Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.09.2021
Share:

By Village Missionary Movement

Friday, 10-Sep-2021

ಧೈನಂದಿನ ಧ್ಯಾನ(Kannada) – 10.09.2021

 

ಉನ್ನತ ಪ್ರಶಂಸೆ

 

“...ಕರ್ತನಾದ ಕ್ರಿಸ್ತ ಯೇಸುವಿನ... ನಿಮಿತ್ತವಾಗಿ ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ... ಆತನ ನಿಮಿತ್ತ ಎಲ್ಲವನ್ನು ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ" - ಫಿಲಿಪ್ಪಿ 3:7

 

ಸೈಬೀರಿಯನ್ ಎಂಬವರು ಒಬ್ಬ ಪ್ರಸಿದ್ಧ ಕಾನೂನು ಪ್ರಾಧ್ಯಾಪಕರು. ಇವರು ತನ್ನ 40 ನೇ ವಯಸ್ಸಿನ ತನಕ ದೇವರನ್ನು ತಿಳಿಯದವರಾಗಿದ್ದರು. ಸೆರಿವಿಯಸ್ ಎಂಬ ಒಬ್ಬ ಕ್ರೈಸ್ತ ಸ್ನೇಹಿತನ ಮೂಲಕ ಯೇಸುಕ್ರಿಸ್ತನನ್ನು ಸ್ವೀಕರಿಸಿದರು ನಂತರ ಕೂಡಲೇ ಅವರು ದೀಕ್ಷಾಸ್ನಾನ ಹೊಂದಿದರು ಮತ್ತು ಕ್ರಿಸ್ತನನ್ನು ಪ್ರಕಟಿಸುವ ಸುವಾರ್ತಾಬೋಧಕರಾಗಿ ಮಾರ್ಪಟ್ಟರು. ತನ್ನ ಮನೆಯನ್ನು ಮಾರಿ ಬಡ ಜನರಿಗೆ ಸಹಾಯ ಮಾಡಿದರು. ಅವರ ಪ್ರಾಂತ್ಯದಲ್ಲಿ ಸಾಂಕ್ರಾಮಿಕ ರೋಗ ಹರಡಿ ಅನೇಕ ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡರು, ಅನೇಕ ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡರು. ಮತ್ತು ಅದರೊಂದಿಗೆ ಬರಗಾಲ ಬಂತು. ಸೈಬೀರಿಯನ್ ಅನೇಕರಿಗೆ ಸಹಾಯ ಮಾಡಿದರು. ಆದ್ದರಿಂದ ಅನೇಕರು ಜೀವವನ್ನು ಉಳಿಸಿಕೊಂಡು ಕ್ರಿಸ್ತನನ್ನು ಸ್ವೀಕರಿಸಿದರು. ಆ ಸಮಯದಲ್ಲಿ ಈ ಪ್ರದೇಶವನ್ನು ಆಳುತ್ತಿದ್ದ ರೋಮನ್ ಚಕ್ರವರ್ತಿ ವಲೇರಿಯನ್ ಕ್ರಿಸ್ತನ ಬಗ್ಗೆ ಬೋಧಿಸಿದ್ದಕ್ಕಾಗಿ ಸೈಬೀರಿಯನ್ ಅನ್ನು ಬಂಧಿಸಿ ಮರಣದಂಡನೆ ವಿಧಿಸಿದರು.

 

ಸತ್ಯವೇದದಲ್ಲಿ ಅಪೊಸ್ತಲನಾದ ಪೌಲನು ತನ್ನ ಬಗ್ಗೆ ಇಸ್ರಾಯೇಲಿನ ವಂಶಸ್ಥನೆಂದು ಹೇಳುತ್ತಾನೆ. ಏಕೆಂದರೆ ನಾನು ಬೆನ್ಯಾಮೀನಿನ ಗೋತ್ರಕ್ಕೆ ಸೇರಿದವನು. ಇಬ್ರಿಯನು, ಫರಿಸಾಯನು ಮತ್ತು ಭಕ್ತಿ ವೈರಾಗ್ಯದ ನಿಮಿತ್ತವಾಗಿ ಸಭೆಯನ್ನು ಹಿಂಸಿಸಲು ಅಧಿಕಾರ ಹೊಂದಿದವನು. ಹೀಗೆ ಅನೇಕ ವಿಧವಾದ ಹೆಮ್ಮೆಯಿದ್ದರೂ, ಇದೆಲ್ಲವೂ ಕ್ರಿಸ್ತನ ಮುಂದೆ ಏನೂ ಅಲ್ಲ. ಕ್ರಿಸ್ತನು ನನ್ನ ಜೀವನದಲ್ಲಿ ಜೀವಕ್ಕಿಂತ ಉನ್ನತ. ನಾನು ಮೊದಲು ಹೊಂದಿದ್ದ ಈ ಎಲ್ಲಾ ಹೆಮ್ಮೆಯು ಏನೂ ಅಲ್ಲ. ಹಾಗಾಗಿ ನಾನು ಅದನ್ನು ಲಾಭವೆಂದು ಪರಿಗಣಿಸದೆ ನಷ್ಟವಾಗಿಯೂ, ಕಸವಾಗಿಯೂ ಎಣಿಸುತ್ತೇನೆ. ಕ್ರಿಸ್ತನನ್ನು ತಿಳಿದುಕೊಳ್ಳುವ ಜ್ಞಾನವೇ ಉನ್ನತವಾದದ್ದು. ಆ ಜ್ಞಾನವೇ ನನಗೆ ನಿತ್ಯ ಜೀವವನ್ನು ಕೊಡುತ್ತದೆ. ಕ್ರಿಸ್ತನ ಮುಂದೆ ಜೀವವೇನೂ ದೊಡ್ಡದಲ್ಲ ಎಂದು ಆತನು ಕ್ರಿಸ್ತನ ಸುವಾರ್ತೆಯನ್ನು ಅನೇಕ ಭಾಗಗಳಿಗೆ ತೆಗೆದುಕೊಂಡು ಹೋಗಿ ತಿಳಿಸಿ ಕ್ರಿಸ್ತನಿಗಾಗಿಯೇ ಸತ್ತನು.

 

ಪ್ರಿಯರೇ! ಸೈಬೀರಿಯನ್ ಏನೂ ಇಲ್ಲದವರಲ್ಲ, ಕಾನೂನು ಪ್ರಾಧ್ಯಾಪಕರು, ಪ್ರಸಿದ್ಧರು ಮತ್ತು ಬುದ್ಧಿವಂತರು. ಅವರು ಕ್ರಿಸ್ತನ ಬಗ್ಗೆ ತಿಳಿದುಕೊಂಡ ಕೂಡಲೇ ಅವರು ತನ್ನ ಹುದ್ದೆಯನ್ನು ತೊರೆದು ಕ್ರಿಸ್ತನ ಸುವಾರ್ತೆಯನ್ನು ಶ್ರೇಷ್ಠವೆಂದು ಪರಿಗಣಿಸಿ ತನ್ನ ಜೀವನದುದ್ದಕ್ಕೂ ಕ್ರಿಸ್ತನಿಗಾಗಿ ಮಾತ್ರವೇ ಜೀವಿಸಿ ಸತ್ತರು. ಸತ್ಯವೇದದಲ್ಲಿ ಪೌಲನು ಕೂಡ ಅದೇ ರೀತಿ ಬದುಕಿದರು. ನಾನು ಹೊಂದಿರುವ ಎಲ್ಲವನ್ನೂ ನಾನು ಕಸವೆಂದು ಪರಿಗಣಿಸುತ್ತೇನೆ ಎಂದರು. ನಿಮ್ಮ ಜೀವನದಲ್ಲಿ ನೀವು ಏನು ಶ್ರೇಷ್ಠ ಎಂದು ಪರಿಗಣಿಸುತ್ತೀರಿ? ವಿಶ್ವ ಅಧ್ಯಯನ, ಸಂಪತ್ತು, ಖ್ಯಾತಿ, ಪದವಿ ಇವು ಶ್ರೇಷ್ಠವೆಂದು ಪರಿಗಣಿಸುತ್ತೀರಾ? ಇದಕ್ಕಾಗಿ ನೀವು ಕ್ರಿಸ್ತನನ್ನು ಬಿಟ್ಟು ಬಿಟ್ಟಿದ್ದೀರಾ? ಒಂದು ನಿಮಿಷ ಯೋಚಿಸೋಣ. ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳೋಣ. ಪೌಲನಂತೆ ನಾವು ಕ್ರಿಸ್ತನಿಗಾಗಿ ಎಲ್ಲವನ್ನೂ ಖರ್ಚು ಮಾಡಿ ಅವರಿಗಾಗಿ ಜೀವಿಸೋಣ. ಕ್ರಿಸ್ತನಿಗಾಗಿ ಏನು ಬೇಕಾದರೂ ಕಳೆದುಕೊಳ್ಳಬಹುದು. ಆದರೆ ಯಾವುದಕ್ಕಾಗಿಯೂ ಕ್ರಿಸ್ತನನ್ನು ಕಳೆದುಕೊಳ್ಳಬೇಡಿರಿ.

- D. ಆಲ್ವಿನ್ ಜೇಕಬ್

 

ಪ್ರಾರ್ಥನಾ ಅಂಶ:

ನಮ್ಮ ಅನಾಥಾಶ್ರಮದಲ್ಲಿ 10 ನೇ ತರಗತಿ ಓದುತ್ತಿರುವ ಪಾಂಡಿ ಮತ್ತು ಅಜಯ್ ಗೆ ದೇವರು ವಿಶೇಷ ಜ್ಞಾನವನ್ನು ದಯಪಾಲಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet