Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.08.2021
Share:

By Village Missionary Movement

Wednesday, 18-Aug-2021

ಧೈನಂದಿನ ಧ್ಯಾನ(Kannada) – 18.08.2021

 

ನಿಮ್ಮ ಚಿತ್ತ

 

"ನಿನ್ನ ಚಿತ್ತದಂತೆಯೇ ಆಗಲಿ ಎಂದು ಪ್ರಾರ್ಥಿಸಿದನು." - ಲೂಕ 22:42

 

ಒಬ್ಬ ರೈತನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು.ಆತನು ಒಬ್ಬಳನ್ನು ರೈತನಿಗೂ, ಇನ್ನೊಬ್ಬಳನ್ನು ಕುಂಬಾರನಿಗೂ ಮದುವೆ ಮಾಡಿಕೊಟ್ಟರು. ತನ್ನ ಇಬ್ಬರು ಮಕ್ಕಳನ್ನು ಆಗಾಗ ಭೇಟಿ ಮಾಡುವುದು ಅವರಿಗೆ ಅಭ್ಯಾಸ. ಅದೇ ರೀತಿಯಾಗಿ ಒಮ್ಮೆ ಆತನು ಹಿರೀ ಮಗಳ ಮನೆಗೆ ಹೋದಾಗ ಅವಳು ತನ್ನ ತಂದೆಯ ಬಳಿ, “ಅಪ್ಪಾ ದೇವರು ಒಳ್ಳೆಯ ಮಳೆ ನೀಡುವಂತೆ ಬೇಡಿಕೊಳ್ಳಿರಿ. ಮಳೆಯ ಕೊರತೆಯಿಂದಾಗಿ ಬೆಳೆಗಳು ಒಣಗುತ್ತಿವೆ" ಎಂದು ಹೇಳಿದಳು. ನಂತರ ಆತನು ತನ್ನ ಕಿರಿಯ ಮಗಳನ್ನು ನೋಡಲು ಹೋದಾಗ, ಅವಳು ತನ್ನ ತಂದೆಯ ಬಳಿ, "ಅಪ್ಪಾ, ಚೆನ್ನಾಗಿ ಬಿಸಿಲು ಬರುವಂತೆ ಪ್ರಾರ್ಥನೆ ಮಾಡಿಕೊಳ್ಳಿರಿ, ಆಗ ಮಾತ್ರವೇ ನನ್ನ ಗಂಡ ಮಾಡಿದ ಮಣ್ಣಿನ ಮಡಿಕೆಗಳು ಚೆನ್ನಾಗಿ ಒಣಗಲು ಸಾಧ್ಯ" ಎಂದು ಕೇಳಿಕೊಂಡಳು. ಈಗ ತಂದೆಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಇಬ್ಬರಿಗೂ ಪ್ರಾರ್ಥಿಸಬೇಕು! ಆದ್ದರಿಂದ ಕೊನೆಗೆ ಆತನು ಧೈರ್ಯದಿಂದ ದೇವರೇ ನಿಮ್ಮ ಚಿತ್ತವೇನಿದೆಯೋ ಅದೇ ಆಗಲಿ ಎಂದು ಪ್ರಾರ್ಥಿಸಿದರು.

 

ಯೇಸುಕ್ರಿಸ್ತನು ಕೂಡ ತನ್ನ ಸೇವೆಯನ್ನು 3½ ವರ್ಷಗಳ ಕಾಲ ಯಶಸ್ವಿಯಾಗಿ ನೆರವೇರಿಸಿದರು. ಶಿಲುಬೆಯಲ್ಲಿ ಸಾಯುವ ಮೊದಲು ಪ್ರಾರ್ಥನೆ ಮಾಡಲು ಎಣ್ಣೇಮರಗಳ ಗುಡ್ಡಕ್ಕೆ ಹೋದರು. ತಂದೆಯೇ, ನಿನ್ನ ಚಿತ್ತವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು; ಹೇಗೂ ನನ್ನ ಚಿತ್ತವಲ್ಲ, ಆದರೆ ನಿನ್ನ ಚಿತ್ತದಂತೆಯೇ ಆಗಲಿ ಎಂದು ಪ್ರಾರ್ಥಿಸಿದರು.

 

ಪ್ರಿಯರೇ! ಆಕಾಶ ಮತ್ತು ಭೂಮಿಯನ್ನು ಉಂಟು ಮಾಡಿದವರು, ಎಲ್ಲಾ ಅಧಿಕಾರವನ್ನು ಹೊಂದಿರುವವರು, ಪ್ರಕೃತಿಗೂ ಮೀರಿದ ಅದ್ಭುತಗಳನ್ನು, ಅತಿಶಯಗಳನ್ನು ಮಾಡಲು ಶಕ್ತನು ಯೇಸುಕ್ರಿಸ್ತನು ಮಾತ್ರವೇ. ಆತನೇ ತಂದೆಯ ಬಳಿ ನಿಮ್ಮ ಚಿತ್ತದಂತೆಯೇ ಆಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಬಹುಶಃ ನಿಮಗೆ ದೇವರ ಚಿತ್ತ ಏನೆಂದು ತಿಳಿದಿಲ್ಲವೇ? ದೇವರ ಚಿತ್ತವನ್ನು ತಿಳಿಯಲು ಸಾಧ್ಯವಾಗುತ್ತಿಲ್ಲವೇ? ಗೊಂದಲ ಬೇಡ. ನಮ್ಮ ದೇವರು ಎಲ್ಲವನ್ನೂ ತಿಳಿದವರಲ್ಲವೇ? ನಮ್ಮ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಬಲ್ಲ ದೇವರಿಗೆ ನಮಗೆ ಏನು ಬೇಕು ಎಂದು ಕೂಡ ತಿಳಿದಿದೆ. ಆದುದರಿಂದ ನಮ್ಮ ಜೀವನದ ಎಲ್ಲಾ ಸಮಯಗಳಲ್ಲಿ, ಎಲ್ಲಾ ವಿಷಯಗಳಲ್ಲಿ, ಎಲ್ಲಾ ಸ್ಥಳಗಳಲ್ಲಿ, ದೇವರೇ ನಿಮ್ಮ ಚಿತ್ತದಂತೆ ನಡೆಸಿ ಎಂದು ಪ್ರಾರ್ಥಿಸಲು ಕಲಿಯೋಣ. ನಾವು ಹಾಗೆ ಪ್ರಾರ್ಥಿಸಲು ಆರಂಭಿಸಿದರೆ, ಆತನು ತನ್ನ ಚಿತ್ತವಿರುವ ಕಾರ್ಯಗಳನ್ನು ನಮ್ಮ ಜೀವನದಲ್ಲಿ ಮಾಡಿ ಸುಂದರವಾಗಿ ನಡೆಸುತ್ತಾರೆ.

- Mrs. ಶಕ್ತಿ ಶಂಕರರಾಜ್

 

ಪ್ರಾರ್ಥನಾ ಅಂಶ:

7000 ಮಿಷನರಿಗಳಿಗೆ ಪ್ರತಿ ತಿಂಗಳು ರೂ. 5000 / - ಕೊಟ್ಟು ಪ್ರೋತ್ಸಾಹಿಸುವ ಕುಟುಂಬಗಳನ್ನು ಕರ್ತನು ಎಬ್ಬಿಸಿ ಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino betcio bahiscasino atlasbet matbet matbet giriş bahiscasino celtabet queenbet casibom jojobet