Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.09.2021
Share:

By Village Missionary Movement

Saturday, 11-Sep-2021

ಧೈನಂದಿನ ಧ್ಯಾನ(Kannada) – 11.09.2021

 

ಹಿಂಬಾಲಿಸಲು ಉತ್ತಮ ಮಾದರಿ

 

"...ನಾನೇ ಲೋಕಕ್ಕೆ ಬೆಳಕಾಗಿದ್ದೇನೆ; ನನ್ನನ್ನು ಹಿಂಬಾಲಿಸುವವನು ಕತ್ತಲೆಯಲ್ಲಿ ನಡೆಯುವದಿಲ್ಲ; ಆದರೆ ಜೀವದ ಬೆಳಕನ್ನು ಹೊಂದುವನು ಎಂದು ಹೇಳಿದನು." - ಯೋಹಾನ 8:12

 

ಒಬ್ಬ ಪ್ರಸಿದ್ಧ ನಟ ತನ್ನ ಅನುಯಾಯಿಗಳಿಗಾಗಿ ಅನೇಕ ಕೆಲಸಗಳನ್ನು ಮಾಡುತ್ತೇನೆ ಎಂದು ಹೇಳಿದರು. "ನಾನು ಇದನ್ನು ಸಾಧಿಸುತ್ತೇನೆ, ನಾನು ಅದನ್ನು ಸಾಧಿಸುತ್ತೇನೆ" ಮತ್ತು "ನಾನು ಈ ವಿಷಯದಲ್ಲಿ ಬದಲಾವಣೆಯನ್ನು ತರುತ್ತೇನೆ."ಎಂದು ಹೇಳುತ್ತಿದ್ದ. ಸಿನಿಮಾದಲ್ಲಿ ಅವರ ಸಾಧನೆಗಳು ನಿಜವೆಂದು ನಂಬಿ ಅನೇಕರು ಅವರನ್ನು ಹಿಂಬಾಲಿಸಿದರು. ಆದರೆ ಅವರು ತನ್ನ ತೀರ್ಮಾನವನ್ನು ಬದಲಾಯಿಸಿಕೊಂಡು ತಾನು ರಚಿಸಿದ ಎಲ್ಲಾ ಕಾರ್ಯಗಳನ್ನು ಚದುರಿಸಿ ಬಿಟ್ಟರು. ಎಷ್ಟೋ ವರ್ಷಗಳಿಂದ ಆತನನ್ನು ಹಿಂಬಾಲಿಸಿದ ಅನೇಕರಿಗೆ ನಿರಾಶೆಯಾಯಿತು. ಇಂದಿಗೂ, ಮೋಸಹೋದವರು, ಸೋತು ಹೋದವರು ಅನೇಕರು. 

 

ಅಂತೆಯೇ, ಇಂದು ಅನೇಕ ಜನರು ಚಲನಚಿತ್ರ ನಟರು ಮತ್ತು ನಾಯಕರ ಹೊರಾಂಗಣ ಜೀವನವನ್ನು ಕಂಡು ಅವರನ್ನು ಹಿಂಬಾಲಿಸಿ ಮೋಸ ಹೋದವರು ಅನೇಕರು. ಅವರ ನಿಜ ಜೀವನವನ್ನು ಹತ್ತಿರದಿಂದ ನೋಡಿದರೆ ಅವರು ಹೇಳಿದಂತೆ ಅವರು ಏನನ್ನೂ ಮಾಡುತ್ತಿಲ್ಲ ಎಂಬುದು ಗೊತ್ತಾಗುತ್ತದೆ. ಇಂದು ಅನೇಕ ಯೌವನಸ್ಥರು ಅವರು ಹೇಳುವುದನ್ನು ನಂಬುವ ಮೂಲಕ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಅವರು ಒಂದು ಕತ್ತಲೆಯ ಜೀವನಕ್ಕೆ ಹೋಗಿಬಿಡುತ್ತಿದ್ದಾರೆ. ದಾರಿ ತಿಳಿಯದೆ, ದಿಕ್ಕು ತೋಚದೇ, ಗುರಿಯಿಲ್ಲದೆ ಅಲೆಯುತ್ತಿರುವ

ಯುವಕರ ದೊಡ್ಡ ಗುಂಪೇ ಇದೆ. ನೀವು ಜಗತ್ತಿನ ಯಾವ ಮನುಷ್ಯನನ್ನು ಅನುಸರಿಸಿದರೂ ನೀವು ಮೋಸ ಹೋಗುವ ಸಾಧ್ಯತೆಯಿದೆ. ಆದರೆ ಯೇಸು ಹೇಳುತ್ತಿದ್ದಾರೆ, "ನನ್ನನ್ನು ಅನುಸರಿಸುವವನು ಕತ್ತಲೆಯಲ್ಲಿ ನಡೆಯದೆ ಜೀವಕೊಡುವ ಬೆಳಕನ್ನು ಹೊಂದಿದವನಾಗಿರುವನು" ಎಂದು ಹೇಳಿದನು.

 

ಯೋಹಾನ 8:12 ರಲ್ಲಿ ಯೇಸು ಕೇವಲ ಮಾತುಗಳಲ್ಲಿ ಹೇಳುವವರಲ್ಲ, ಈ ಲೋಕದಲ್ಲಿ ಜೀವಿಸಿ ಮಾದರಿಯಾಗಿದ್ದು ತೋರಿಸಿದರು. ಅವರು ತನ್ನ ತಂದೆ ಮತ್ತು ತಾಯಿಗೆ ಚಿಕ್ಕ ವಯಸ್ಸಿನಿಂದಲೇ ಸುಮಾರು 30 ವರ್ಷ ವಯಸ್ಸಿನವರೆಗೂ ವಿಧೇಯರಾಗಿ ನಡೆದರು. ತನ್ನ ಶಿಷ್ಯರ ಕಾಲುಗಳನ್ನು ತೊಳೆದರು. ದೆವ್ವ ಹಿಡಿದು ಕತ್ತಲೆಯಲ್ಲಿದ್ದ ಅನೇಕರನ್ನು ಬಿಡುಗಡೆ ಮಾಡಿದರು. ಕುರುಡರ ಕಣ್ಣುಗಳನ್ನು ತೆರೆದರು. ಪಾರ್ಶ್ವವಾಯು ವಾಸಿಯಾಯಿತು. ಅನೇಕರು ಅವರನ್ನು ತಿರಸ್ಕರಿಸಿದರು, ಕೆನ್ನೆಗೆ ಹೊಡೆದರು, ಮುಖಕ್ಕೆ ಉಗುಳಿದರು, ಕೊನೆಗೆ ಶಿಲುಬೆಗೆ ಹಾಕಿದರು. ಅವರು ನಮ್ಮ ಪಾಪಗಳಿಂದ ನಮ್ಮನ್ನು ಬಿಡಿಸಲು ರಕ್ತವನ್ನು ಸುರಿಸಿ ಸತ್ತು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದರು. ಇಂದಿಗೂ ಬದುಕಿದ್ದಾರೆ. ಅವರನ್ನು ಯಾರು ಹಿಂಬಾಲಿಸಿದರೂ ಅವರ ಎಲ್ಲಾ ಕತ್ತಲೆಯನ್ನು ನೀಗಿಸಿ ಆತನ ಪವಿತ್ರ ರಕ್ತದಿಂದ ತೊಳೆದು ಬಿಡುಗಡೆ ಕೊಡುತ್ತಾರೆ. ನಿಮ್ಮ ಜೀವನವನ್ನು ಪ್ರಕಾಶಮಾನವಾಗಿ ಮಾರ್ಪಡಿಸಿ ನಿಮ್ಮನ್ನು ಆಶೀರ್ವದಿಸುತ್ತಾರೆ.

- P.V. ವಿಲಿಯಮ್ಸ್

 

ಪ್ರಾರ್ಥನಾ ಅಂಶ:

ಮಿಷನರಿಗಳ ಮಕ್ಕಳ ಶಾಲಾ ಶುಲ್ಕವನ್ನು ಕಟ್ಟಲು ಬೇಕಾದ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet