Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.09.2021
Share:

By Village Missionary Movement

Friday, 03-Sep-2021

ಧೈನಂದಿನ ಧ್ಯಾನ(Kannada) – 03.09.2021

 

ಅತ್ಯುತ್ತಮ ಶಿಕ್ಷಕ

 

"ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ." - ಜ್ಞಾನೋಕ್ತಿ. 25:11

 

ಪೆನ್ಸಿಲ್ವೇನಿಯಾದ ಗೆಟ್ಟಿಸ್‌ಬರ್ಗ್‌ನಲ್ಲಿರುವ ಸೈನಿಕರಿಗಾಗಿ ರಾಷ್ಟ್ರೀಯ ಸ್ಮಶಾನ ಉದ್ಯಾನವನ ಸಮರ್ಪಣೆ ನವೆಂಬರ್ 19, 1863 ರಂದು ನಡೆಯಿತು ಆಗ ಇಬ್ಬರು ಪ್ರಮುಖ ಭಾಷಣಕಾರರು ಬೋಧಿಸಿದರು. ವಿಶೇಷವಾದ ಭಾಷಣಕಾರರಾದ ಎಡ್ವಿಟ್ ಎವರೆಟ್ ಮಾಜಿ ಶಾಸಕಾಂಗ ಸಭೆಯ ಸದಸ್ಯರು, ರಾಜ್ಯಪಾಲರು ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಕ್ಷರು ಆಗಿದ್ದರು. ಅವರ ಕಾಲದ ಶ್ರೇಷ್ಠ ಭಾಷಣಕಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಶ್ರೀ. ಎವರೆಟ್ ಎರಡು ಗಂಟೆಗಳ ಕಾಲ ಮಾತನಾಡಿದರು. ಅವರ ನಂತರ ಅಮೆರಿಕ ಅಧ್ಯಕ್ಷ ಅಬ್ರಹಾಂ ಲಿಂಕನ್ ಮಾತನಾಡಿದರು. ಅವರ ಭಾಷಣ ಕೇವಲ ಎರಡೇ ನಿಮಿಷಗಳು ಮಾತ್ರವೇ ಮುಂದುವರೆಯಿತು.

 

ಗೆಟ್ಟಿಸ್‌ಬರ್ಗ್‌ನಲ್ಲಿ ಲಿಂಕನ್‌ರ ಭಾಷಣವು ಪ್ರಪಂಚದಾದ್ಯಂತ ಪ್ರಸಿದ್ಧವಾಯಿತು ಮತ್ತು ಇದನ್ನು ಅನೇಕರು ಉಲ್ಲೇಖಿಸಿದ್ದಾರೆ. ಆದರೆ ಎವರೆಟ್ ನ ಮಾತುಗಳು ಹೆಚ್ಚು ಕಡಿಮೆ ಮರೆತೇ ಹೋಯಿತು. ಲಿಂಕನ್ ಅವರ ಸಂಕ್ಷಿಪ್ತ ಮತ್ತು ಚಿಂತನಶೀಲ ಮಾತುಗಳು ಅದಕ್ಕೆ ಕಾರಣವಲ್ಲ. ಆ ಸಮಯದಲ್ಲಿದ್ದ ಅಂತರ್ಯುದ್ಧ ದಿಂದಾಗಿ ಧ್ವಂಸವಾಗಿ ನೊಂದು ಹೋದ ಮನೋಸ್ಥಿತಿಯಲ್ಲಿದ್ದ ಆ ರಾಷ್ಟ್ರದ ಜನರಿಗೆ ಭವಿಷ್ಯತ್ತಿನಲ್ಲಿ ನಂಬಿಕೆಯನ್ನು ಹುಟ್ಟಿಸುವಂತಿದ್ದ ಅವರ ಮಾತುಗಳೇ ಅವರ ಹೃದಯ ಮತ್ತು ಮನಸ್ಸನ್ನು ಮುಟ್ಟಿತು.

 

ಯೆಶಾಯ 50: 4 ರಲ್ಲಿ ನೋಡುವಾಗ ಬಳಲಿ ಹೋದವನನ್ನು ಹೇಗೆ ಮಾತಿನಿಂದ ಆದರಿಸುವಿ ಎಂಬದನ್ನು ನಾನು ತಿಳಿಯುವ ಹಾಗೆ ಕರ್ತನಾದ ದೇವರು ಶಿಕ್ಷಿತ ನಾಲಿಗೆಯನ್ನು ನನಗೆ ಕೊಟ್ಟಿದ್ದಾನೆ." ಎಂದು ಓದುತ್ತೇವೆ, ಪವಿತ್ರ ಬೈಬಲ್ ನಲ್ಲಿ ದೇವರ ಆತ್ಮವು ನಮಗೊಂದು ಅತ್ಯುತ್ತಮವಾದ ಶಿಕ್ಷಕರಾಗಿ ಕಾಣುತ್ತಿದ್ದಾರೆ. ನಾವು ಯಾವ ಸ್ಥಳದಲ್ಲಿ ಹೇಗೆ ಮಾತನಾಡಬೇಕು, ಹೇಗೆ ಸಾಂತ್ವನ ಹೇಳಬೇಕು ಮತ್ತು ಎಲ್ಲಿ ಬೋಧಿಸಬೇಕು ಎನ್ನುವುದರಲ್ಲಿ ಒಂದು ಉತ್ತಮ ಶಿಕ್ಷಕರಾಗಿ ಆತ ನಮ್ಮೊಂದಿಗೆ ಮಾತನಾಡುತ್ತಿದ್ದಾರೆ. ಪರಿಶುದ್ಧ ಯೋಹಾನನು ತನ್ನ ಸುವಾರ್ತೆಯ ಪುಸ್ತಕದಲ್ಲಿ ಪವಿತ್ರಾತ್ಮನು ನಮಗೆ ಉತ್ತಮವಾಗಿ ಬೋಧಿಸಿ ನಡೆಸುವಾತನು ಎಂದು ಹೇಳುತ್ತಾರೆ.

 

ಕ್ರಿಸ್ತನಲ್ಲಿ ಪ್ರಿಯರೇ, ನಮ್ಮೆಲ್ಲರಿರೂ ಮುಖ್ಯ ಶಿಕ್ಷಕರಾಗಿರುವ ದೇವರ ಪಾದದಲ್ಲಿ ಕಾದಿದ್ದು ಬೋಧಿಸಲು ಕಲಿತುಕೊಳ್ಳಬೇಕು. ಯೇಸುವಿನ ಬಗ್ಗೆ ತಿಳಿಯದವರಿಗೆ ಸತ್ಯವನ್ನು ಬೋಧಿಸುವ ಅತ್ಯುತ್ತಮ ಶಿಕ್ಷಕರಾಗಿ ನಾವು ಮಾರ್ಪಡಬೇಕೆಂದು ದೇವರು ನಮ್ಮ ಬಳಿ ಎದುರು ನೋಡುತ್ತಿದ್ದಾರೆ. ಅದಕ್ಕಾಗಿ ದೇವರು ಕೃಪೆ ತೋರಿಸಲಿ.

- P. ಜಾಕೋಬ್ ಶಂಕರ್

 

ಪ್ರಾರ್ಥನಾ ಅಂಶ:

200 ಜನರ ಸುವಾರ್ತಾಬೋಧಕ ಗುಂಪಿನ ಮೂಲಕ 1000 ಹೊಸ ಹಳ್ಳಿಗಳಲ್ಲಿ ಸುವಾರ್ತೆಯು ಸಾರಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al