By Village Missionary Movement
Wednesday, 08-Sep-2021ಧೈನಂದಿನ ಧ್ಯಾನ(Kannada) – 08.09.2021
ನನ್ನನ್ನು ಬಲಪಡಿಸುವ ಶಕ್ತಿ
"ನನ್ನನ್ನು ಬಲಪಡಿಸುವ ಕ್ರಿಸ್ತನ ಮೂಲಕ ನಾನು ಎಲ್ಲವುಗಳನ್ನು ಮಾಡಬಲ್ಲೆನು." - ಫಿಲಿಪ್ಪಿ 4:13
ಕರ್ತನ ಸೇವೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಬೋಧಿಸುತ್ತಿದ್ದೇನೆ. ಮಾರ್ಚ್ 9, 2021 ರ ಸಂಜೆಯ ಕೂಟದಲ್ಲಿ ವಾಕ್ಯವನ್ನು ಬೋಧಿಸುವಂತೆ ತನ್ನ ಸಂಸ್ಥೆಯ ಪ್ರಾಥಮಿಕ ಸಹೋದರನೊಬ್ಬ ನನ್ನನ್ನು ಕೇಳಿಕೊಂಡರು. ಇದು ನನ್ನ ಮುಂದಿರುವ ದೊಡ್ಡ ಸವಾಲಾಗಿತ್ತು. ಕಾರಣ, ದೈಹಿಕವಾಗಿ ದುರ್ಬಲಗೊಂಡ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ಪತ್ನಿ 79 ದಿನಗಳ ಕಾಲ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಮತ್ತು 12 ದಿನಗಳು ಮನೆಯ ಚಿಕಿತ್ಸೆಯಲ್ಲಿ ಕಳೆದರು. ಅಂತಿಮವಾಗಿ ಎಲ್ಲಾ ಪ್ರಯತ್ನಗಳು ವಿಫಲವಾದವು ಮತ್ತು ಅವರು ಕರ್ತನಲ್ಲಿ ಮರಣಹೊಂದಿದರು ಅವರನ್ನು ಮಾರ್ಚ್ 8 ರಂದು ಸಮಾಧಿ ಮಾಡಲಾಯಿತು.
ಇದರ ಮಧ್ಯದಲ್ಲಿಯೇ ಮಾರ್ಚ್ 9 ರಂದು, ಸುಮಾರು 500 ಜನರ ಗುಂಪಿನಲ್ಲಿ, ನಾನು ಒಂದು ಗಂಟೆಗೂ ಹೆಚ್ಚು ಕಾಲ ದೇವರ ವಾಕ್ಯವನ್ನು ಬಹು ಶಕ್ತಿಯುತವಾಗಿ ಬೋಧಿಸಿದೆ. ಹೇಳಲಾಗದ ದುಃಖಗಳು ಮತ್ತು ಆಹ್ವಾನಿಸದ ಅತಿಥಿಗಳಂತೆ ನನ್ನ ಕಣ್ಣಲ್ಲಿ ನೀರು ತುಂಬಿಕೊಂಡು ನನ್ನನ್ನು ಬಹಳವಾಗಿ ಕುಗ್ಗಿಸುತ್ತಾ ಇದ್ದರೂ, "ನಿಮ್ಮನ್ನು ಕರೆದ ದೇವರು ನಂಬಿಗಸ್ತನು" ಎಂದು ನಾನು ಬೋಧಿಸಿದೆ. ಕೂಟದ ಕೊನೆಯಲ್ಲಿ ಅನೇಕರು ನನ್ನ ಬಳಿ ಬಂದು ಮಾತನಾಡುತ್ತಿದ್ದರು. ಒಬ್ಬರು ನನ್ನ ಬಳಿ ಕೇಳಿದರು, "ಇಂದು ಹೇಗೆ ನಿಮ್ಮಿಂದ ವಾಕ್ಯವನ್ನು ಬೋಧಿಸಲು ಸಾಧ್ಯವಾಯಿತು?" ಎಂದು ಆಶ್ಚರ್ಯವಾಗಿ ಕೇಳಿದರು !! "ಎಲ್ಲವೂ ದೇವರ ಕೃಪೆ ಮತ್ತು ಆತನ ಶಕ್ತಿಯೇ." ಎಂದು ನಾನು ಹೇಳಿದೆನು.
ಪೌಲನು ತನ್ನ ಸಹ ಸೇವಕನಾದ ತಿಮೊಥೆಯನಿಗೆ ಬರೆಯುವಾಗ ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ ಎನ್ನುತ್ತಾರೆ. ಬಹು ಕಠಿಣವಾದ ಸವಾಲುಗಳನ್ನು ಎದುರಿಸಿ ಒಂದರಲ್ಲೂ ಅಧೈರ್ಯವಾಗಿ ಹಿಂಜಾರಿ ಹೋಗದೇ ನಾನು ಜಯವನ್ನು ಹೊಂದಿದ್ದೇನೆ ಎಂದು ನಮಗೆ ಸವಾಲು ಹಾಕುತ್ತಿದ್ದಾರೆ. ಮತ್ತು ಕೊರಿಂಥದವರಿಗೆ ಬರೆದ ಪತ್ರಿಕೆಯಲ್ಲಿ, "ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಜಯ ಕೊಡುವ ದೇವರಿಗೆ ಸ್ತೋತ್ರ" ಎಂದು ಬರೆಯುತ್ತಾರೆ. ಕ್ರೈಸ್ತ ಜೀವನದಲ್ಲಿ ನಾವು ಊಹಿಸದ ಹೋರಾಟಗಳು ಮತ್ತು ಸವಾಲುಗಳು ನಮ್ಮ ಮುಂದಿವೆ. ಆದರೆ ಗೆಲುವು ನಮ್ಮದೇ. ಆದ್ದರಿಂದ ದೇವರ ಕೃಪೆಯನ್ನು ಅವಲಂಬಿಸಿರಿ. ಸವಾಲುಗಳನ್ನು ಒಡೆದು ಬಿಸಾಡಿರಿ.
- P. ಜಾಕೋಬ್ ಶಂಕರ್
ಪ್ರಾರ್ಥನಾ ಅಂಶ:
ಗ್ರಾಮ ಸೇವೆಗೆ ಮೆಗಾ ಫೋನ್ ಗಳ ಅಗತ್ಯವಿದೆ. ಒಂದು ಸಭೆಯಾಗಿ ಅಥವಾ ಕುಟುಂಬವಾಗಿ ಜವಾಬ್ದಾರಿ ತೆಗೆದುಕೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482