Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.08.2021
Share:

By Village Missionary Movement

Tuesday, 31-Aug-2021

ಧೈನಂದಿನ ಧ್ಯಾನ(Kannada) – 31.08.2021

 

ಸಮರ್ಪಣೆ

 

"...ನಮ್ಮ ಸಹೋದರಿ, ನೀನು ಸಹಸ್ರ ಸಹಸ್ರಗಳಿಗೆ ತಾಯಿಯಾಗು;..." - ಆದಿಕಾಂಡ. 24:60

 

ಸೇವಕರೊಬ್ಬರು ಮನೆ-ಮನೆಯನ್ನು ಭೇಟಿ ಮಾಡುವಾಗ ವಿಶ್ವಾಸಿಯೊಬ್ಬರ ಮನೆಗೆ ಹೋದರು. ಆ ಕುಟುಂಬದವರು ಅವರನ್ನು ಆಹ್ವಾನಿಸಿ ಕೂರಿಸಿದರು. ಆ ಮನೆಯಲ್ಲಿರುವ ಯೌವನಸ್ಥ ಮಗಳು ಅವರಿಗೆ ಚಹಾ ತಂದಳು. ಚಹಾವನ್ನು ತೆಗೆದುಕೊಂಡ ನಂತರ ಸೇವಕರು ಆ ಮಗಳ ಬಳಿ ಹೀಗೆ ಕೇಳಿದರು "ಏನಮ್ಮಾ ನಿನ್ನನ್ನು ಸೇವೆಗೆ ಸಮರ್ಪಿಸಬಾರದಾ?" ಎಂದು! ತಕ್ಷಣ ಗಾಬರಿಯಾಗಿ “ಅಯ್ಯಾ, ನಾನು ಈಗ ಯೌವನಸ್ಥ ಹುಡುಗಿ ಕಾಲೇಜಿನಲ್ಲಿ ಓದುತ್ತಿದ್ದೇನೆ. ಇನ್ನೂ ಕೆಲಸ ನಂತರ ನನ್ನ ಮದುವೆ, ನಂತರ ನನ್ನ ಕುಟುಂಬ, ನಂತರ ನನ್ನ ಭವಿಷ್ಯ ... ” ಎಂದು ಅವಳು ಮುಂದುವರಿಸಿದಳು. "ನನ್ನ 60 ನೇ ವಯಸ್ಸಿನ ನಂತರ ನಾನು ನನ್ನ ಕೈಲಾದಷ್ಟು ಸೇವೆ ಮಾಡುತ್ತೇನೆ" ಎಂದಳು. ಅರ್ಧ ಕಪ್ ಚಹಾ ಕುಡಿಯುತ್ತಲೇ ಕೇಳುತ್ತಿದ್ದ ಸೇವಕರು ಕುಡಿಯುತ್ತಿದ್ದ ಚಹಾವನ್ನು ಅವಳ ಬಳಿ ಕೊಟ್ಟು ಉಳಿದದ್ದನ್ನು ಕುಡಿದುಕೊಳ್ಳಮ್ಮಾ ಎಂದು ನಗುತ್ತಲೇ ಹೇಳಿದರು. ಆಗ ಆ ಯೌವನಸ್ಥ ಹುಡುಗಿಗೆ ಕೋಪ ಬಂತು. ಆಕೆಯ ಕುಟುಂಬದವರು ಕೂಡ ಏನೂ ಅರ್ಥವಾಗದೆ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಿದ್ದರು.

 

ಆ ಸೇವಕರು ನಗುತ್ತಲೇ ಮುಂದುವರೆಸಿದರು, "ಅರ್ಧ ಚಹಾವನ್ನು ಕೊಟ್ಟ ಕೂಡಲೇ ನಿನಗೆ ಎಷ್ಟು ಕೋಪ ಬಂತು, ಅದರಂತೆ ನೀನೂ ಕೂಡ ಬಲವುಳ್ಳ ನಿನ್ನ ಜೀವಮಾನವನ್ನೆಲ್ಲಾ ನಿನಗಾಗಿ ಜೀವಿಸಿ ಬಿಟ್ಟು, ಉಳಿದ ಜೀವನವನ್ನು ನಿನ್ನನ್ನು ಸೃಷ್ಟಿಸಿದ ದೇವರಿಗೆ ಕೊಡುತ್ತೇನೆಂದು ಹೇಳುತ್ತಿದ್ದೀಯೇ" ಎಂದರು. ಅದನ್ನು ಕೇಳಿದ ಯೌವನಸ್ಥ ಹುಡುಗಿ ಯೋಚಿಸಿದಳು. ಕೆಲವೇ ದಿನಗಳಲ್ಲಿ ಆಕೆ ತನ್ನನ್ನು ದೇವರಿಗಾಗಿ ಅರ್ಪಿಸಿಕೊಂಡಳು.

 

ಇದೇ ರೀತಿ ಸತ್ಯವೇದದಲ್ಲಿ ಒಂದು ಮಹಿಳೆ ತನ್ನನ್ನು ಅರ್ಪಿಸಿಕೊಂಡಿದ್ದಕ್ಕಾಗಿ ಆಶೀರ್ವಾದವನ್ನು ಪಡೆದುಕೊಂಡಳು. ದೊಡ್ಡ ಶ್ರೀಮಂತನಾಗಿದ್ದ ತನ್ನ ಯಜಮಾನನಾದ ಅಬ್ರಹಾಮನ ಮಗನಿಗೆ ಅವರ ಹಿರೀ ಸೇವಕನು ಹೆಣ್ಣನ್ನು ಹುಡುಕಿ ಕೊಂಡು ಬರುತ್ತಿರುವಾಗ ದೇವರ ಬಳಿ ಒಂದು ಗುರುತನ್ನು ಕೇಳುತ್ತಾನೆ. ಆ ಗುರುತಿನ ಪ್ರಕಾರ ನೀರು ಸೇದಲು ಬಂದ ರೆಬೆಕ್ಕಳ ಬಳಿ ಹೇಳುತ್ತಾನೆ. ಆ ಹುಡುಗಿಯೂ ಕೂಡ ಬೇರೇನೂ ಮಾತಾಡದೇ, ಆತನಿಗೆ ಮತ್ತು ಆತನ 10 ಒಂಟೆಗಳಿಗೂ ನೀರನ್ನು ಸೇದು ಕೊಡುತ್ತಾಳೆ. ಅಷ್ಟೇ ಅಲ್ಲ, ಆ ಸೇವಕನನ್ನು ತನ್ನ ಮನೆಯವರಿಗೆ ಪರಿಚಯಿಸುತ್ತಾಳೆ ಮತ್ತು ತನ್ನ ಕುಟುಂಬದ ಸಂಪೂರ್ಣ ಒಪ್ಪಿಗೆಯೊಂದಿಗೆ, ತಾನು ಎಂದಿಗೂ ಭೇಟಿಯಾಗದ ವರನಿಗೆ ತನ್ನನ್ನು ಅರ್ಪಿಸಿಕೊಂಡು, ಆ ಸೇವಕನೊಂದಿಗೆ ತನ್ನ ಪ್ರಯಾಣವನ್ನು ಮುಂದುವರಿಸಿದಳು. ಒಂದು ತೃಪ್ತಿಕರ ಜೀವನವನ್ನು ಪಡೆದುಕೊಂಡಳು.

 

ಇದನ್ನು ಓದುತ್ತಿರುವ ಸಹೋದರ, ಸಹೋದರಿ! ನಿಮ್ಮ ಜೀವನವನ್ನು ದೇವರ ಚಿತ್ತಕ್ಕೆ ಅರ್ಪಿಸಿಕೊಟ್ಟಿದ್ದೀರಾ? ಅಥವಾ ನಿಮ್ಮ ಮನಸ್ಸಿನ ಆಸೆಯಂತೆ ಜೀವಿಸಿ ಬಿಟ್ಟು ನಿಮ್ಮ ಉಳಿದ ಜೀವನವನ್ನು ದೇವರಿಗೆ ಕೊಡಲಿದ್ದೀರಾ? ನಾವು ನಮ್ಮನ್ನು ಸಂಪೂರ್ಣವಾಗಿ ದೇವರಿಗೆ ಸಮರ್ಪಿಸಿದರೆ, ಜೀವನವೇ ಆಶೀರ್ವಾದಕರವಾಗಿರುತ್ತದೆ, ಮತ್ತೊಬ್ಬರಿಗೂ ಪ್ರಯೋಜನಕರವಾದ ಜೀವನವಾಗಿರುತ್ತದೆ.

- R. ಮಂಜುಳಾ

 

 ಪ್ರಾರ್ಥನಾ ಅಂಶ:

 12 ಮಿಷನರಿಗಳ ಮೂಲಕ ಆಯಾ ರಾಜ್ಯಗಳಲ್ಲಿ ಸಮರ್ಪಿಸಿಕೊಂಡಿರುವ 500 ಮಿಷನರಿಗಳನ್ನು ದೇವರು ಎಬ್ಬಿಸಿ ಕೊಡುವಂತೆ ದೇವರನ್ನು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş holiganbet casibom bets10 extrabet royalbet süperbetin casibom giriş casibom jojobet giriş casibom milanobet piabellacasino betpas bahiscasino atlasbet betpas casinoroyal bahiscasino ngsbahis betplay holiganbet jojobet casibom holiganbet jojobet casibom vaycasino romabet