Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.08.2021
Share:

By Village Missionary Movement

Wednesday, 25-Aug-2021

ಧೈನಂದಿನ ಧ್ಯಾನ(Kannada) – 24.08.2021

 

ಆತುರ ಪಡಬೇಡ

 

 "ತನ್ನ ಯಥಾರ್ಥತೆಯಲ್ಲಿ ನಡೆಯುವವನು ಕರ್ತನಿಗೆ ಭಯಪಡುತ್ತಾನೆ;..." - ಜ್ಞಾನೋಕ್ತಿ 14: 2

 

ಲಂಡನ್‌ನಲ್ಲಿ, ಪ್ರಾಮಾಣಿಕತೆ, ಪ್ರತಿಭೆ ಮತ್ತು ದಣಿವರಿಯದ ಕೆಲಸ ಹೊಂದಿರುವ ಪ್ರಸಿದ್ಧ ಉದ್ಯಮಿಯೊಬ್ಬರು ಇದ್ದರು. ಒಂದು ಕಾಲದಲ್ಲಿ ಹೂಡಿಕೆದಾರರು ಮತ್ತು ಉದ್ಯಮಿಗಳ ನಡುವೆ ವಿಶ್ವ ಸಮ್ಮೇಳನ ಸಭೆ ನಡೆಯುತ್ತಿತ್ತು. ಉದ್ಯಮಿಗಳಿಂದ ಆಕರ್ಷಿತರಾದ ಹೂಡಿಕೆದಾರರಿಗೆ ತಮ್ಮ ವ್ಯವಹಾರದಲ್ಲಿ ಹೂಡಿಕೆ ಮಾಡಲು ಅವಕಾಶವೂ ಇತ್ತು. ಇಂತಹ ಸಮಯದಲ್ಲಿ ಆ ಉದ್ಯಮಿಗೆ ಧಿಡೀರ್ ಎಂದು ಅನಾರೋಗ್ಯ ಏರ್ಪಟ್ಟಿತು ಏನು ಮಾಡಬೇಕೆಂದು ತಿಳಿಯದೆ, ತನ್ನ ಮಗನನ್ನು ತನ್ನ ವೃತ್ತಿಯ ಪ್ರತಿನಿಧಿಯಾಗಿ ಸಭೆಯಲ್ಲಿ ಭಾಗವಹಿಸಲು ಕಳುಹಿಸಲು ಬಯಸಿದರು. ಮಗನಿಗೆ ಯಾವುದೇ ಅನುಭವವಿಲ್ಲದಿರುವುದರಿಂದ ಯಾರ ಬಳಿ ಹೇಗೆ ವರ್ತಿಸಬೇಕು ಎಂದು ಕಲಿಸಲು ಬಯಸಿ ಒಂದು ಉತ್ತಮವಾದ ಗಡಿಯಾರವನ್ನು ಕೊಟ್ಟು, “ಮಗನೇ ಇದೊಂದು ವ್ಯತ್ಯಾಸವಾದ ಗಡಿಯಾರ. ನಿನ್ನ ಬಳಿ ಒಬ್ಬರು ಮಾತನಾಡುವಾಗ ಈ ಗಡಿಯಾರ ನಿನಗೆ ಪ್ರತಿಧ್ವನಿ ನೀಡಿದರೆ, ನೀನು ಅವರೊಂದಿಗೆ ಮಾತನಾಡಲು ಎಚ್ಚರವಾಗಿರು ಶಾಂತವಾಗಿ ಅವರ ಬಳಿ ಮಾತನಾಡು" ಎಂದು ಆಲೋಚನೆ ಹೇಳಿದರು. 

 

ನಿರ್ದಿಷ್ಟ ದಿನದಂದು ಮಗ ಆ ಸಭೆಗೆ ಹೋದನು. ಒಬ್ಬ ಉದ್ಯಮಿ ಅವನನ್ನು ಹೊಗಳಿದರು. ತಕ್ಷಣವೇ ಕೈಯಲ್ಲಿದ್ದ ಗಡಿಯಾರ ಪ್ರತಿಧ್ವನಿ ನೀಡಿತು. ಅವನು ತಕ್ಷಣ "ಹಾಗೆಲ್ಲಾ ಏನೂ ಇಲ್ಲ, ಇನ್ನೂ ಮಾಡಬೇಕಾದ ಕೆಲಸ ಎಷ್ಟೋ ಇದೆ" ಎಂದು ಹೇಳಿ ಪಕ್ಕಕ್ಕೆ ಸರಿದನು. ಸ್ವಲ್ಪ ಸಮಯದ ನಂತರ ಮತ್ತೊಬ್ಬರು ಬಂದು ನಿಮ್ಮ ತಂದೆ ಕಡಿಮೆ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಗಡಿಯಾರ ಪ್ರತಿಧ್ವನಿ ನೀಡಿತು, ಇವನೋ "ನಮ್ಮ ಬಗ್ಗೆ ನಿಮಗೆ ತಪ್ಪು ಕಲ್ಪನೆ ಇದೆ" ಎಂದು ಹೇಳಿ ಪಕ್ಕಕ್ಕೆ ಸರಿದು ಹೋದನು.

 

 ಹೀಗೆ ಒಬ್ಬೊಬ್ಬರನ್ನೂ ನಿಭಾಯಿಸಿ ಸಭೆ ಮುಗಿಸಿ ಮನೆಗೆ ಬಂದು ತನ್ನ ತಂದೆಯ ಬಳಿ ನಡೆದದ್ದನ್ನೆಲ್ಲಾ ಹೇಳಿದನು. "ಯಾರಾಗಿದ್ದರೂ, ಯಾವುದೇ ಪರಿಸ್ಥಿತಿಯಾಗಿದ್ದರೂ ಶಾಂತವಾಗಿ ಮಾತನಾಡಿ, ಬುದ್ಧಿವಂತಿಕೆಯಿಂದ ವರ್ತಿಸಿದರೆ ಎಂತಹಾ ಸಮಸ್ಯೆಯನ್ನಾದರೂ ನಿಭಾಯಿಸಬಹುದು. ಇನ್ನು ನನ್ನ ಭಾವನೆಗಳೊಂದಿಗೆ ಪ್ರತಿಧ್ವನಿಸುವ ಈ ಗಡಿಯಾರ ಇನ್ನು ಮುಂದೆ ನನಗೆ ಅಗತ್ಯವಿಲ್ಲ ಮತ್ತು ನಾನು ಹೇಗೆ ಶಾಂತವಾಗಿ ನಡೆದುಕೊಳ್ಳಬೇಕು ಎಂಬುದನ್ನೂ ಕಲಿತುಕೊಂಡೆ" ಎಂದು ಹೇಳಿದನು.

 

ಮೋಶೆ ಭೂಮಿಯಲ್ಲಿರುವ ಎಲ್ಲಾ ಮನುಷ್ಯರಿಗಿಂತ ಬಹಳ ಶಾಂತ ಗುಣವುಳ್ಳವನಾಗಿದ್ದನು. ಆದರೆ ಇಸ್ರಾಯೇಲ್ ಜನರು ಆತನಿಗೆ ತಮ್ಮ ಮಾತುಗಳಿಂದ ಕೋಪವನ್ನುಂಟು ಮಾಡಿದಾಗ, ಬಂಡೆಯನ್ನು ನೋಡಿ ಮಾತನಾಡುವ ಬದಲು ತಾಳ್ಮೆಯನ್ನು ಕಳೆದುಕೊಂಡು ಬಂಡೆಯನ್ನು ಹೊಡೆದದ್ದರಿಂದ ದೇವರ ಕೋಪವು ಪ್ರಕಟವಾಯಿತು. ಇದರಿಂದಾಗಿ ಕಾನಾನ್ ಗೆ ಹೋಗಿ ದರ್ಶನವನ್ನು ಪೂರ್ಣಗೊಳಿಸಬೇಕಾದವನು, ದೇವರ ಕೋಪದಿಂದಾಗಿ ಅದನ್ನು ಕಣ್ಣುಗಳಿಂದ ನೋಡಲು ಮಾತ್ರವೇ ಸಾಧ್ಯವಾಯಿತು. ದೇವರನ್ನು ಮುಖಾಮುಖಿಯಾಗಿ ನೋಡಿದ ಮೋಶೆಗೇ ಅಂತಹ ಪರಿಸ್ಥಿತಿ ಎಂದರೆ, ನೀವು ಮತ್ತು ನಾನು ಹೆಚ್ಚು ಜಾಗರೂಕರಾಗಿರಬೇಕು.

 

ಹೌದು, ನಾವೂ ಕೂಡ ಅನೇಕ ಕೆಲಸಗಳಲ್ಲಿ ಮತ್ತೊಬ್ಬರ ಮಾತುಗಳಿಂದ ಗಾಯಗೊಂಡ ಸಮಯದಲ್ಲಿ ಮನನೊಂದು ತಾಳ್ಮೆಯನ್ನು ಕಳೆದುಕೊಂಡು ಕಾರ್ಯ ಮಾಡಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತೇವೆ. ಆದ್ದರಿಂದ ಇನ್ನು ಮುಂದೆ ನಾವು ಕರ್ತನಿಗೆ ಭಯಪಟ್ಟು ಶಾಂತಿಯಿಂದ ನಡೆಯೋಣ.

- Mrs. ವಸಂತಿ ರಾಜಮೋಹನ್

 

ಪ್ರಾರ್ಥನಾ ಅಂಶ:

ಪ್ರಾರ್ಥನಾ ಗುಡಾರದ ಕಟ್ಟಡ ಕೆಲಸಗಳಲ್ಲಿರುವ ತಡೆಗಳು ನೀಗಿ ಅದನ್ನು ಶೀಘ್ರವಾಗಿ ಕಟ್ಟಿ ಮುಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al