Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.08.2021
Share:

By Village Missionary Movement

Monday, 16-Aug-2021

ಧೈನಂದಿನ ಧ್ಯಾನ(Kannada) – 16.08.2021

 

ಹದ್ದಿಗೆ ಸಮವಾಗಿ

 

"ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನುಚಾಚಿಕೊಂಡು [ಏರುವರು];..." - ಯೆಶಾಯ 40:31

 

ಹಕ್ಕಿಗಳಲ್ಲೇ ಹದ್ದುಗಳ ಕಥೆ ತುಂಬಾ ಆಸಕ್ತಿದಾಯಕವಾಗಿದೆ. ಅವುಗಳು ಅತ್ಯಂತ ದೀರ್ಘಕಾಲ ಉಳಿದಿರುವ ಪಕ್ಷಿ ಪ್ರಭೇದಗಳಾಗಿವೆ. ಇವುಗಳು 70 ವರ್ಷಗಳವರೆಗೆ ಬದುಕಬಲ್ಲವು. ಆದರೆ ಅವು 70 ನೇ ವಯಸ್ಸನ್ನು ತಲುಪುವ ಹೊತ್ತಿಗೆ, ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿರುತ್ತದೆ. ಹದ್ದು ತನ್ನ 40 ನೇ ವಯಸ್ಸನ್ನು ತಲುಪುವಾಗ, ಅದರ ಉಗುರುಗಳಿಂದ ತನ್ನ ಬೇಟೆಯನ್ನು ಸಾಗಿಸಲು ಸಾಧ್ಯವಿಲ್ಲ. ಅವುಗಳ ಉದ್ದವಾದ ಚೂಪಾದ ಘಟಕಗಳು ಕೂಡ ಬಾಗುತ್ತವೆ. ವಯಸ್ಸಾದಂತೆ ಅದರ ಭಾರವಾದ ಗರಿಗಳು ಅದರ ಹೃದಯಕ್ಕೆ ಅಂಟಿಕೊಂಡು ಹಾರಲು ಸಾಧ್ಯವಿಲ್ಲದಂತೆ ಮಾಡುತ್ತವೆ. ಈ ಸಂದರ್ಭದಲ್ಲಿ, ಅವುಗಳಿಗೆ ಕೇವಲ ಎರಡೇ ಆಯ್ಕೆಗಳಿವೆ. ಒಂದೋ ಹಾಗೆ ಸಾಯುವುದು ಅಥವಾ 150 ದಿನಗಳ ಕಾಲ ಮುಂದುವರೆಯುವ ಅತ್ಯಂತ ಕಷ್ಟಕರವಾದ ಜೀವನದ ಘಟನೆಗಳನ್ನು ದಾಟಿ ಹೋಗುವುದು. ಇದಕ್ಕಾಗಿ ಅವುಗಳು ಪರ್ವತದ ತುದಿಯಲ್ಲಿ ತಾವು ನಿರ್ಮಿಸಿದ ಗೂಡುಗಳಲ್ಲಿ ಹೋಗಿ ಉಳಿದುಕೊಳ್ಳುತ್ತವೆ. ಇದು ತನ್ನ ಹಳೆಯ ಅಂದವನ್ನು ಬಂಡೆಗಳಿಗೆ ಕುಕ್ಕಿ ಕುಕ್ಕಿ ಗರಿಗಳನ್ನು ಕಿತ್ತು ಹಾಕಿಕೊಂಡು ಅವು ತಮಗೆ ಹೊಸ ಗರಿಗಳು ಬರಲು ಕಾದಿರುತ್ತವೆ.

 

ಸತ್ಯವೇದದಲ್ಲಿ, ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನುಚಾಚಿಕೊಂಡು [ಏರುವರು]; ಎಂದು ಬರೆಯಲ್ಪಟ್ಟಿದೆ. ಈ ಹದ್ದುಗಳಂತೆ ನಾವು ಕೂಡ ರೆಕ್ಕೆಗಳನ್ನು ಚಾಚಿಕೊಳ್ಳಬೇಕಾದರೆ ನಿರೀಕ್ಷಿಸಿಕೊಂಡಿರಬೇಕು. ಹದ್ದುಗಳಂತೆ ನಾವೂ ಕೂಡ ಬದುಕಲು ಅಭ್ಯಾಸ ಮಾಡಿಕೊಳ್ಳಬೇಕು.

 

ಇದನ್ನು ಓದುತ್ತಿರುವ ಪ್ರೀತಿಯ ದೇವರ ಮಕ್ಕಳೇ! ಕೆಲವೊಮ್ಮೆ ನಮಗೆ ಬದಲಾವಣೆಗಳು ಬೇಕಾಗುತ್ತವೆ. ಹಲವು ಬಾರಿ ನಾವು ಬದುಕಲು ನಮ್ಮಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಈ ದಿನಗಳಲ್ಲಿ ನಾವು ನೋಡುವುದಾದರೆ, ನಾವು ಜೀವಂತವಾಗಿರಲು ಅತ್ಯಂತ ಬಲವಾದ ಬದಲಾವಣೆಯೆಂದರೆ Mask! ಆದ್ದರಿಂದ ನಾವು ನಮ್ಮ ಅನೇಕ ಹಳೆಯ ಅಭ್ಯಾಸಗಳು, ಹಳೆಯ ಮೂಢ ನಂಬಿಕೆಗಳಂತವುಗಳನ್ನು ಬಿಟ್ಟು ತೊಲಗಬೇಕಾಗಿದೆ. ಮತ್ತು ಮನೆಯಲ್ಲಿ ತಿಂಗಳುಗಟ್ಟಲೆ ಕುಳಿತುಕೊಂಡಿರುವಂತಹ ಈ ದಿನಗಳಲ್ಲಿ ಹದ್ದುಗಳಂತೆ ನಮ್ಮನ್ನು ನವೀಕರಿಸುವಂತಹ ದಿನಗಳಾಗಿ, ಕರ್ತನಿಗಾಗಿ ನಿರೀಕ್ಷಿಸಿಕೊಂಡಿರುವ ದಿನಗಳಾಗಿ ಬದಲಾಗಲಿ. ಆಗ ಹದ್ದಿನಷ್ಟು ಎತ್ತರಕ್ಕೆ ಹಾರಲು, ಲೋಕವನ್ನು ಜಯಿಸಲು ಸಾಧ್ಯ.

- T. ಶಂಕರರಾಜ್

 

ಪ್ರಾರ್ಥನಾ ಅಂಶ:

ಒಂದು ಗ್ರಾಮವನ್ನು ರೂ. 2000 / - ಕೊಟ್ಟು ದತ್ತು ತೆಗೆದುಕೊಳ್ಳುವ ಕುಟುಂಬಗಳನ್ನು ಕರ್ತನು ಎಬ್ಬಿಸಿ ಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino betcio bahiscasino atlasbet matbet matbet giriş bahiscasino celtabet queenbet casibom jojobet