Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.09.2021
Share:

By Village Missionary Movement

Monday, 06-Sep-2021

ಧೈನಂದಿನ ಧ್ಯಾನ(Kannada) – 06.09.2021

 

ಬದುಕಿ ತೋರಿಸುವುದೇ ಕ್ರೈಸ್ತ ಧರ್ಮ

 

"ಅದರಂತೆಯೇ ಜನರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುವ ಹಾಗೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ." -ಮತ್ತಾಯ 5:16

                                                                                                                                                                                                                                                             ಅಂತಿಯೋಕ್ಯದಲ್ಲಿರುವ ಶಿಷ್ಯರನ್ನು ಮೊದಲು ಕ್ರೈಸ್ತರು ಎಂದು ಕರೆಯಲಾಯಿತು. ನಮ್ಮ ಪೂರ್ವಜರಾದ, ಆದಿ ಕ್ರೈಸ್ತವ ಪೀಳಿಗೆಯನ್ನು ಸಹ "ಶಾಸ್ತ್ರಿಗಳು" ಎಂದು ಕರೆಯುತ್ತಿದ್ದರು. ಇಂದು ನಮಗಿರುವ ಸತ್ಯವೇದ ಬೋಧನೆಗಳು ಮತ್ತು ಆರಾಧನೆಗಳು ಅಂದು ಅವರಿಗಿರಲಿಲ್ಲ. ಆದರೆ ಅವರ ಬಳಿ ಕಂಡ ದೈವೀಕ ಪ್ರೀತಿ, ನಮ್ರತೆ, ಸಹಾಯಕ ಮನೋಭಾವ, ಸಹಾನುಭೂತಿಯ ಕಾಳಜಿ, ಸತ್ಯತೆ, ಪ್ರಾಮಾಣಿಕತೆ ಮತ್ತು ನೈತಿಕತೆ ಈ ಗುಣಗಳಿಂದ ವಿಭಿನ್ನವಾಗಿ "ಪ್ರಕಾಶ" ವಾಗಿ ಕಾಣುತ್ತಿದ್ದರು ಆದ್ದರಿಂದ ಅವರನ್ನು "ಶಾಸ್ತ್ರಿಗಳು" ಎಂದು ಕರೆಯಲಾಯಿತು. ಮತ್ತು ಸದ್ಗುಣ ಗಳಿಂದ ತುಂಬಿದ ಆತ್ಮನ ಫಲಗಳೆಂಬ ವರಗಳನ್ನು ಅವರು ತಿಳಿದಿದ್ದರು. ಕರ್ತನಾದ ಯೇಸು ಕ್ರಿಸ್ತನು ಭೂಮಿಯ ಮೇಲೆಲ್ಲಾ ಉಪಕಾರ ಮಾಡುತ್ತಾ, ಮನೋ ದುಃಖದಿಂದ ಕತ್ತಲೆಯಲ್ಲಿರುವ ಜನರಿಗೆ ಬೆಳಕು ನೀಡುವ ದೀಪವಾಗಿದ್ದರು. ಇಂದು ಲೋಕವೆಲ್ಲಾ ಪಾಪವೆಂಬ ಕತ್ತಲೆಯಾಗಿರುವ, ದರೋಡೆ, ಕಳ್ಳತನ, ಅತ್ಯಾಚಾರ, ವೇಶ್ಯಾವಾಟಿಕೆ ಮತ್ತು ವಿಚ್ಛೇದನಗಳಿಂದ ಪೀಡಿಸಲ್ಪಡುತ್ತಾ ಕಾಣಲ್ಪಡುತ್ತಿದೆ. ಕೆಲವು ಕ್ರೈಸ್ತರು ಕೂಡ ಮಿತಿ ಮೀರಿ, ಇಂತಹ ಪಾಪಗಳನ್ನು ಮಾಡುತ್ತಾ, ಕ್ರಿಸ್ತನನ್ನು ಮರೆತು ಜೀವಿಸುತ್ತಿದ್ದಾರೆ. ಕ್ರೈಸ್ತರಾಗಿರುವ ನಮ್ಮ ಬಳಿ ಯೇ ನೀತಿ ಎಂಬ ಬೆಳಕು ಇಲ್ಲದಿರುವಾಗ ನಾವು ಹೇಗೆ ಲೋಕಕ್ಕೆ ಬೆಳಕಾಗಿ ಜೀವಿಸಲು ಸಾಧ್ಯ?

 

 ಪಾಪದ ಕತ್ತಲೆಯಲ್ಲೂ, ಅಜ್ಞಾನದಲ್ಲೂ, ಮೂಢನಂಬಿಕೆ ಗಳಲ್ಲೂ ಜೀವಿಸುತ್ತಿರುವ ಜನರಿಗೆ ಯೇಸುವನ್ನು ತೋರಿಸುವ ಪ್ರತಿನಿಧಿಗಳಾಗಿ ಜೀವಿಸಲು ದೇವರು ನಮ್ಮನ್ನು ಕರೆಯುತ್ತಿದ್ದಾರೆ. ಅಂದರೆ, ಜನರು ಯೇಸುವಿನ ಒಳ್ಳೆಯ ಸದ್ಗುಣಗಳ ಬೆಳಕನ್ನು ನಮ್ಮಲ್ಲಿ ನೋಡಬೇಕು. ಸ್ವಾರ್ಥ, ಹೆಮ್ಮೆ, ಅಹಂಕಾರ ಮತ್ತು ಅಜಾಗ್ರತೆಯಂತಹ ಗುಣಗಳನ್ನು ದೇವರು ಅಸಹ್ಯ ಪಡುತ್ತಾರೆ. ಆಫ್ರಿಕನ್ ಜನರ ನಡುವೆ ಸೇವೆ ಮಾಡುತ್ತಿದ್ದ ಡೇವಿಡ್ ಲಿವಿಂಗ್‌ಸ್ಟನ್‌ ರವರನ್ನು ನೋಡಲು ಸ್ಟಾನ್ಲಿ ಒಮ್ಮೆ ಹೋಗಿದ್ದರು, ಹೆಸರಿಗೆ ಮಾತ್ರ ಕ್ರೈಸ್ತರಾಗಿದ್ದ ಇವರನ್ನು ಡೇವಿಡ್ ಲಿವಿಂಗ್ ಸ್ಟನ್ ರವರ ಆಧ್ಯಾತ್ಮಿಕ ಜೀವನ, ಪ್ರಾರ್ಥನಾ ಜೀವನ ಬಹು ಮೊಂಡುತನದಲ್ಲಿದ್ದ ಆ ಜನರ ಮೇಲೆ ಅವರು ತೋರಿಸಿದ ಪ್ರೀತಿ ಮತ್ತು ಸಹಾನುಭೂತಿಯ ಸೇವೆಯು ಸ್ಟಾನ್ಲಿಯನ್ನು ಬಹಳ ಆಕರ್ಷಿಸಿತು. ಅವರು ತೋರಿಸಿದ ದೇವರ ಪ್ರೀತಿಯು ಸ್ಟಾನ್ಲಿ ಯು ಯೇಸುವನ್ನು ತನ್ನ ಸ್ವಂತ ರಕ್ಷಕನಾಗಿ ಸ್ವೀಕರಿಸುವಂತೆ ಮಾಡಿತು.

 

ಪ್ರಿಯರೇ! ನಮ್ಮ ನಡುವೆ ಜೀವಿಸಿ ತೋರಿಸಿದ, ಮತ್ತು ಕ್ರಿಸ್ತನ ಬೆಳಕನ್ನು ಚೆಲ್ಲಿದ ಎಮಿಕಾರ್ ಮೈಕೆಲ್, ಮದರ್ ತೆರೇಸಾ, ಡಾ. ಐಡಾ ಸ್ಕಡ್ಡರ್ ಮತ್ತು ವಿಲಿಯಂ ಕೇರಿ ಇವರನ್ನೆಲ್ಲಾ ನಾವು ನಮ್ಮ ಕಣ್ಣ ಮುಂದೆ ತಂದುಕೊಳ್ಳೋಣ. ಇಂದು ನಮ್ಮ ಸೇವೆ ಮತ್ತು ಸಾಕ್ಷಿ ಜೀವನ ಹೇಗಿದೆ? ನಮ್ಮನ್ನು ನಾವು ಸರಿಪಡಿಸಿಕೊಳ್ಳೋಣ. ನಾವು ಯೇಸುವಿನ ಬೆಳಕನ್ನು ಲೋಕಕ್ಕೆ ತೋರಿಸಿ ಕತ್ತಲನ್ನು ಹೋಗಲಾಡಿಸಲು ಪ್ರಾರ್ಥನೆಯೊಂದಿಗೆ ಪ್ರಯಾಸಪಡೋಣ.

- Mrs. ಸರೋಜಾ ಮೋಹನ್ ದಾಸ್

 

ಪ್ರಾರ್ಥನಾ ಅಂಶ:

1000 ಹಳ್ಳಿಗಳಲ್ಲಿ ಸುವಾರ್ತೆಯನ್ನು ಸಾರಲು ಬೇಕಾದ ಆಹಾರ, ಆಶ್ರಯ ಮತ್ತು ಸಾರಿಗೆ ಅಗತ್ಯತೆಗಳು ಪೂರೈಸಲ್ಪಡಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al