By Village Missionary Movement
Sunday, 29-Aug-2021ಧೈನಂದಿನ ಧ್ಯಾನ(Kannada) – 29.08.2021 (Kids Special)
ಬೆಳ್ಳಿ Spoon ಎಲ್ಲಿ?
"ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ." - ಕೀರ್ತನೆ 119:105
ಏಳನೇ ತರಗತಿ ಓದುತ್ತಿರುವ ಭಾರತಿಯ ಬಳಿ Bible ಓದಿಸುವುದು, ತಾಯಿಗೆ ತುಂಬಾ ಕಷ್ಟವಾಗಿತ್ತು. ಪ್ರತಿದಿನ ಅವಳು ಯಾವುದೋ ಒಂದು ಕಾರಣ ಹೇಳುತ್ತಳೇ ಇದ್ದಳು. ಅವಳು ಪ್ರತಿವಾರ Sunday School ಗೆ ಹೋಗುತ್ತಿದ್ದರೂ, ಸತ್ಯವೇದ ಓದಲು ಅವಳಿಗೆ ಆಸಕ್ತಿಯಿರಲಿಲ್ಲ. ಭಾರತಿಯ ಅಮ್ಮ ಅವಳ ಬಳಿ ನೀನು ಎರಡು ದಿನಗಳಿಂದ ಬೈಬಲ್ ಓದೇ ಇಲ್ಲ, ಹೋಗಿ ಬೈಬಲ್ ನ್ನು ತೆರೆದು ಓದು ಎಂದರು. ಭಾರತಿ ಮಾತ್ರ ತಾಯಿಯ ಮಾತಿಗೆ ವಿಧೇಯಳಾಗಲೇ ಇಲ್ಲ. ಇವಳ ಬಳಿ ಹೇಗೆ ಪ್ರಾರ್ಥನೆ ಮಾಡಿಸುವುದು, ಬೈಬಲ್ ಓದಿಸುವುದು ಎಂದು ತಾಯಿಗೆ ಅರ್ಥವಾಗಲಿಲ್ಲ.
ಅಂದು ಭಾರತಿಯ ಮನೆಗೆ ರೀನಾ Aunty ತನ್ನ ಪುಟ್ಟ ಮಗನೊಂದಿಗೆ, ಬಹಳಷ್ಟು ತಿಂಡಿಗಳೊಂದಿಗೆ ಬಂದರು. ಭಾರತಿಗೆ ಆ ಪುಟ್ಟ ತಮ್ಮನನ್ನು ನೋಡಿದ ಕೂಡಲೇ ತುಂಬಾ ಸಂತೋಷವಾಯಿತು, ಅವನೊಂದಿಗೆ ಆಟವಾಡಲು ಪ್ರಾರಂಭಿಸಿದಳು. ಆಕೆಯ ತಾಯಿ ಮತ್ತು ರೀನಾ Aunty ಒಬ್ಬರೊಂದಿಗೊಬ್ಬರು ಮಾತನಾಡುತ್ತಿದ್ದರು. ಆಗ ತಾಯಿ ತುಂಬಾ ದುಃಖದಿಂದ ರೀನಾ Aunty - ಯ ಬಳಿ ಭಾರತಿಯ ಅವಿಧೇಯತೆಯ ಬಗ್ಗೆ ಹೇಳಿದರು. ರೀನಾ Aunty ಭಾರತಿಯ ಬಳಿ ಹೇಗಾದರೂ ಬೈಬಲ್ ನ್ನು ತೆರೆದು ಓದಿಸುವ ಸಲುವಾಗಿ, ಅವಳು ಆಸೆಯಾಗಿ ಇಟ್ಟುಕೊಂಡಿದ್ದ ಬೆಳ್ಳಿ Spoon ನನ್ನು ತೆಗೆದುಕೊಂಡು ಆ ಪುಟ್ಟ ತಮ್ಮನಿಗೆ ತಿನ್ನಿಸಿದರು. ನಂತರ ಅವರು ಸ್ವಲ್ಪ ಸಮಯ ಇದ್ದು ನಂತರ ಮನೆಗೆ ಹೊರಟು ಹೋದರು. ಅವರು ಹೊರಟ ನಂತರ ಭಾರತಿ ತನ್ನ ತಾಯಿಯ ಬಳಿ ಹೋಗಿ ನನ್ನ ಬೆಳ್ಳಿ Spoon- ನನ್ನು ಏಕೆ ಎತ್ತಿ ಕೊಟ್ಟಿರಿ. ರೀನಾ Aunty ಅವರು ಅದನ್ನು ಮನೆಗೆ ಎತ್ತಿಕೊಂಡು ಹೋಗಿ ಬಿಟ್ಟರು ಎಂದು ಅತ್ತಳು. ಆ ವಾರ Sunday church ಗೆ ಹೋದ ಕೂಡಲೇ ರೀನಾ Aunty ಯ ಬಳಿಗೆ ಹೋಗಿ Aunty ನನ್ನ ಬೆಳ್ಳಿ Spoon ನನ್ನು ಪುಟ್ಟ ತಮ್ಮ ತಿಳಿಯದೆ ಎತ್ತಿಕೊಂಡು ಹೋಗಿ ಬಿಟ್ಟನು ಎಂದು ನೆನೆಸುತ್ತೇನೆ. ನಿಮ್ಮ ಮನೆಯಲ್ಲಿದೆಯಾ? ಎಂದು ಕೇಳಿದಳು. ರೀನಾ Aunty ನಾನು ಅದನ್ನು ತರಲಿಲ್ಲ, ನಾನು ಅದನ್ನು ನಿನ್ನ Bible ಒಳಗೆ ಇಟ್ಟು ಬಿಟ್ಟು ಬಂದೆ. ಹಾಗಾದರೆ ನೀನು ಒಂದು ವಾರದಿಂದ ಬೈಬಲ್ ಓದಲೇ ಇಲ್ವಾ? ಎಂದರು. ಭಾರತಿಗೆ ತುಂಬಾ ನಾಚಿಕೆಯಾಗೋಯ್ತು. ಏಕೆಂದರೆ ಆಕೆಯ ತಾಯಿ ಹೇಳಿದರೂ ಭಾರತಿ ಬೈಬಲ್ ಅನ್ನು ತೆರೆಯಲೇ ಇಲ್ಲ. ರೀನಾ Aunty ಮತ್ತೊಮ್ಮೆ ಭಾರತಿಗೆ ಕತ್ತಲೆಯಲ್ಲಿ ನಡೆಯಲು, ನೋಡಲು Torch ಎಷ್ಟು ಮುಖ್ಯವೋ, ಹಾಗೆಯೇ ಕತ್ತಲಾಗಿರುವ ನಿನ್ನ ಜೀವನವು ಪ್ರಕಾಶಿಸಲು, ನೀನು ನಡೆಯಬೇಕಾದ ಮಾರ್ಗವನ್ನು ನಿನಗೆ ತೋರಿಸಲು, ಬೈಬಲ್ ಅನ್ನು ಓದುವುದು ಮತ್ತು ಬಾಯಿಪಾಠ ಮಾಡುವುದು ತುಂಬಾ ಪ್ರಾಮುಖ್ಯ ಎಂದರು. ಭಾರತಿ ತನ್ನ ತಪ್ಪನ್ನು ಅರಿತು ಸರಿ Aunty ಇನ್ನು ಮುಂದೆ Daily Bible ಅನ್ನು ಓದುತ್ತೇನೆ ಎಂದಳು.
ಪುಟ್ಟ ತಮ್ಮ, ತಂಗಿ ನೀನೂ ಕೂಡ ಇದುವರೆಗೂ ಬೈಬಲ್ ಅನ್ನು ತೆರೆಯದಿದ್ದರೆ, ಇಂದಿನಿಂದ ಬೈಬಲ್ ಅನ್ನು ಓದಲು ಪ್ರಾರಂಭಿಸಿ ಬಿಡು. Ok ನಾ.
- Sis. ಬ್ಯೂಲ
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482