By Village Missionary Movement
Tuesday, 17-Aug-2021ಧೈನಂದಿನ ಧ್ಯಾನ(Kannada) – 17.08.2021
ವಿಮೋಚಿಸುವ ಕೈ
"ನನ್ನನ್ನು ಕೇಳಿಕೋ, ನಾನು ನಿನಗೆ ಸದುತ್ತರವನ್ನು ದಯಪಾಲಿಸಿ ನಿನಗೆ ತಿಳಿಯದ ಮಹತ್ತಾದ ಗೂಢಾರ್ಥಗಳನ್ನು ಗೋಚರಪಡಿಸುವೆನು” - ಯೆರೆಮಿಯ 33:3
ಕ್ರಿಸ್ತನನ್ನು ಸ್ವೀಕರಿಸಿದ್ದಕ್ಕಾಗಿ ಕಮ್ಯುನಿಸ್ಟ್ ಜೈಲಿನಲ್ಲಿ ಬಂಧಿಸಲಾಗಿದ್ದ ರೋಮನ್ ಯೆಹೂದಿ ರಿಚರ್ಡ್ ಉಂಬ್ರಾಂಡ್, 12 ವರ್ಷಗಳ ಕಾಲ ಕ್ರೂರವಾಗಿ ಕಿರುಕುಳಕ್ಕೊಳಗಾಗಿ, ಅವರು ಕರ್ತನ ಮೇಲಿಟ್ಟಿರುವ ನಂಬಿಕೆಯನ್ನು ತ್ಯಜಿಸುವಂತೆ ಬಹು ಒತ್ತಾಯಿಸಿದರು. ಆದರೆ ಅವರು ಬಿಡುಗಡೆಯಾಗುವವರೆಗೂ ಕರ್ತನನ್ನು ನಿರಾಕರಿಸಲೇ ಇಲ್ಲ. ಅವರು ಬರೆದ The Orders Of God ಎಂಬ ಪುಸ್ತಕದಲ್ಲಿ ಆ ಜೈಲಿನ ಭಯಾನಕ ಪರಿಸ್ಥಿತಿಗಳಲ್ಲಿಯೂ ಅವರು ಹೇಗೆ ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಸಾಧ್ಯವಾಯಿತು ಎಂಬುದರ ಕುರಿತು ಒಂದು ಸಣ್ಣ ಕಥೆಯ ಮೂಲಕ ಬರೆದಿದ್ದಾರೆ.
ಒಂದು ಹಡಗಿನ ನಾವಿಕನೊಂದಿಗೆ ಅವರ ಹೆಂಡತಿಯೂ ಪ್ರಯಾಣಿಸುತ್ತಿದ್ದರು. ಆಗ ಆ ಸಮುದ್ರದಲ್ಲಿ ಸಂಭವಿಸಿದ ಬಿರುಗಾಳಿಯಿಂದಾಗಿ ಹಡಗು ಆಕಡೆ ಈಕಡೆಗೆ ಅಲೆಗಳಿಂದ ಎತ್ತಿ ಬಿಸಾಡುತ್ತಿತ್ತು. ಆಗ ಆ ನಾವಿಕನ ಹೆಂಡತಿ ಅವರ ಬಳಿ, "ಈ ರೀತಿಯಾಗಿ ಹಡಗು ಅಲೆಗಳಿಂದ ಎಡವಿ ಬೀಳುತ್ತಿರಲು ನಿಮ್ಮಿಂದ ಮಾತ್ರ ಹೇಗೆ ಶಾಂತವಾಗಿರಲು ಸಾಧ್ಯವಾಗುತ್ತಿದೆ?" ಎಂದು ಕೇಳಿದಳು. ಆಗ ನಾವಿಕನು ಹತ್ತಿರದ ಚಾಕುವನ್ನು ತೆಗೆದುಕೊಂಡು ತನ್ನ ಹೆಂಡತಿಯ ಕುತ್ತಿಗೆಗೆ ಹಾಕಿದರು, ಹೆಂಡತಿ ಆತಂಕದಿಂದ ನೋಡಿದಳು. ಆಗ ಅವರು ಕೇಳಿದರು, "ನೀನು ಈಗ ಏಕೆ ಶಾಂತವಾಗಿ, ಭಯಪಡದೆ ಇದ್ದೀಯ" ಎಂದು ಕೇಳಿದರು. ಅದಕ್ಕೆ ಅವಳು "ನಾನು ಯಾಕೆ ಭಯಪಡಬೇಕು? ಈ ಚಾಕು ನನ್ನ ಪ್ರೀತಿಯ ಗಂಡನ ಕೈಯಲ್ಲಿ ತಾನೇ ಇದೆ? ನೀವು ನನ್ನನ್ನು ಪ್ರೀತಿಸುತ್ತಿರುವುದರಿಂದ ನೀವು ನನ್ನನ್ನು ಇರಿಯುವುದಿಲ್ಲ ಎಂದು ನನಗೆ ಖಚಿತವಾಗಿ ಗೊತ್ತು" ಎಂದು ಹೇಳಿದಳು.
ಆಗ ನಾವಿಕನು, "ನಾನು ಶಾಂತನಾಗಿರುವುದಕ್ಕೂ ಇದೇ ಕಾರಣ, ಈ ಅಲೆಗಳು ಮತ್ತು ಗೊಂದಲಗಳು ನನ್ನ ಪ್ರೀತಿಯ ತಂದೆಯ ಕೈಗಳಲ್ಲಿ ಇರುವುದರಿಂದ ಅವರಿಗೆ ಈ ಅಲೆಗಳು ಹೆದರುತ್ತವೆ ಆದ್ದರಿಂದಲೇ ನಾನು ಹೆದರದೇ ಇದ್ದೇನೆ" ಎಂದು ಹೇಳಿದರು.
ಪ್ರಿಯರೇ, ನಿಮ್ಮ ಜೀವನದಲ್ಲಿ ಬಿರುಗಾಳಿ ಬೀಸುತ್ತಿದೆಯೇ? ಏನು ಮಾಡಬೇಕೆಂದು ತಿಳಿಯದೆ ಚಿಂತಿತರಾಗಿದ್ದೀರಾ? ಎಲ್ಲಿಗೆ ಹೋಗಬೇಕೆಂದು ತಿಳಿಯದೆ ಒದ್ದಾಡುತ್ತಿದ್ದೀರಾ? ನಮಗೆ ಒಂದು ದೇವರಿದ್ದಾರೆ. ಅವರು ಗಾಳಿ ಮತ್ತು ಸಮುದ್ರವನ್ನು ಗದರಿಸಿ ಶಾಂತವಾಗಿರು ಎಂದು ಆಜ್ಞಾಪಿಸಿ ಬಿರುಗಾಳಿಯನ್ನು ಶಾಂತಗೊಳಿಸಿದರು. ಅವರು ನಿಮ್ಮ ಜೀವನದಲ್ಲಿ ಸಂಭವಿಸುವ ಬಿರುಗಾಳಿಗಳು, ಅಲೆಗಳು ಮತ್ತು ಗಾಳಿಯನ್ನು ಶಾಂತಗೊಳಿಸಲು ಸಮರ್ಥನಾಗಿದ್ದಾನೆ. ಚಿಂತಿಸಬೇಡಿ. ಸುಸ್ತಾಗಬೇಡಿ. ನನ್ನನ್ನು ಕೇಳಿಕೋ, ಎಂದು ಹೇಳಿದ ದೇವರು ಎಂದಿಗೂ ಬದಲಾಗದವರಾಗಿಯೇ ಇದ್ದು ನಮ್ಮನ್ನು ವಿಮೋಚಿಸಲು ಶಕ್ತರಾಗಿದ್ದಾರೆ.
- Mrs. ಜೀವಾ ವಿಜಯ್
ಪ್ರಾರ್ಥನಾ ಅಂಶ:
ಸೈತಾನನಿಂದ, ರೋಗದಿಂದ ಕಟ್ಟಲ್ಪಟ್ಟ ಜನರಿಗೆ Healing service ನಡೆಸಲ್ಪಡಲು, ಇದರ ಮೂಲಕ ಅನೇಕರು ಅದ್ಭುತವಾದ ವಿಮೋಚನೆಯನ್ನು ಹೊಂದಿಕೊಳ್ಳಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482