By Village Missionary Movement
Tuesday, 24-Aug-2021ಧೈನಂದಿನ ಧ್ಯಾನ(Kannada) – 24.08.2021
ಜೇನಿನಲ್ಲಿ ಕಲಸಿದ ದೋಸೆ
"...ಮನ್ನ ಎಂದು ಹೆಸರಿಟ್ಟಿತು.... ಅದರ ರುಚಿಯು ಜೇನಿನಲ್ಲಿ ಕಲಸಿದ ದೋಸೆಯಂತೆ ಇತ್ತು.." - ವಿಮೋಚನಕಾಂಡ 16:31
ಸಿಹಿಯ ತಿನಿಸು ಎಂದು ಹೇಳಿದರೇನೆ ಅನೇಕರ ಬಾಯಲ್ಲಿ ಜೊಲ್ಲು ಸೋರುತ್ತದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಮನೆಯಲ್ಲಿ ಸಿಹಿ ತಿನಿಸುಗಳನ್ನು ಮಾಡಿದರೆ ತುಂಬಾ ಇಷ್ಟ. ಅದರಲ್ಲೂ ಪಡ್ಡು ಎಂದರೆ ತಮಿಳು ಜನರಿಗೇ ಮೀಸಲಾದ ಒಂದು ವಿಶೇಷ ಆಹಾರವಾಗಿದೆ. ಪಡ್ಡು ಮಾಡಿದರೆ, ಮನೆಗಳಲ್ಲಿ ಅದನ್ನು ಖಾಲಿ ಮಾಡಿಬಿಟ್ಟು ಇನ್ನೂ ಇದಿಯಾ? ಎಂದು ಕೇಳುವವರು ಅನೇಕರು. ಆ ಮಟ್ಟಿಗೆ ಅದರ ರುಚಿ ಇರುತ್ತದೆ. ರುಚಿ ಹಾಗಿರುವುದರಿಂದ ಎಲ್ಲಾ ಹಂತದವರೂ ಅದನ್ನು ಇಷ್ಟಾಪಟ್ಟು ತಿನ್ನುತ್ತಾರೆ. ಅದರಲ್ಲೂ ಜೇನು ಬೆರೆಸಿದ ದೋಸೆ ಎಂದರೆ ನೀವು ಊಹಿಸಬಲ್ಲಿರಾ? ಸುಮ್ಮನೆ ಹಾಗೆ ಊಹಿಸಿ ನೋಡಿ !
ಸತ್ಯವೇದದಲ್ಲಿ ಹಳೆಯ ಒಡಂಬಡಿಕೆಯ ವಿಮೋಚನ ಕಾಂಡ 16-ನೇ ಅಧ್ಯಾಯದಲ್ಲಿ ಇಸ್ರಾಯೇಲ್ ವಂಶದವರಾದ ದೇವ ಜನರಿಗೆ ಮನ್ನಾ ಎಂಬ ಆಹಾರ ಪದಾರ್ಥ ಸಿಗುವುದನ್ನು ನೋಡಬಹುದು. ಅದರ ರುಚಿ ಜೇನು ಬೆರೆಸಿದ ದೋಸೆಯ ಹಾಗೆ ಇತ್ತು ಎಂದು ಓದುತ್ತೇವೆ. ಅವರು ಬೆಳಿಗ್ಗೆ ಬೇಗನೆ ಎದ್ದು ಅವರಿಗೆ ಬೇಕಾದಷ್ಟು ಶೇಖರಿಸಿಕೊಂಡರು. ಅದು ಅವರಿಗೆ ತುಂಬಾ ರುಚಿಯನ್ನು ನೀಡಿತು. ಮತ್ತು ಆ ಕಾರ್ಯ ನಡೆದದ್ದರ ನಿಮಿತ್ತವಾಗಿ, ಇಸ್ರಾಯೇಲ್ ಜನರು ದೇವರ ಪ್ರೀತಿಯನ್ನು ಮತ್ತು ಆತನ ಕಾಳಜಿಯನ್ನು ಇನ್ನೂ ಹೆಚ್ಚಾಗಿ ಅರಿತುಕೊಂಡರು.
ಸ್ನೇಹಿತರೇ! ಈ ದಿನಗಳಲ್ಲಿ ಅನೇಕರಿಗೆ ಜೀವನವು ಕಹಿಯಾಗಿ ಕಾಣುತ್ತಿದೆ. ಕಾರಣ ಎಲ್ಲಾದಕ್ಕೂ ಅವಸರ, ಎಲ್ಲವೂ ತಕ್ಷಣ ನಡೆದು ಬಿಡಬೇಕೆಂಬ ಆತುರ. ಆದ್ದರಿಂದ ಅನೇಕ ಬಾರಿ ಖಿನ್ನತೆ. ನಮ್ಮ ಜೀವನದ ಕಹಿಯನ್ನು ಬದಲಾಯಿಸುವ ಮತ್ತು ನಮ್ಮ ಜೀವನದ ಕಹಿಯನ್ನು ಬದಲಾಯಿಸಿ ನಮ್ಮ ಜೀವನವನ್ನು ಸಿಹಿಯಾಗಿ ಮಾಡುವ ಮನ್ನ ದೇವರ ವಾಕ್ಯವೇ! ನಾವು ಅದನ್ನು ಓದಲು ಮತ್ತು ಧ್ಯಾನಿಸಲು ಸಮಯ ತೆಗೆದುಕೊಳ್ಳಬೇಕು. ಈ ಅಭ್ಯಾಸವು ನಮ್ಮ ಆಲೋಚನೆಗಳು, ಉದ್ದೇಶಗಳು, ಚಿಂತನೆ ಮತ್ತು ಕ್ರಿಯೆಗಳನ್ನು ನವೀಕರಿಸುತ್ತದೆ. ದೇವರ ವಾಕ್ಯ ಮಾತ್ರ ನಮ್ಮ ಜೀವನದಲ್ಲಿ ಒಳ್ಳೆಯ ರುಚಿಯನ್ನು ನೀಡುತ್ತದೆ. "... "...ಅವು... ಜೇನಿಗಿಂತಲೂ ಶೋಧಿಸಿದ ಜೇನು ತುಪ್ಪಕ್ಕಿಂತಲೂ ಸಿಹಿ..." (ಕೀರ್ತನೆಗಳು 19:10) ಇದನ್ನು ನಾವು ಪಾಲಿಸಬೇಕು ಮತ್ತು ಹುಡುಕಬೇಕು. ಆದ್ದರಿಂದ ಆಸೆಯಿಂದ ಸತ್ಯವೇದವನ್ನು ಕೈಯಲ್ಲಿ ತೆಗೆದುಕೊಳ್ಳಿ! ಧ್ಯಾನ ಮಾಡಿ! ಅದಕ್ಕೆ ತಕ್ಕಂತೆ ಜೀವಿಸಿರಿ! ನಮ್ಮ ಜೀವನವು ಸಿಹಿಯಾಗಿರುತ್ತದೆ!
- T. ಶಂಕರ್ ರಾಜ್
ಪ್ರಾರ್ಥನಾ ಅಂಶ:
Media ಸೇವೆಗಳಲ್ಲಿ ಕೆಲಸ ಮಾಡುತ್ತಿರುವ ಸೇವಕರನ್ನು ದೇವರು ಜ್ಞಾನದಿಂದ ತುಂಬಿಸಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482