Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.08.2021
Share:

By Village Missionary Movement

Thursday, 26-Aug-2021

ಧೈನಂದಿನ ಧ್ಯಾನ(Kannada) – 26.08.2021

 

ಅನುಭವವಿಲ್ಲದ ಎತ್ತು,

ಅಭ್ಯಾಸವಿರುವ ಕವಣೆ

 

"ನಾನು ಅವರ ತೋಳುಗಳನ್ನು ಹಿಡಿದು ಎಫ್ರಾಯಾಮನಿಗೆ ಕಲಿಸಿದೆನು. ಆದರೆ ನಾನು ಅವರನ್ನು ಸ್ವಸ್ಥಮಾಡಿದ್ದೇನೆಂದು ಅವರಿಗೆ ತಿಳಿಯಲಿಲ್ಲ" - ಹೋಶೇಯ 11:3

 

ಅಂದು ಒಂದು ವಿಶೇಷವಾದ ದಿನ. ಪ್ರತಿಯೊಂದು ಕಾರ್ಯಗಳನ್ನು ಬಹು ಸುಂದರವಾಗಿ ಮತ್ತು ಅಚ್ಚುಕಟ್ಟಾಗಿ ಯೋಜನೆ ಹಾಕಲಾಗಿತ್ತು. ಒಂದಲ್ಲ ಎರಡಲ್ಲ, ಸುಮಾರು 30,000 ಜನರನ್ನು ಆಯ್ಕೆ ಮಾಡಲಾಗಿತ್ತು. ಎಲ್ಲಾ ರೀತಿಯ ಸ್ವರಮಂಡಲ, ಕಿನ್ನರಿ, ತಂಬೂರಿ, ವೀಣೆ, ತಾಳವಾದ್ಯ, ನೃತ್ಯ ಎಲ್ಲವೂ ಸಿದ್ಧವಾಗಿತ್ತು. ಹೊಚ್ಚ ಹೊಸ ರಥವೂ ಸಿದ್ಧವಾಗಿತ್ತು. ಈಗ ಸ್ವಲ್ಪ ನಿಮಗೆ ಅರ್ಥವಾಗಿರುತ್ತೆ, ಹೌದು, ದಾವೀದನು ನಿಬಂಧನ ಮಂಜೂಷವನ್ನು ಯೆಹೂದದಿಂದ ತೆಗೆದುಕೊಂಡು ಬರುವಾಗ ಮಾಡಿದಂತಹ ವ್ಯವಸ್ಥೆಯೇ ಇದು! ಉಜ್ಜನು ಕೀದೋನನ ಕಣಕ್ಕೆ ಬಂದಾಗ, ಎತ್ತುಗಳು ಎಡವಿದ್ದರಿಂದ ಉಜ್ಜನು ಅಲುಗಾಡಿದ ದೇವ ಮಂಜೂಷವನ್ನು ಹಿಡಿದನು ಆದ್ದರಿಂದ ದೇವರು ಅವನನ್ನು ಹತ ಮಾಡಿದರು ಅವನು ಸತ್ತನು. ಈಗ ನಮ್ಮೊಳಗೆ ಒಂದು ಅನುಮಾನ ಬರಬಹುದು, ಅನುಭವವಿರುವ ಎತ್ತುಗಳಾಗಿದ್ದರೆ ಎಡವುತ್ತಿದ್ದವಾ? ಒಂದು ವೇಳೆ ಅವು ಅನುಭವವಿರುವ ಎತ್ತುಗಳಾಗಿದ್ದರೆ ಎಡುವಲು ಸಾಧ್ಯವೇ ಇಲ್ಲ. ಹೊಸ ರಥ ಎಂದು ಹೇಳಲ್ಪಟ್ಟಿರುವುದರಿಂದ, ಎತ್ತುಗಳೂ ಸಹ ಹೊಸದಾಗಿ ರಬಹುದು. ಅನುಭವವಿರುವ ಗಾಡಿ ಮತ್ತು ಎತ್ತುಗಳು ಇದ್ದಿದ್ದರೆ, ಬಹುಶಃ ಉಜ್ಜನ ಸಾವು ಸಂಭವಿಸುತ್ತಿರಲಿಲ್ಲ.

 

ಇನ್ನೊಂದು ಘಟನೆ ದಾವೀದನು, ಗೊಲ್ಯಾತನು. ಸೌಲನು ದಾವೀದನಿಗೆ ತನ್ನ ಯುದ್ಧ ವಸ್ತ್ರಗಳನ್ನೂ ಕವಚವನ್ನೂ ತೊಡಿಸಿ ತಲೆಗೊಂದು ತಾಮ್ರದ ಶಿರಸ್ತ್ರಾಣವನ್ನಿಟ್ಟನು. ಅವನು ಕತ್ತಿಯನ್ನು ಬಿಗಿದುಕೊಂಡನು. ಆದರೆ ಅವನಿಗೆ ಅವುಗಳಲ್ಲಿ ಅಭ್ಯಾಸ ಇಲ್ಲದಿರುವುದರಿಂದ ಅವುಗಳನ್ನು ತೆಗೆದಿಟ್ಟು ಅವನು ತನಗೆ ಅಭ್ಯಾಸ ವಿರುವ ಕೋಲನ್ನು ತೆಗೆದುಕೊಂಡು 5 ನುಣುಪು ಕಲ್ಲು ಗಳನ್ನು ಆರಿಸಿಕೊಂಡು, ಕುರುಬರ ಪದ್ಧತಿಯಂತೆ ತನಗಿರುವ ಸೊಂಟ ಚೀಲದಲ್ಲಿ ಹಾಕಿ ಕವಣೆಯನ್ನು ಹಿಡಿದು ಫಿಲಿಷ್ಟಿಯನ ಬಳಿಗೆ ಹೋದನು. ಜಯವನ್ನು ಹೊಂದಿದನು.

 

ಇಂದು ದೇವರು ನಮ್ಮ ಬಳಿ ನೀತಿವಾಕ್ಯದಲ್ಲಿ ಅನುಭವವುಳ್ಳವರಾಗಿರಬೇಕು (ಇಬ್ರಿ. 5:13) ಎಂದು ಬಯಸುತ್ತಿದ್ದಾರೆ. ಆಧ್ಯಾತ್ಮಿಕ ಜೀವನದಲ್ಲಿ ಇನ್ನೂ ಕೂಸುಗಳಂತೆ ಅಲ್ಲ ಅನುಭವಸ್ಥ ರಾಗಿ ಮಾರ್ಪಡಬೇಕು ಎಂಬುದೇ. ದಾವೀದನ ಕಾರ್ಯದಲ್ಲಿ ಹೇಗೆ ಅವನು ತನಗೆ ಅಭ್ಯಾಸ ವಿರುವ ಒಂದು ವಿಷಯವನ್ನು ದೇವರಿಗಾಗಿ ಉಪಯೋಗಿಸಿದನೋ ಹಾಗೆಯೇ ನಾವು ನಮ್ಮ ಅನುಭವಗಳನ್ನು ದೇವರಿಗಾಗಿ, ದೇವರ ನಾಮ ಮಹಿಮೆಗಾಗಿ ಉಪಯೋಗಿಸೋಣ! ಹೀಗೆ ಉಪಯೋಗಿಸುವಾಗ ದೇವರು ನಮ್ಮನ್ನು ಹೇರಳವಾಗಿ ಆಶೀರ್ವದಿಸುತ್ತಾರೆ.

- R. ಮಂಜುಳಾ 

 

ಪ್ರಾರ್ಥನಾ ಅಂಶ:

ಜೊತೆ ಸೇವಕರ ಸುರಕ್ಷತೆಗಾಗಿ ಮತ್ತು ಅವರ ಅತ್ಯವಶ್ಯಕ ಅಗತ್ಯಗಳು ಪೂರೈಸಲ್ಪಡಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin