Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.08.2021
Share:

By Village Missionary Movement

Friday, 27-Aug-2021

ಧೈನಂದಿನ ಧ್ಯಾನ(Kannada) – 27.08.2021

 

ಕೈ ಬಿಡದವರು - ತೊರೆಯದವರು 

 

"...ನಾನು ನಿನ್ನನ್ನು ಕೈಬಿಡುವುದಿಲ್ಲ,... ನಿನ್ನನ್ನು ತೊರೆಯುವದಿಲ್ಲ." - ಯೆಹೋಶುವ 1: 5

 

ಒಬ್ಬ ತಂದೆ ಮತ್ತು ಅವರ ಪುಟ್ಟ ಮಗಳು ಸೇತುವೆಯ ಮೇಲೆ ನಡೆಯುತ್ತಿದ್ದರು. ಕೆಳಗೆ ನದಿ ಹರಿಯುತ್ತಿತ್ತು. ತಂದೆ ಮಗಳ ಬಳಿ ಹೇಳಿದರು, “ಮಗಳೇ ನನ್ನ ಕೈ ಹಿಡಿದುಕೋ. ಆಗ ನೀನು ಬೀಳುವುದಿಲ್ಲ” ಎಂದರು. ಅದಕ್ಕೆ ಮಗಳು ಹೇಳಿದಳು, "ಇಲ್ಲಾ ಅಪ್ಪಾ, ನೀವೇ ನನ್ನ ಕೈ ಹಿಡಿಯಿರಿ." ಎಂದಳು. ತಂದೆಗೆ ಆಶ್ಚರ್ಯ, "ಇದರಲ್ಲಿ ಏನು ವ್ಯತ್ಯಾಸವಿದೆ? ನೀನು ಹಿಡಿದುಕೊಂಡರೆ ಏನು? ನಾನುಹಿಡಿದುಕೊಂಡರೆ ಏನು?" ಎಂದು ತಂದೆ ಆಶ್ಚರ್ಯದಿಂದ ಕೇಳಿದರು. "ನಾನು ನಿಮ್ಮ ಕೈ ಹಿಡಿದರೆ, ಒಂದು ವೇಳೆ ನಾನು ಕೈ ಬಿಟ್ಟುಬಿಡುವ ಅವಕಾಶವಿದೆ. ಕಾಲು ಜಾರಿದರೂ ಕೂಡ ನಾನು ಕೈ ಬಿಟ್ಟುಬಿಡುತ್ತೇನೆ. ಆದರೆ ನೀವು ನನ್ನ ಕೈ ಹಿಡಿದರೆ ಏನೇ ನಡೆದರೂ ನೀವು ನನ್ನ ಕೈ ಬಿಡುವುದಿಲ್ಲ” ಎಂದು ಮಗಳು ಹೇಳಿದಳು. ತಂದೆ ಸಂತೋಷದಿಂದ ಮಗಳನ್ನು ಎತ್ತಿಕೊಂಡು ಎದೆಗೆ ಅಪ್ಪಿಕೊಂಡರು.

 

ಸತ್ಯವೇದದಲ್ಲಿ ಇಸ್ರಾಯೇಲ್ ಜನರನ್ನು ಮುನ್ನಡೆಸಲು ಕರ್ತನಿಂದ ಆರಿಸಲ್ಪಟ್ಟವರೇ ಯೆಹೋಶುವ ಎಂಬ ದೇವ ಮನುಷ್ಯನು. ಇವರನ್ನು ನೋಡಿ ಕರ್ತನು, "ನಾನು ನಿನ್ನನ್ನು ಕೈ ಬಿಡುವುದಿಲ್ಲ, ನಿನ್ನನ್ನು ತೊರೆಯುವುದಿಲ್ಲ" ಎಂದು ಹೇಳಿದರು. ಹೀಗೆ ಇಸ್ರಾಯೇಲ್ ಜನರನ್ನು ಕೊನೆಯವರೆಗೂ ಮುನ್ನಡೆಸುವಲ್ಲಿ ಕರ್ತನು ಅವರನ್ನು ಕೈ ಬಿಡಲೂ ಇಲ್ಲ, ತೊರೆಯಲೂ ಇಲ್ಲ. ಕಾರಣವೇನಂದರೆ ಯೆಹೋಶುವನು ಕೂಡ ದೇವರ ಕೈಯನ್ನು ಬಿಡದೇ ಹಿಡಿದುಕೊಂಡರು.

 

ಹೌದು, ಪ್ರಿಯರೇ! ಯೇಸು ನಮ್ಮ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡು ನಡೆಯುತ್ತಿದ್ದಾರೆ. ಆದರೆ ನಾವು ಅನೇಕ ಬಾರಿ ಅವರ ಕೈಯನ್ನು ಒದರಿ ಬಿಟ್ಟು ಓಡಿ ಹೋಗುತ್ತಿದ್ದೇವೆ. ಏಕಾಂಗಿಯಾಗಿ ಏನು ಬೇಕಾದರೂ ಮಾಡುವ ಧೈರ್ಯ ಮತ್ತು ಅಹಂ ಇರುವವರೆಗೂ, ಯೇಸುವಿನ ಕೈಯನ್ನು ಒದರಿ ತಳ್ಳುವುದನ್ನೇ ಅನೇಕರು ಬಯಸುತ್ತೇವೆ. ಆದರೆ ಆತನು ಯುಗದ ಸಮಾಪ್ತಿಯವರೆಗೂ ನಮ್ಮೊಂದಿಗಿದ್ದು ನಮ್ಮನ್ನು ಮುನ್ನಡೆಸಲು ಬಯಸುತ್ತಿದ್ದಾರೆ. ಹೌದು, ವಿಶೇಷವಾಗಿ ಈ ವರ್ಷದ ಏಳು ತಿಂಗಳುಗಳೂ ನಮ್ಮ ಜೊತೆಯಿದ್ದು, ನಮ್ಮ ಕೈ ಬಿಡದೆ, ತೊರೆಯುದೇ ಇದ್ದವರು ನಮ್ಮ ಕರ್ತನೇ. ಅನೇಕ ವಿಧವಾದ ಶೋಧನೆಗಳಲ್ಲೂ, ಇಕ್ಕಟ್ಟಿನಲ್ಲೂ, ರೋಗಗಳಲ್ಲೂ ಕೂಡ ನಮ್ಮನ್ನು ಕೈ ಬಿಡದೇ ತೊರೆಯದೇ ಇದ್ದ ದೇವರ ಕೈಯನ್ನೇ ನಾವು ಹಿಡಿದುಕೊಳ್ಳೋಣ! ಇನ್ನು ಮುಂದೆ ಬರುವ ದಿನಗಳಲ್ಲಿಯೂ ಅವರು ನಮ್ಮನ್ನು ಕೈ ಬಿಡದೇ, ತೊರೆಯದೇ ನಮ್ಮೊಂದಿಗಿದ್ದು ನಮ್ಮನ್ನು ಮುನ್ನಡೆಸಲು ಸರ್ವಶಕ್ತನಾಗಿದ್ದಾರೆ. ಹಲ್ಲೇಲೂಯ.

- Mrs. ಶಕ್ತಿ ಶಂಕರರಾಜ್

 

ಪ್ರಾರ್ಥನಾ ಅಂಶ:

ಪ್ರಾರ್ಥನಾ ಗುಡಾರದ ವಿದ್ಯುತ್ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಉಪಕರಣಗಳನ್ನು ತೆಗೆದುಕೊಳ್ಳಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al