Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.08.2021 (Kids Special)
Share:

By Village Missionary Movement

Sunday, 15-Aug-2021

ಧೈನಂದಿನ ಧ್ಯಾನ(Kannada) – 15.08.2021 (Kids Special)

 

ಬಿಡುಗಡೆ ಬಿಡುಗಡೆ!

 

"...ಮಗನು ನಿಮ್ಮನ್ನು ಬಿಡುಗಡೆಮಾಡಿದರೆ ನಿಜವಾಗಿ ನಿಮಗೆ ಬಿಡುಗಡೆಯಾಗುವದು." - ಯೋಹಾನ 8:36

 

ಹಲೋ ಪುಟಾಣಿಗಳೇ, ಎಲ್ಲರೂ ಹೇಗಿದ್ದೀರ? ಚೆನ್ನಾಗಿದ್ದೀರಾ? ಇಂದು ಯಾವ ದಿನ ? Yes, ಇಂದು ನಮ್ಮ ಭಾರತೀಯ ರಾಷ್ಟ್ರದ ಸ್ವಾತಂತ್ರ್ಯ ದಿನ. ಪ್ರತಿ ವರ್ಷ ಈ ದಿನ ನಾವು ಶಾಲೆಗೆ ಹೋಗಿ Flag hosting, March Past ಮಾಡುತ್ತಿದ್ದೆವು, ಸ್ವೀಟ್ ಮತ್ತು ಚಾಕೊಲೇಟ್‌ಗಳನ್ನು ಹಂಚಿಕೊಳ್ಳುತ್ತಿದ್ದೆವು. ಆದರೆ, ಕಳೆದ 2 ವರ್ಷಗಳಿಂದ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ, ಹೌದು ತಾನೇ.

 

75 ವರ್ಷಗಳ ಹಿಂದೆ ನಮ್ಮ Freedom fighters ಹೋರಾಟ ನಡೆಸಿ ಬ್ರಿಟಿಷ್ ಆಡಳಿತದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟರು. ಈ ದಿನಗಳಲ್ಲಿ ಬಹಳ ಜನರು ವಿಡಿಯೋ ಗೇಮ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಿಗೆ ವ್ಯಸನಿಗಳಾಗಿಬಿಟ್ಟಿದ್ದೀರ? ಚಿಂತಿಸಬೇಡಿರಿ, ಯೇಸಪ್ಪ ಖಂಡಿತವಾಗಿಯೂ ಅವೆಲ್ಲವುಗಳಿಂದ ನಿಮ್ಮನ್ನು ಬಿಡಿಸುತ್ತಾರೆ. ಬೈಬಲ್ ಈ ರೀತಿಯಾಗಿ ಹೇಳುತ್ತಿದೆ, ಮಗನು ನಿಮ್ಮನ್ನು ಬಿಡುಗಡೆಮಾಡಿದರೆ ನಿಜವಾಗಿ ನಿಮಗೆ ಬಿಡುಗಡೆಯಾಗುವದು ಎಂದು. ಇದು ಮಾತ್ರವಲ್ಲ, ಈ ದಿನಗಳಲ್ಲಿ ನೀವು ತುಂಬಾ ಕೋಪಮಾಡಿಕೊಳ್ಳುತ್ತಿದ್ದೀರ? ಯಾರನ್ನಾದರೂ ನೋಡಿದರೆ ಅಸೂಯೆ ಪಡುತ್ತಿದ್ದೀರ ಖಂಡಿತವಾಗಿ ಯೇಸಪ್ಪ ಇದರಿಂದಲೂ ಕೂಡ ಬಿಡಿಸುತ್ತಾರೆ. ಹೇಗೆ ಬಿಡಿಸುತ್ತಾರೆ ಎಂದು ಕೇಳುತ್ತೀರ? ನಾವು ಯಾವಾಗ ಯೇಸಪ್ಪನ ಬಳಿ ಹೋಗಿ ಕ್ಷಮೆ ಯಾಚಿಸಿ Prayer ಮಾಡುತ್ತೇವೊ , ಆಗ ಖಂಡಿತವಾಗಿಯೂ ಯೇಸಪ್ಪ ನಮ್ಮನ್ನು ಬಿಡುಗಡೆಮಾಡುತ್ತಾರೆ. ನಾವು ಯೇಸಪ್ಪನಿಂದ ಪಡೆದ ಬಿಡುಗಡೆಯನ್ನು ಮತ್ತೊಬ್ಬರಿಗೆ ಹೇಳಿ ಅವರೂ ಬಿಡುಗಡೆ ಹೊಂದುವಂತೆ ಪ್ರಾರ್ಥಿಸಬೇಕು. ಇದು ಮಾತ್ರವಲ್ಲ, ನಾವು ಸುಳ್ಳು ಹೇಳಬಾರದು, ಕದಿಯಬಾರದು, ಯಾರನ್ನೂ ವಂಚಿಸಬಾರದು, ಜಗಳವಾಡಬಾರದು, ನಾವು ನಮ್ಮ ತಂದೆ ತಾಯಿಗೆ ವಿಧೇಯರಾಗಿ ನಡೆಯಬೇಕು. School ನಲ್ಲಿ ಶಿಕ್ಷಕರು ಕೊಡುವ Home works ಗಳನ್ನೆಲ್ಲಾ ಸರಿಯಾಗಿ ಮಾಡಬೇಕು. ಯಾರಾದರೂ ನಿಮಗೆ ಏನಾದರೂ ಕೆಲಸ ಕೊಟ್ಟರೆ, ನೀವು ಜವಾಬ್ದಾರಿಯಿಂದ ಮಾಡಿಕೊಡಬೇಕು. Daily ತಪ್ಪದೇ Prayer ಮಾಡಬೇಕು ಬೈಬಲ್ ಓದಬೇಕು. ನೀವು ಈ ಎಲ್ಲ ಕೆಲಸಗಳನ್ನು ಮಾಡಿದರೆ, ನೀವು ಯೇಸಪ್ಪನಿಗೆ ಇಷ್ಟವಾಗಿ ಜೀವಿಸಬಹುದು ಯೇಸಪ್ಪನಿಗೆ ಇಷ್ಟವಾಗಿ ಜೀವಿಸಿದರೆ ಯೇಸಪ್ಪ ನಿಮ್ಮ ಕುಟುಂಬವನ್ನು ಆಶೀರ್ವದಿಸುತ್ತಾರೆ. ದೇಶದಲ್ಲಿ ನೀವಿರುವ ಸ್ಥಳದಲ್ಲಿ ನಿಮ್ಮನ್ನು ಆಶೀರ್ವಾದಕರವಾಗಿರುವಂತೆ ಮಾಡುತ್ತಾರೆ. Ok.

 

ಅಮೆರಿಕಾದ ಅಧ್ಯಕ್ಷನಾದ ಜಾನ್ F. ಕೆನಡಿ ಯವರು ಈ ರೀತಿಯಾಗಿ ಹೇಳುತ್ತಾರೆ, "ನಿಮ್ಮ ದೇಶವು ನಿಮಗಾಗಿ ಏನು ಮಾಡಲು ಸಾಧ್ಯ ಎಂದು ಕೇಳಬೇಡಿ, ನಿಮ್ಮ ದೇಶಕ್ಕಾಗಿ ನೀವು ಏನು ಮಾಡಲು ಸಾಧ್ಯ ಎಂದು ಕೇಳಿ" ಎಂದು ಹೇಳಿದರು. ನಮ್ಮ ದೇಶಕ್ಕಾಗಿ ನಾವು ಏನು ಮಾಡಬಹುದು ಎಂದು ನೀವು ಕೇಳುತ್ತೀರಾ? ನಮ್ಮ ದೇಶದ ಜನರಿಗಾಗಿ ನಾವು ಪ್ರಾರ್ಥಿಸಬಹುದು. ನಮ್ಮಂತಹ ಚಿಕ್ಕವರಿಗಾಗಿ, ಸಂಕಷ್ಟದಲ್ಲಿರುವ ಜನರಿಗಾಗಿ ನಾವು ಪ್ರಾರ್ಥಿಸಬಹುದು. ಸಾಧ್ಯವಾದರೆ ಅವರಿಗೆ Help ಮಾಡಬಹುದು. ಮುಖ್ಯವಾಗಿ ನಾವೆಲ್ಲರೂ ನಮ್ಮ ದೇಶದ ಉಜ್ಜೀವನಕ್ಕಾಗಿ Prayer ಮಾಡಬೇಕು. Prayer ಮಾತ್ರ ಮಾಡಿದರೆ ಸಾಕಾ? ಖಂಡಿತ ಇಲ್ಲ! ನಮ್ಮೊಂದಿಗೆ ಓದುತ್ತಿರುವವರಿಗೆ, ಯೇಸಪ್ಪನ ಬಗ್ಗೆ ಹೇಳಲೇಬೇಕು. Ok, ಪುಟಾಣಿಗಳೇ ಎಲ್ಲರಿಗೂ 75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

- ದಿವ್ಯ A. ಫೀಬಾ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin