Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.09.2021 (Kids Special)
Share:

By Village Missionary Movement

Sunday, 05-Sep-2021

ಧೈನಂದಿನ ಧ್ಯಾನ(Kannada) – 05.09.2021 (Kids Special)

 

ಮರೆಯಬೇಡ!

 

"...ತಂದೆತಾಯಿಗಳಿಗೆ ಪ್ರತ್ಯುಪ ಕಾರ ಮಾಡುವದಕ್ಕೂ ಕಲಿತುಕೊಳ್ಳಲಿ..." - 1ತಿಮೊಥೆ 5:4

 

ಪುಟಾಣಿಗಳೇ ಇಂದು ಯಾವ ದಿನ ಎಂದು ನಿಮಗೆ ಗೊತ್ತಾ? ಶಿಕ್ಷಕರ ದಿನ. ಶಾಲೆಗೆ ಹೋಗದೇ ಇರುವುದರಿಂದ ಮರೆತು ಬಿಟ್ಟಿದ್ದೀರಾ? ಎಂದಿಗೂ ಮರೆಯಲೇ ಬಾರದು. ನಿಮಗೆ ಶಿಕ್ಷಣ ಕಲಿಸಿದ ಶಿಕ್ಷಕರು ಬಹಳ ಮುಖ್ಯ. ಅವರಿಗಾಗಿ ಕರ್ತನಿಗೆ ಕೃತಜ್ಞತೆ ಹೇಳಬೇಕು. ಓಕೆ.

 

ಐದನೇ ತರಗತಿ ಮುಗಿಸಿದ ನಂತರ, ಆರನೇ ತರಗತಿಗೆ ಹೊಸದಾಗಿ ಬಂದ ವಿದ್ಯಾರ್ಥಿಗಳು ಸುಂದರ ಸಮವಸ್ತ್ರವನ್ನು ಹಾಕಿಕೊಂಡು ಕಮಲಾ ಟೀಚರ್ ಹಿಂದೆ ಮರದ ಕೆಳಗೆ ಹೋದರು. ಹಾಜರಾತಿ ರಿಜಿಸ್ಟರ್‌ನಿಂದ ಹೆಸರನ್ನು ಓದಲಾಯಿತು. ಕಣ್ಣನ್ ಹೆಸರನ್ನು ಓದುವಾಗ, “ಅವನು ಬಂದಿಲ್ಲ. ಆಬ್ಸೆನ್ಟ್ Miss, ” ಎಂದು ಜೋರಾಗಿ ಎಲ್ಲಾ ವಿದ್ಯಾರ್ಥಿಗಳು ಹೇಳಿದರು. ರಮೇಶ್ ವೇಗವಾಗಿ ಎದ್ದುನಿಂತು, "ಕಣ್ಣನ್ super - ಆಗಿ ಓದುತ್ತಾನೆ. 5th Std ನಲ್ಲಿ First mark ತೆಗೆದುಕೊಳ್ಳುತ್ತಿದ್ದ Miss" ಎಂದು ಹೇಳಿದನು. ನಂತರ 3 ದಿನ ಕಳೆಯಿತು, ಕಣ್ಣನ್ ತಲೆಗೆ ಎಣ್ಣೆ ಹಾಕದೆ, ಕೊಳಕು ಬಟ್ಟೆಯಲ್ಲಿ School ಗೆ ಬಂದ. "ಅವನು ಯಾವಾಗಲೂ ಸುಂದರವಾಗಿ dress ಮಾಡಿಕೊಂಡು neat-ಆಗಿ ಬರುತ್ತಿದ್ದನಲ್ಲಾ ಇವನಿಗೆ ಏನಾಯ್ತು?" ಎಂದು ಎಲ್ಲರೂ ಭಾವಿಸಿದರು. ಮುಂದಿನ ತಿಂಗಳು ಮಾಸಿಕ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಅವನು ಕಡಿಮೆ ಅಂಕ ಗಳಿಸಿದನು.

 

ಕಮಲಾ Miss ಕಣ್ಣನ್ ನನ್ನು ಕರೆದು ಅವನನ್ನು ಪ್ರೀತಿಯಿಂದ ವಿಚಾರಿಸಿದರು. ಕೆಲವು ತಿಂಗಳ ಹಿಂದೆ ತನ್ನ ತಾಯಿ ಕ್ಯಾನ್ಸರ್ ರೋಗದಿಂದ ಸತ್ತು ಹೋದರು ಎಂದು ಅಳುತ್ತಾ ಹೇಳಿದನು. ಕಮಲಾ ಟೀಚರ್ ಅವನಿಗೆ ಸಾಂತ್ವನ ಹೇಳಿ, ಅವನಿಗೆ ಧೈರ್ಯ ಹೇಳಿ ಓದಲು ಪ್ರೋತ್ಸಾಹಿಸಿದರು. ನಿನ್ನ ವಿಧ್ಯಾಭ್ಯಾಸಕ್ಕೆ ಬೇಕಾದ ಎಲ್ಲವನ್ನೂ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿ ಕಮಲಾ ಟೀಚರ್ ಎಲ್ಲಾ ಸಹಾಯವನ್ನು ಮಾಡಿದರು. ಕಣ್ಣನ್ ತನ್ನ ತಾಯಿಯ ಸಾವಿನ ದುಃಖವನ್ನು ಮರೆತು ಚೆನ್ನಾಗಿ ಓದಲು ಆರಂಭಿಸಿದನು. ವರ್ಷಗಳು ಕಳೆದವು ಅವನು 10th, 12th ನಲ್ಲಿ ಉತ್ತಮ ಅಂಕಗಳನ್ನು ಗಳಿಸಿ school first ತೆಗೆದುಕೊಂಡನು. ನಂತರ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಿ ಚೆನ್ನಾಗಿ ಓದಿ, ಅದರಲ್ಲಿ ಇನ್ನೂ ಹೆಚ್ಚಿನ ಅಂಕಗಳನ್ನು ಪಡೆದನು. ವೈದ್ಯಕೀಯ ಕೋರ್ಸ್ ಮುಗಿದ ನಂತರ ಕಾಲೇಜಿನಲ್ಲಿ ಮೆಚ್ಚುಗೆ ಸಮಾರಂಭ ಏರ್ಪಡಿಸಲಾಗಿತ್ತು. ತನಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡುತ್ತಿದ್ದ ಕಮಲಾ ಟೀಚರನ್ನು ಕಣ್ಣನ್ ಸಮಾರಂಭಕ್ಕೆ ಆಹ್ವಾನಿಸಿದ್ದನು. ವಯಸ್ಸಾದ ತಾಯಿ ವೇದಿಕೆಗೆ ಬರುತ್ತಿದ್ದಂತೆ ಎಲ್ಲರೂ ಆಶ್ಚರ್ಯದಿಂದ ನೋಡುತ್ತಿದ್ದರು. ಕಣ್ಣನ್ ವೇಗವಾಗಿ ಹೋಗಿ ಅವರನ್ನು ಕೈಹಿಡಿದು ಕರೆದುಕೊಂಡು ಬಂದು, ಇವರ ಪ್ರೋತ್ಸಾಹ ಮತ್ತು ಉತ್ಸಾಹವೇ ನನ್ನನ್ನು ಮುಂದೆ ಸಾಗುವಂತೆ ಮಾಡಿತು. ಅವರು ನನಗೆ ಶಿಕ್ಷಕರಷ್ಟೇ ಅಲ್ಲ, ನನ್ನ ತಾಯಿ ಮತ್ತು ನನಗೆ ಉತ್ತಮ ಮಾರ್ಗದರ್ಶಕರಾಗಿದ್ದರು ಮತ್ತು ನಾನು ಈ ಮಟ್ಟಕ್ಕೆ ಬೆಳೆಯಲು ಇವರೇ ಕಾರಣ ಎಂದು ಹೇಳಿದ ಕೂಡಲೇ ಚಪ್ಪಾಳೆಯ ಶಬ್ದದಿಂದ ಆ ಆವರಣವೇ ಅಲುಗಾಡಿತು.

 

ಪ್ರೀತಿಯ ಸಹೋದರ, ಸಹೋದರಿ ನೀವು ಕೂಡ ಒಳ್ಳೆಯ ಮಕ್ಕಳಾಗಿ, ಶಿಸ್ತಿನಿಂದ ಇರಲು ಶಿಕ್ಷಕರೇ ತಾನೆ ಮುಖ್ಯ ಕಾರಣ! ಈ ದಿನ ನಿಮಗೆ ಕಲಿಸಿಕೊಟ್ಟ ಶಿಕ್ಷಕರನ್ನು ನೆನಪಿಟ್ಟುಕೊಂಡು ಅವರಿಗಾಗಿ ಪ್ರಾರ್ಥಿಸಲು ನೀವು ಮರೆಯಲೇ ಬಾರದು. ಮಾಡುತ್ತೀರ ತಾನೇ. Very Good.

- Mrs. ಎಲಿಸಬೆತ್ ವಾಸು

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al