By Village Missionary Movement
Tuesday, 07-Sep-2021ಧೈನಂದಿನ ಧ್ಯಾನ(Kannada) – 07.09.2021
Restart
"ಆ ದಿನದಲ್ಲಿ ಬಿದ್ದ ದಾವೀದನ ಗುಡಾರವನ್ನು ನಾನು ನಿಲ್ಲಿಸಿ... ಹಾಳಾದದ್ದನ್ನು ಎಬ್ಬಿಸಿ ಹಿಂದಿನ ದಿವಸಗಳಲ್ಲಿ ಮಾಡಿದ ಹಾಗೆ ಕಟ್ಟುವೆನು." - ಆಮೋಸ 9:12
ದೊಡ್ಡ ಕಂಪನಿಯಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಇದ್ದಕ್ಕಿದ್ದಂತೆ ಜನಪ್ರಿಯತೆ ಕಡಿಮೆಯಾಯಿತು . ಆ ಕಂಪನಿಯ ಯಜಮಾನ ಕಾರಣವನ್ನು ತನಿಖೆ ಮಾಡಿದರು. ಯಂತ್ರದ ವೇಗವು ಕಡಿಮೆಯಾದ್ದರಿಂದ ಹೊರಬರುವ ವಸ್ತುಗಳ ಗುಣಮಟ್ಟವು ಕಡಿಮೆಯಾಯಿತು ಎಂದು ಅವರು ಭಾವಿಸಿದರು. ಆದರೆ ಅದನ್ನು ಹೇಗೆ ಸರಿಪಡಿಸುವುದು ಎಂದು ತಿಳಿಯಲಿಲ್ಲ. ಅದರಿಂದಾಗಿ ನಷ್ಟ ಉಂಟಾಯಿತು. ಕಂಪನಿಯನ್ನು ಮುಚ್ಚುವುದನ್ನು ಬಿಟ್ಟು ಬೇರೆ ದಾರಿಯಿಲ್ಲದೆ ಆತ ಬೇಸರವಾಗಿದ್ದ. ಸುದೀರ್ಘ ಕಾಲದಿಂದ ಆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನೊಬ್ಬ ಆ ಯಂತ್ರದ ಎಲ್ಲಾ ಭಾಗಗಳನ್ನು ಬಿಚ್ಚಿ, ಸರ್ವೀಸ್ ಮಾಡಿ Restart ಮಾಡಿದರೆ ಅದು ಚೆನ್ನಾಗಿ ಓಡುತ್ತದೆ ಎಂದು ಹೇಳಿದರು. ತಕ್ಷಣವೇ ಆ ಮಾಲಿಕನು ಸರ್ವೀಸ್ ಮಾಡಲು ಜನರನ್ನು ಕರೆತರಲು ಕಳುಹಿಸಿದನು. ಅವರು ಬಂದು ಎಲ್ಲಾ ಭಾಗಗಳನ್ನು ತೆಗೆದು ಸ್ವಚ್ಛಗೊಳಿಸಿ, ಉಜ್ಜಿಹೋಗಿದ್ದ ಭಾಗಗಳನ್ನು ತೆಗೆದು, ಹೊಸದನ್ನು ಬದಲಾಯಿಸಿ, ಆಯಿಲ್ ಮತ್ತು ಗ್ರೀಸ್ ಹಾಕಿ ಯಂತ್ರದ ಹಲ್ಲುಗಳನ್ನು ಚೂಪು ಮಾಡಿ Restart ಮಾಡಿದರು. ಯಂತ್ರವು ಹೊಸದಾಗಿ ಮಾರ್ಪಟ್ಟಿತು, ವೇಗವಾಗಿ ಓಡಿತು, ರುಬ್ಬಿದ ಆಹಾರ ಪದಾರ್ಥಗಳ ಗುಣಮಟ್ಟ ಹೆಚ್ಚಾಯಿತು, ಪುನಃ ಜನರ ಮೆಚ್ಚುಗೆ ಪಡೆಯಿತು.
ಯೋಬನಿಗೆ ನಷ್ಟಗಳು ಮತ್ತು ಸಂಕಷ್ಟಗಳು ಒಂದರ ನಂತರ ಒಂದು ಮತ್ತೆ ಮತ್ತೆ ಬರುವಾಗ ದುಃಖವನ್ನು ಸಹಿಸಲಾಗದೆ ತಾನು ಹುಟ್ಟಿದ ದಿನವನ್ನೇ ಶಪಿಸಿಕೊಳ್ಳುತ್ತಾರೆ. ಬಳಲಿಕೆ ಮತ್ತು ಹತಾಶೆಯಿಂದ ಮಾತನಾಡುತ್ತಾರೆ. ಆದರೂ ದೇವರು ಎಲ್ಲವನ್ನೂ ಮಾಡಲು ಸಮರ್ಥನಾಗಿದ್ದಾನೆ; ನೀನು ಮಾಡಲು ಬಯಸುವುದು ಎಂದಿಗೂ ತಡೆಯಾಗುವುದಿಲ್ಲ ಎಂದು ಆತನು ತನ್ನ ಜೀವನವನ್ನು ಕ್ರಿಸ್ತನಿಗೆ ಅರ್ಪಿಸುತ್ತಾನೆ, ಆ ರೀತಿಯಾಗಿ ಅವನು ಅರ್ಪಿಸಿಕೊಂಡಾಗ ದೇವರು ಅವನ ಜೀವನವನ್ನು Restart ಮಾಡುತ್ತಾರೆ. ನಂತರ ಅವನ ಜೀವನವು ಮೊದಲಿಗಿಂತ ಹೆಚ್ಚು ಆಶೀರ್ವಾದವಾಗಿ ಮಾರ್ಪಟ್ಟಿತು.
ಪ್ರಿಯರೇ! ನಷ್ಟ, ಅನಾರೋಗ್ಯ, ಹತಾಶೆ, ಬದುಕಲು ಇಷ್ಟವಿಲ್ಲದೆ ಆಯಾಸಗೊಂಡಿದ್ದೀರಾ? ಚಿಂತಿಸಬೇಡಿರಿ. ಇದುವೇ Restart ಮಾಡುವ ಸಮಯ. ಆತನು ನಮ್ಮ ಜೀವನದ ಎಲ್ಲಾ ಭಾಗಗಳನ್ನು ಪುನರ್ ರೂಪಿಸುತ್ತಾನೆ ಮತ್ತು ನವೀಕರಣದೊಂದಿಗೆ ನಮ್ಮ ಜೀವನವನ್ನು ಪರಿವರ್ತಿಸುತ್ತಾನೆ ಎಂಬುದರಲ್ಲಿ ಸಂದೇಹವಿಲ್ಲ. ನಾನು ಅದನ್ನು ಹೇಗೆ ಇಷ್ಟು ಖಚಿತವಾಗಿ ಹೇಳಬಲ್ಲೆ ಎಂದು ನೀವು ಭಾವಿಸುತ್ತಿದ್ದೀರ? ಕಾರಣ, ನಾನು ನನ್ನ ಗಂಡ ಮತ್ತು ಎಲ್ಲರನ್ನೂ ಕಳೆದುಕೊಂಡೆ ಕೈಬಿಡಲ್ಪಟ್ಟ ಪರಿಸ್ಥಿತಿಯಲ್ಲಿ ಮನಮುರಿದು ಹತಾಶೆಯಲ್ಲಿದ್ದಾಗ, ಈ ರೀತಿಯ ಪದಗಳು ನನ್ನನ್ನು ರೋಮಾಂಚನಗೊಳಿಸಿದವು. ನಾನು ಸಹ ದೇವರಿಗೆ ನನ್ನನ್ನು ಸಮರ್ಪಿಸಿಕೊಂಡೆ. ಸಮರ್ಪಣೆಯ ನಂತರ ಕೆಲವೇ ತಿಂಗಳುಗಳಲ್ಲಿ ಹಗ್ಗವು ಬಿಚ್ಚಲ್ಪಟ್ಟವು, ಕಠಿಣವಾದ ಸರಪಳಿಯೊಂದಿಗೆ ಕಟ್ಟಲ್ಪಟ್ಟಂತಹ ಹೋರಾಟಗಳು. ಆದರೆ ದೇವರು ನನ್ನನ್ನು Service ಮಾಡಿದ ಸಮಯ ಅದು. ನಂತರ ಕೆಲವು ತಿಂಗಳುಗಳಲ್ಲಿ ಅವರು ನನ್ನ ಜೀವನವನ್ನು ಪುನರ್ರಚಿಸಿದರು ಮತ್ತು Restart ಮಾಡಿದರು.
ನೀವು ಜೀವನವನ್ನು ದ್ವೇಷಿಸಿ ನೀವಾಗಿಯೇ ಅದನ್ನು ಕೊನೆಗೊಳಿಸಲು ನೀವಾಗಿಯೇ ಒಂದು ಪರಿಹಾರವನ್ನು ಕಂಡುಕೊಂಡರೆ, ನಾವು ಇಷ್ಟು ದಿನ ಹಾದುಹೋದ ಮಾರ್ಗವು ವ್ಯರ್ಥವಾಗುತ್ತದೆ! ನರಕವೇ ತಾನೆ ನಿಮ್ಮ ಭಾಗ! ಅದಕ್ಕಾಗ ನಾವು ಇಷ್ಟೊಂದು ಕಷ್ಟಪಟ್ಟಿದ್ದೇವೆ. ನಮಗೆ ಜೀವನವನ್ನು ಕೊಟ್ಟವರು ದೇವರೇ! ಅದು ಮುಗಿಯುವವರೆಗೂ ನಾವು ಆತನ ಚಿತ್ತಕ್ಕೆ ಒಪ್ಪಿಸಿಕೊಟ್ಟು ಜೀವಿಸುವಾಗ ಪರಲೋಕ ಜೀವನವು ಖಂಡಿತ!
- Mrs. ಅನ್ಬುಜ್ಞೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
ನಮ್ಮ ಸಹೋದ್ಯೋಗಿಗಳು ಹಳ್ಳಿಗಳಿಗೆ ಹೋಗಿ ಸೇವೆ ಮಾಡಲು ಅಗತ್ಯವಿರುವ ದ್ವಿಚಕ್ರ ವಾಹನಗಳನ್ನು ಖರೀದಿಸಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482