Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.08.2021
Share:

By Village Missionary Movement

Monday, 23-Aug-2021

ಧೈನಂದಿನ ಧ್ಯಾನ(Kannada) – 23.08.2021

 

ಕಾರಣಗಳು

 

"ಸೋಮಾರಿಯು ತನ್ನ ಕೆಲಸ ದಲ್ಲಿ ಬಹಳವಾಗಿ ಹಾಳುಮಾಡುವವನಿಗೆ ಸಹೋದ ರನು ಆಗಿದ್ದಾನೆ” - ಜ್ಞಾನೋಕ್ತಿ.18:9

 

ಒಬ್ಬ ವ್ಯಕ್ತಿ ತೆಂಗಿನ ಮರ ಹತ್ತಿ ತೆಂಗಿನಕಾಯಿ ಕದಿಯುವುದನ್ನು ತೋಟಗಾರನು ನೋಡಿಬಿಟ್ಟರು. ಯಾಕೆ ತೆಂಗಿನ ಮರ ಹತ್ತಿದೆ ಎಂದು ಕೇಳಿದರು. ನಾನು ಹುಲ್ಲು ಕಿತ್ತಲು ಹತ್ತಿದೆ ಎಂದು ಹೇಳಿದನಂತೆ. ತೆಂಗಿನ ಮರದಲ್ಲಿ ಎಲ್ಲಪ್ಪಾ ಹುಲ್ಲಿದೆ ಎಂದು ಕೇಳಿದ ತೋಟಗಾರನ ಬಳಿ, ಹುಲ್ಲು ಇಲ್ಲ ಆದ್ದರಿಂದಲೇ ಇಳಿಯುತ್ತಿದ್ದೇನೆ ಎಂದು ಹೇಳಿದನಂತೆ ಕಳ್ಳ. ಏನಾದರೂ ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸುವವರು ಅನೇಕರು. ತರಗತಿಗೆ ಆಲಸ್ಯವಾಗಿ ಬಂದ ವಿದ್ಯಾರ್ಥಿಯನ್ನು ನೋಡಿ ಶಿಕ್ಷಕರು, "ಯಾಕೆ ಲೇಟ್" ಎಂದು ಕೇಳಿದರು. "ಸ್ವಲ್ಪ ತಡವಾಯಿತು." ಎಂದನಂತೆ. "ಯಾಕೋ ತಡವಾಯಿತು" ಎಂದು ಕೇಳಿದ ಶಿಕ್ಷಕರಿಗೆ "ಸ್ವಲ್ಪ ಲೇಟ್ ಆಯ್ತು ಸಾರ್" ಎಂದನಂತೆ. ಇದನ್ನು ಓದುವುದಕ್ಕೆ ತಮಾಷೆ ಯಾಗಿದ್ದರೂ, ನಾವು ಕೂಡ ನಮ್ಮ ಕೆಲಸಗಳ ಬಗ್ಗೆ ಅನೇಕ ಸಂದರ್ಭಗಳಲ್ಲಿ ಕಾರಣಗಳನ್ನು ಹೇಳುತ್ತಲೇ ಇರುತ್ತೇವೆ. ನಮ್ಮನ್ನು ನಂಬಿ ಒಂದು ವೇಳೆ, ಒಂದು ಜವಾಬ್ದಾರಿ ನೀಡಿದಾಗ ನಾವು ಅದನ್ನು ಸರಿಯಾಗಿ ಮಾಡಿ ಮುಗಿಸದಿದ್ದಾಗ ಅದಕ್ಕೆ ಕಾರಣಗಳನ್ನು ಹೇಳಿ, ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ನಾವು ಯಾಕೆ ಕಾರಣಗಳನ್ನು ಹೇಳುತ್ತೇವೆ?

 

1) ಆ ಕೆಲಸದಲ್ಲಿ ನಿಜವಾಗಿಯೂ ನಮಗೆ ಆಸಕ್ತಿಯಿಲ್ಲ.

2) ಮಾಡಬೇಕಾದ ಕೆಲಸವನ್ನು ಮಾಡದೆ ಇತರ ಕೆಲಸಗಳಿಗೆ ಹೆಚ್ಚು ಸಮಯ ಕಳೆಯುವುದು.

3) ಆ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿಲ್ಲ.

4) ಕೇಳಿದರೆ ಏನೋ ಒಂದು ಹೇಳಿಬಿಡೋಣ ಎಂಬ ಉದ್ದೇಶ.

 

ಇಂತಹ ಕಾರಣಗಳಿಂದ ಕೆಲಸವನ್ನು ಮುಗಿಸದಿದ್ದಾಗ, ಕೆಲಸ ಕೊಟ್ಟವರು ನಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ನಾವು ಕಳೆದುಕೊಳ್ಳುತ್ತೇವೆ. ಪುನಃ ಆ ನಂಬಿಕೆಯನ್ನು ಸಂಪಾದಿಸುವುದು ಅಷ್ಟು ಸುಲಭವಲ್ಲ. ಸತ್ಯವೇದದಲ್ಲಿ “ಹಾಗೆಯೇ ನೋಹನು ಮಾಡಿದನು; ದೇವರು ಅವನಿಗೆ ಅಪ್ಪಣೆಕೊಟ್ಟ ಪ್ರಕಾರವೇ ಅವನು ಮಾಡಿದನು” ಎಂದು (ಆದಿ. 6:22) ರಲ್ಲಿ ಓದುತ್ತೇವೆ. ನೋಹನ ಸಂಪೂರ್ಣವಾದ ಕೆಲಸದಿಂದಾಗಿ ಕುಟುಂಬದವರು ಮತ್ತು ಅನೇಕ ಜೀವಗಳು ಕಾಪಾಡಲ್ಪಟ್ಟವು. 

 

ನಮ್ಮ ಜೀವನದಲ್ಲಿ ನಾವು ಯಶಸ್ವಿಯಾಗಿರಬೇಕು ಮತ್ತು ಅದರ ಮೂಲಕ ಅನೇಕರು ಆಶೀರ್ವದಿಸಲ್ಪಡಬೇಕೆಂದು ದೇವರು ಬಯಸುತ್ತಿದ್ದಾರೆ. ಒಳ್ಳೆಯ ಕಾರ್ಯಗಳು ಮತ್ತು ಆಶೀರ್ವಾದಗಳು ತನ್ನಷ್ಟಕ್ಕೆ ತಾನೇ ಬಂದು ಬಿಡುವುದಿಲ್ಲ. ಕಾರಣಗಳನ್ನು ಹೇಳದೆ ಕಾರ್ಯಗಳನ್ನು ನೆರವೇರಿಸುವಾಗ ಮಾತ್ರವೇ ನಾವು ಉನ್ನತವಾಗಿ ಜೀವಿಸುತ್ತೇವೆ ಮತ್ತು ಅನೇಕರಿಗೆ ಆಶೀರ್ವಾದಕರವಾಗಿ ಜೀವಿಸುತ್ತೇವೆ. ಹಲ್ಲೇಲೂಯ.

- Mr. ಅಲಗರಸಾಮಿ

 

ಪ್ರಾರ್ಥನಾ ಅಂಶ:

ಮೋಕ್ಷ ಪ್ರಯಾಣ ದೈನಂದಿನ ಧ್ಯಾನ ಪತ್ರಿಕೆಯನ್ನು ಮುದ್ರಿಸಲು ಬೇಕಾಗಿರುವ ಎಲ್ಲಾ ಅವಶ್ಯಕತೆಗಳನ್ನು ಕರ್ತನು ಪೂರೈಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al