Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.08.2021
Share:

By Village Missionary Movement

Friday, 20-Aug-2021

ಧೈನಂದಿನ ಧ್ಯಾನ(Kannada) – 20.08.2021

 

ಕ್ಷಮಾಪಣೆ

 

"ನೀವು ಜನರ ತಪ್ಪುಗಳನ್ನು ಕ್ಷವಿುಸಿದರೆಯ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷವಿುಸುವನು." - ಮತ್ತಾಯ 6:14

 

ಸ್ಕಾಟ್ಲೆಂಡ್ ದೇಶಕ್ಕೆ ಸೇರಿದ ಒಬ್ಬ ಚಿಕ್ಕ ಹುಡುಗ ರಾಬರ್ಟ್ ತನ್ನೊಂದಿಗೆ ಓದುತ್ತಿದ್ದ ಜೇಕಬ್ ಎಂಬ ಹುಡುಗನೊಂದಿಗೆ ಜಗಳವಾಡಿ ಕೆಳಗೆ ತಳ್ಳಿಬಿಟ್ಟದರಿಂದ ಜೇಕಬ್ ಸತ್ತು ಹೋದನು. ಈ ಅಪರಾಧಕ್ಕಾಗಿ ರಾಬರ್ಟ್ ಎಂಬ ಚಿಕ್ಕ ಹುಡುಗ ಏಳು ವರ್ಷ ಮಕ್ಕಳ ಸುಧಾರಣೆ ಶಾಲೆಯಲ್ಲಿ ಓದಲು ಸೆರೆಮನೆಗೆ ಕಳುಹಿಸಲ್ಪಟ್ಟನು. ಸೆರೆಮನೆಗೆ ಹೋಗುವ ಮುಂಚೆ ಜೇಕಬ್ ನ ತಾಯಿ ರಾಬರ್ಟ್ ನನ್ನು ಭೇಟಿಯಾಗಿ "ನನ್ನ ಮಗನ ಸಾವಿಗೆ ನೀನು ಕಾರಣವಾದೆ, ಆದರೆ ನಾನು ನಿನ್ನನ್ನು ಕ್ಷಮಿಸುತ್ತೇನೆ. ನಾನು ನಿನ್ನನ್ನು ನನ್ನ ಮಗನಂತೆ ನೋಡಿಕೊಳ್ಳುತ್ತೇನೆ. ನಿನ್ನ ಒಡ ಹುಟ್ಟಿದವರು ಕೂಡ ನನಗೆ ಮಕ್ಕಳಂತೆಯೇ. ನನಗೆ ಒಬ್ಬನೇ ಮಗನಾಗಿದ್ದ ಜೇಕಬ್ ನನ್ನು ಈ ಲೋಕದಲ್ಲಿ ಮತ್ತೆ ನೋಡಲು ಸಾಧ್ಯವಿಲ್ಲ. ಆದ್ದರಿಂದ ನಿನ್ನನ್ನು, ನಿನ್ನ ಒಡಹುಟ್ಟಿದವರನ್ನು ನನ್ನ ಮಕ್ಕಳಾಗಿ ಅಂಗೀಕರಿಸುತ್ತೇನೆ" ಎಂದು ಕಣ್ಣೀರಿನಿಂದ ಹೇಳಿದರು. ರಾಬರ್ಟ್ ಮತ್ತು ಅವನ ಕುಟುಂಬದವರು ಜೇಕಬ್ ನ ತಾಯಿಯ ಕುತ್ತಿಗೆಯನ್ನು ಅಪ್ಪಿಕೊಂಡು ಅತ್ತರು.

 

ಸತ್ಯವೇದದಲ್ಲಿ ತನ್ನ ಕಿರಿಯ ಮಗನಾದ ಯೋಸೇಫನನ್ನು ತನ್ನ ಸಹೋದರರು ಹೊಡೆದು, ಹಳ್ಳದೊಳಗೆ ಹಾಕಿ ಬಿಟ್ಟು, ನಂತರ ಐಗುಪ್ತ ದೇಶಕ್ಕೆ ದಾಸನಾಗಿ ಮಾರಿಬಿಟ್ಟರು. ಆದರೆ ಮುಂದಿನ ದಿನಗಳಲ್ಲಿ ಯೋಸೇಫನು ಹೆಚ್ಚಿಸಲ್ಪಟ್ಟಾಗ, ತನ್ನ ಸಹೋದರರ ಮೇಲೆ ಸೇಡು ತೀರಿಸಿಕೊಳ್ಳದೇ, "ನೀವು ಸ್ವಲ್ಪವೂ ಭಯಪಡಬೇಡಿರಿ; ನಾನು ನಿಮ್ಮನ್ನೂ ನಿಮಗೆ ಸೇರಿದವರೆಲ್ಲರನ್ನೂ ಪೋಷಿಸುವೆನು ಎಂದು ಹೇಳಿ ಅವರನ್ನು ಸಂತೈಸಿ ಅವರ ಸಂಗಡ ಪ್ರೀತಿಯಿಂದ ಮಾತಾಡಿದನು" ಎಂದು ಆದಿಕಾಂಡ 50:21ರಲ್ಲಿ ನಾವು ಓದುತ್ತೇವೆ.

 

ಪ್ರಿಯ ಸ್ನೇಹಿತರೇ! ನಮ್ಮ ಜೀವನದಲ್ಲಿಯೂ ಮತ್ತೊಬ್ಬರು ಮಾಡಿದ ತಪ್ಪಿಗಾಗಿ ನಾವು ಬಾಧಿಸಲ್ಪಟ್ಟು, ಕಷ್ಟಗಳನ್ನು ಅನುಭವಿಸುತ್ತಿರಬಹುದು. ನಾವು ಅವರನ್ನು ದೇವರ ಪ್ರೀತಿಯಿಂದ ಕ್ಷಮಿಸಿದರೇನೆ ಅವರ ಮೇಲಿರುವ ಕಹಿ, ಗುಣುಗುಟ್ಟುವಿಕೆ, ಹುರುಪು ಮಾರ್ಪಡುತ್ತದೆ. ಇದು ಅಷ್ಟು ಸುಲಭವಲ್ಲ. ಆದರೆ ನಾವು ಅವರನ್ನು ಕ್ಷಮಿಸದಿರುವ ಪರಿಸ್ಥಿತಿಯಲ್ಲಿ ದೇವರು ಕೂಡ ನಮ್ಮನ್ನು ಕ್ಷಮಿಸುವುದಿಲ್ಲ. ಯೋಸೇಫನಂತೆ ಕ್ಷಮಿಸೋಣ. ದೇವರು ನಮ್ಮ ಮೂಲಕ ಅನೇಕರನ್ನು ಪೋಷಿಸುತ್ತಾರೆ, ನಮ್ಮನ್ನು ತನ್ನ ಸೇವೆಯಲ್ಲಿ ಉಪಯೋಗಿಸುತ್ತಾರೆ. ಹಲ್ಲೇಲೂಯ!

- T. ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ನಂಬಿಕೆ T.V. ಯಲ್ಲಿ ಪ್ರಸಾರವಾಗುತ್ತಿರುವ ದೇವರ ವಾಕ್ಯಗಳನ್ನು ನೋಡುತ್ತಿರುವ ಅನ್ಯಜನರು ಯೇಸುವಿನ ಪ್ರೀತಿಯನ್ನು ಅರಿತುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş