದಿನಂತೆ ಒಂದು ದಿನ ಅವಳು ಕೋಳಿ ಮತ್ತು ಅದರ ಮರಿಗಳನ್ನು ಹೊರಗೆ ಬಿಟ್ಟು ಆ ಮರಿಗಳೊಂದಿಗೆ ಆಟವಾಡಲು ಬಣ್ಣದ ಚೆಂಡುಗಳನ್ನು ಹಾಕಿಬಿಟ್ಟು ಅವಳು ಮಕ್ಕಳೊಂದಿಗೆ ಆಟವಾಡಲು ಓಡಿಹೋದಳು. ಮರಿಗಳು ಜಾಲಿಯಾಗಿ ಆ ಚೆಂಡುಗಳನ್ನು ಇಟ್ಟುಕೊಂಡು, ಬಾಯಿಂದ ತಳ್ಳುತ್ತಾ ತಳ್ಳುತ್ತಾ ಆಟುವಾಡುತ್ತಿದ್ದವು ಹಾಗೆ ಆಟವಾಡುತ್ತಿರುವಾಗ ಒಂದು ಚೆಂಡು ಉರುಳುತ್ತಾ ಬದಿಯ ಪೊದೆಯಲ್ಲಿ ಬಿದ್ದಿತು. ತಕ್ಷಣವೇ ಆರು ಮರಿಗಳು ಚೆಂಡನ್ನು ಹಿಡಿಯಲು ಒಟ್ಟಿಗೆ ಓಡಿ ಬಂದು ಚೆಂಡನ್ನು ಹೇಗೆ ತೆಗೆದುಕೊಳ್ಳುವುದು ಎಂದು ಯೋಚಿಸುತ್ತಾ ಪೊದೆಯ ಸುತ್ತ ನಿಂತವು. ಅದರೊಳಗಿನಿಂದ ಉಸ್...ಉಸ್... ಎಂಬ ಸ್ವರದಲ್ಲಿ ಒಂದು ದೊಡ್ಡ ಹಾವು ವೇಗವಾಗಿ ಎಡೆ ಎತ್ತಿಕೊಂಡು ಈ ಮರಿಗಳನ್ನು ತಿನ್ನಲು ನಿಂತಿತು. ಹಾವನ್ನು ಕಂಡ ಮರಿಗಳು ಕೂಗಾಡಿದವು. ಮರಿಗಳ ಕಿರುಚಾಟ ಕೇಳಿದ ತಾಯಿ ಕೋಳಿ ಹಿಂತಿರುಗಿ ನೋಡಿತು. ಅಲ್ಲಿ ಹಾವು ತನ್ನ ಮರಿಗಳ ಜೀವಕ್ಕಾಗಿ ಬೇಟೆಯಾಡುತ್ತಿರುವುದನ್ನು ನೋಡಿದಾಗ, ಅವರನ್ನು ರಕ್ಷಿಸಲು ವೇಗವಾಗಿ ಹಾರಿ ಬಂದು, ಎಡೆ ಎತ್ತಿಕೊಂಡು ನಿಂತಿದ್ದ ಹಾವಿನ ಕಣ್ಣಿಗೆ ನಚ್ ಎಂದು ಕುಕ್ಕಿತು. ಹಾವು ದೊಪ್ ಎಂದು ನೆಲಕ್ಕೆ ಬಿದ್ದಿತು. ಅಷ್ಟು ಹೊತ್ತಿಗೆ ಮರಿಗಳೆಲ್ಲಾ ವೇಗವಾಗಿ ಓಡಿ ಅಡಗಿಕೊಂಡವು. ನಂತರ ಕೋಳಿ ತನ್ನ ಎಲ್ಲಾ ಮರಿಗಳನ್ನು ಒಟ್ಟುಗೂಡಿಸಿ ತನ್ನ ರೆಕ್ಕೆಗಳ ಒಳಗೆ ಅಪ್ಪಿಕೊಂಡಿತು. ಮರಿಗಳು ತಾಯಿಯ ಉಷ್ಣತೆಯಲ್ಲಿ ಯಾವುದೇ ಭಯವಿಲ್ಲದೆ ಶಾಂತಿಯುತವಾಗಿ ಮಲಗಿದವು.
ಪುಟ್ಟ ತಮ್ಮ, ತಂಗಿ, ಈ ತಾಯಿ ಕೋಳಿಯಂತೆಯೇ, ನಮ್ಮ ಯೇಸಪ್ಪಾ ಕೂಡ ನಿಮಗೆ ಅಪಾಯದಲ್ಲಿದ್ದಾಗ ಅಥವಾ ಏನಾದರೂ ಅಗತ್ಯವಿದ್ದಾಗ ನಿಮ್ಮ ಬಳಿಗೆ ಓಡಿ ಬರುತ್ತಾರೆ. ನೀವು ಮಾಡಬೇಕಾಗಿರುವುದೆಲ್ಲಾ ಯೇಸಪ್ಪನನ್ನು ನೋಡಿ ಕರೆಯುವುದೇ. Ok.
- Mrs. ಸಾರಾ ಸುಭಾಷ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482