Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.08.2021
Share:

By Village Missionary Movement

Saturday, 28-Aug-2021

ಧೈನಂದಿನ ಧ್ಯಾನ(Kannada) – 28.08.2021

 

ಕಡೇವರೆಗೂ

 

"ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ಹಗೆ ಮಾಡು ವರು. ಆದರೆ ಕಡೇವರೆಗೂ ತಾಳುವವನೇ ರಕ್ಷಣೆ ಹೊಂದುವನು." — ಮಾರ್ಕನು 13:13

 

ಅಂದಿನ ರೊಮೇನಿಯನ್ ಸರ್ಕಾರವು ಕ್ರೈಸ್ತರಿಗೆ ಅನೇಕ ಹಿಂಸೆಗಳನ್ನು ನೀಡುತ್ತಿತ್ತು. ಈ ಸಮಯದಲ್ಲಿ ಒಂದು ಸಭೆಯ ಬೋಧಕರನ್ನು ಅವರ ಸಭೆಯ ಇಬ್ಬರು ವಿಶ್ವಾಸಿಗಳನ್ನು ರೊಮೇನಿಯನ್ ಸರ್ಕಾರವು ಬಂಧಿಸಿ ಜೈಲಿಗೆ ಹಾಕಿತು. ಅಲ್ಲಿ ಅವರಿಂದ ಸಾಧ್ಯವಾದಷ್ಟು ಮಟ್ಟಿಗೆ ಅವರನ್ನು ಕಠಿಣವಾಗಿ ಹಿಂಸಿಸಿದರು. ಬೋಧಕರು ಮತ್ತು 2 ವಿಶ್ವಾಸಿಗಳು ತುಂಬಾ ಕಷ್ಟಪಟ್ಟರು. ಅವರಿಂದ ಈ ದುಷ್ಕೃತ್ಯಗಳನ್ನು ಸಹಿಸಲಾಗಲಿಲ್ಲ. ಆದರೂ ಬೋಧಕರು ಬೋಧಿಸಿದ ಬಲವಾದ ದೇವರ ವಾಕ್ಯಗಳು ಕಿವಿಗಳಿಗೆ ಕೇಳುತ್ತಲೇ ಇತ್ತು. ಆದ್ದರಿಂದಲೇ ಅವರನ್ನು ಎಷ್ಟೇ ಕ್ರೂರವಾಗಿ ಹಿಂಸಿಸಿದರೂ ಸಹಿಸಿಕೊಂಡರು.

 

ಒಂದು ದಿನ ಅಧಿಕಾರಿಗಳು ಬೋಧಕರ ಬಳಿಗೆ ಬಂದು ನಾವು ಇನ್ನು ಮುಂದೆ ನಿನ್ನನ್ನು ಹೇಗೆಲ್ಲಾ ಹಿಂಸಿಸುತ್ತೇವೆಂದು ನೋಡು ಎಂದು ಹೇಳಿದರು. ನೀನು ಈ ಹಿಂಸೆಯನ್ನು ಸಹಿಸಲಿದ್ದೀಯ? ಅಥವಾ ನಾವು ಹೇಳುವ ಕಾರ್ಯವನ್ನು ನೀನು ಮಾಡುತ್ತೀಯ? ನಾವು ಹೇಳುವುದನ್ನು ನೀನು ಮಾಡಿದರೆ ನಿನಗೆ ಬಿಡುಗಡೆ! ಎಂದು ಹೇಳಿದರು. ತಕ್ಷಣವೇ ಬೋಧಕರ ಮನಸ್ಸು ಪರಿತಪಿಸಿತು, ಅವರ ಬಳಿ "ಸರಿ, ನೀವು ಏನು ಹೇಳುತ್ತೀರೊ ನಾನು ಅದನ್ನು ಮಾಡುತ್ತೇನೆ" ಎಂದು ಹೇಳಿದರು. ಅದಕ್ಕೆ ಅವರು ನಿನ್ನೊಂದಿಗೆ ಬಂದ ಇಬ್ಬರನ್ನೂ ನೀನು ಗನ್ ನಿಂದ ಸುಡಬೇಕು ಎಂದು ಹೇಳಿದರು. ಮರುದಿನ ಆತನೊಂದಿಗೆ ಬಂಧಿಸಲ್ಪಟ್ಟ ವಿಶ್ವಾಸಿಗಳನ್ನು ಆತನ ಮುಂದೆ ನಿಲ್ಲಿಸಲಾಯಿತು. ಅವರನ್ನು ನೋಡಿ ವಿಶ್ವಾಸಿಗಳು ಹೇಳಿದರು, "ಬೊಧಕರೇ, ನೀವು ಬೋಧಿಸಿದ ವಾಕ್ಯಗಳನ್ನು ನಾವು ತುಂಬಾ ಶ್ರದ್ಧೆಯಿಂದ ಕೇಳಿ ದೇವರಿಗಾಗಿ ಇಷ್ಟೊಂದು ವೈರಾಗ್ಯದಿಂದ ನಿಂತಿದ್ದೇವೆ. ನೀವು ದಯವಿಟ್ಟು ಯೋಚಿಸಿ ನೋಡಿ" ಎಂದರು. ಅವರ ಹೃದಯ ಒಡೆದು ಹೋಯಿತು. ಸರಿ, ನಿಮ್ಮನ್ನು ಸುಟ್ಟು ಬಿಡುಗಡೆಯಾದ ನಂತರ, ನಾನು ನನ್ನನ್ನು ಸರಿಮಾಡಿಕೊಳ್ಳುತ್ತೇನೆ ಎಂದು ಹೇಳಿದರು. ವಿಶ್ವಾಸಿಗಳು ಅವರನ್ನು ನಂಬಬೇಡಿ ಎಂದು ಹೇಳಿದರೂ ಆತ ಕೇಳಲಿಲ್ಲ, ಬದಲಾಗಿ ಆತ ಅವರಿಬ್ಬರನ್ನೂ ಹೊಡೆದುರುಳಿಸಿದ. ಮುಂದಿನ ಕ್ಷಣವೇ ಅಧಿಕಾರಿಗಳು ಆತನನ್ನು ಸುಟ್ಟು ಕೊಂದು ಹಾಕಿದರು. ಆ ಬೋಧಕರು ನಂತರ ದೇವರ ಬಳಿ ಕ್ಷಮೆ ಕೇಳಬಹುದೆಂದು ಭಾವಿಸಿದರು, ಆದರೆ ಅದಕ್ಕೆ ಸಮಯವಿರಲಿಲ್ಲ, ಈಗ ಸತ್ತುಹೋದರು. ಆದ್ದರಿಂದಲೇ ಸತ್ಯವೇದವು ಹೇಳುತ್ತದೆ ಕಡೇವರೆಗೂ ತಾಳುವವನೇ ರಕ್ಷಣೆ ಹೊಂದುವನು. ಎಂದು. 

 

ಹೌದು, ಶದ್ರಕ್‌ ಮೇಷಕ್‌ ಮತ್ತು ಅಬೇದ್‌ನೆಗೋ ಎಂಬವರು ಬಂಗಾರದ ಪ್ರತಿಮೆಗೆ ಅಡ್ಡಬಿದ್ದು ನಂತರ ದೇವರ ಬಳಿ ಕ್ಷಮೆ ಕೇಳೋಣ ಎಂದೆಲ್ಲಾ ಅವರು ದೇವರ ಮೇಲಿನ ತಮ್ಮ ಉತ್ಸಾಹವನ್ನು ಬಿಟ್ಟುಕೊಡಲಿಲ್ಲ. ಬದಲಾಗಿ ದೇವರ ಆಜ್ಞೆಯನ್ನು ಮೀರಿ ಭೂಮಿಯ ಮೇಲೆ ಸುಖವಾಗಿ ಬದುಕುವುದಕ್ಕಿಂತ, ಧಗಧಗನೆ ಉರಿಯುವ ಬೆಂಕಿಯ ಆವಿಗೆಯನ್ನು ಆರಿಸಿಕೊಂಡರು. ಇಂದಿಗೂ ದೇವರು ನಮ್ಮಲ್ಲಿರುವ ಪಾಪಗಳನ್ನು ಬಿಟ್ಟು ಬಿಡುವಂತೆ ನಮ್ಮೊಂದಿಗೆ ಮಾತನಾಡುತ್ತಲೇ ಇರಬಹುದು. ಇದು ನನ್ನ ಬಲಹೀನತೆ, ನಂತರ ನಾನು ದೇವರ ಬಳಿ ಕ್ಷಮಾಪಣೆ ಕೇಳುತ್ತೇನೆ ಎಂದು ಹೇಳಿ ಪದೇ ಪದೇ ಅದೇ ತಪ್ಪನ್ನು ಮಾಡುತ್ತಿದ್ದೀರ? ಅದನ್ನು ಬಿಟ್ಟು ಬಿಡಲು ಪ್ರಯತ್ನ ಮಾಡಿರಿ. ಅಂತ್ಯ, ಅಂದರೆ, ಸಾವು ಒಂದು ಮನುಷ್ಯನಿಗೆ ಯಾವ ಸಮಯದಲ್ಲಿ ಬೇಕಾದರೂ ಬರಬಹುದು. ನಮಗೆ ಕೊಡಲ್ಪಟ್ಟಿರುವ ಆಯುಸ್ಸು ಎಷ್ಟೆಂಬುದು ನಮಗೆ ತಿಳಿದಿಲ್ಲ. ಆದ್ದರಿಂದ ನಾವು ಇದನ್ನು ನೆನಪಿನಲ್ಲಿಟ್ಟುಕೊಂಡು ಪ್ರತಿದಿನ ಕ್ರಿಸ್ತನಿಗಾಗಿ ಜೀವಿಸೋಣ. ನಮಗೆ ಬರುವ ಪಾಡುಗಳಲ್ಲಿ, ಉಪದ್ರವಗಳಲ್ಲಿ ಮತ್ತು ಪಾಪದ ಹೋರಾಟಗಳಲ್ಲಿ ನಾವು ಕ್ರಿಸ್ತನಿಗಾಗಿ ಸ್ಥಿರವಾಗಿ ನಿಲ್ಲೋಣ. ಆಮೆನ್

- P. V. ವಿಲಿಯಮ್ಸ್

 

ಪ್ರಾರ್ಥನಾ ಅಂಶ:

New life Home ನಲ್ಲಿರುವ ಮಕ್ಕಳ ಶಿಕ್ಷಣ ಮತ್ತು ಭವಿಷ್ಯವು ಆಶೀರ್ವದಿಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet