By Village Missionary Movement
Friday, 13-Aug-2021ಧೈನಂದಿನ ಧ್ಯಾನ(Kannada) – 13.08.2021
ಎಲ್ಲಾ ಕೆಲಸವೂ ಅತ್ಯುತ್ತಮವಾದ ಕೆಲಸವೇ
"ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು;..." - ಪ್ರಸಂಗಿ 9:10
ಬೋಧಕರು ಒಂದು ಕುಟುಂಬದವರನ್ನು ಭೇಟಿ ಮಾಡಲು ಹೋಗಿದ್ದಾಗ ಅಲ್ಲಿ ಒಬ್ಬ ಯುವಕನನ್ನು ಭೇಟಿಯಾದರು. ಆತನನ್ನು "ಸಹೋದರ, ನೀವು ಏನು ಕೆಲಸ ಮಾಡುತ್ತಿದ್ದೀರಿ?" ಎಂದು ಕೇಳಿದರು. "ನಾನೊಬ್ಬ ಇಂಜಿನಿಯರ್, ಅನೇಕ ಸ್ಥಳಗಳಿಗೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ. ಆದರೆ ನನಗೆ ಇನ್ನೂ ಕೆಲಸ ಸಿಕ್ಕಿಲ್ಲ ಕೆಲಸ ಸಿಗುವವರೆಗೂ ಮನೆ ಕಟ್ಟುತ್ತಿರುವ ಒಂದು ಸಣ್ಣ ಗುತ್ತಿಗೆದಾರನಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದೇನೆ. ಸಂಬಳ ತುಂಬಾ ಕಡಿಮೆ. ನನ್ನನ್ನು ಓದಿಸಿದ ಪೋಷಕರಿಗೆ ನಾನು ಹೊರೆಯಾಗಲು ಬಯಸುವುದಿಲ್ಲ. ಹಾಗಾಗಿ ನನಗೆ ಸಿಕ್ಕ ಕೆಲಸವನ್ನು ನಾನು ಮಾಡುತ್ತಿದ್ದೇನೆ. ” ಅವನ ಮಾತಿಗೆ ಸಂತೋಷಗೊಂಡ ಬೋಧಕರು, ಅವನನ್ನು ಪ್ರೋತ್ಸಾಹಿಸಿ, ಆಶೀರ್ವದಿಸಿ ಪ್ರಾರ್ಥಿಸಿ ಹೋದರು. ಕೆಲವು ತಿಂಗಳುಗಳಲ್ಲೇ ಅವನಿಗೆ ಒಳ್ಳೆಯ ಕೆಲಸವೂ ಸಿಕ್ಕಿತು.
ಚಪ್ಪಲಿ ತಯಾರಿಸುವ ಕೆಲಸ ಮಾಡುತ್ತಿದ್ದ ವಿಲಿಯಂ ಕೇರಿ ಭಾರತಕ್ಕೆ ಮಿಷನರಿಯಾಗಿ ಬಂದು, ಅನೇಕ ಭಾರತೀಯ ಭಾಷೆಗಳಲ್ಲಿ ಬೈಬಲ್ ಹೊರಬರಲು ಕಾರಣವಾಗಿದ್ದರು. ಅವರು ಅನೇಕ ಭಾರತೀಯ ಸಾಹಿತ್ಯಗಳನ್ನು ಭಾರತೀಯ ಭಾಷೆಗಳಿಗೆ ಅನುವಾದಿಸಿ ಅತ್ಯುತ್ತಮವಾದ ಸೇವೆಯನ್ನು ಪೂರ್ಣಗೊಳಿಸಿದರು. ನಾವು ಮಾಡುವ ಕೆಲಸ ಯಾವುದಾಗಿದ್ದರೂ, ನಾವು ಅದನ್ನು ನಿಷ್ಠೆಯಿಂದ ಮಾಡಿದಾಗ, ದೇವರು ನಮ್ಮನ್ನು ಹಂತ ಹಂತವಾಗಿ ಏರಿಸುತ್ತಾ ನಮ್ಮನ್ನು ಆಶೀರ್ವದಿಸುವುದು ಖಚಿತ!
ಸತ್ಯವೇದದಲ್ಲಿ ಯೋಸೇಫನನ್ನು ಐಗುಪ್ತಕ್ಕೆ ಕರೆದೊಯ್ಯಲಾಯಿತು. ಅಲ್ಲಿ ದಾಸನಾಗಿದ್ದ ಯೋಸೇಫನು ತನಗೆ ವಹಿಸಿಕೊಡಲ್ಪಟ್ಟ ಎಲ್ಲಾ ಕಾರ್ಯಗಳನ್ನು ಉತ್ತಮವಾಗಿ ಮಾಡಿ ಮುಗಿಸಿದರು. ಕರ್ತನು ಯೋಸೇಫನ ಜೊತೆಯಲ್ಲಿದ್ದರು. ಅವನು ಕಾರ್ಯನಿರತನಾಗಿದ್ದನು. ಅನೇಕ ಪ್ರಯಾಸದ ನಂತರ ಅಧ್ಯಕ್ಷನಾಗಿ ಹೆಚ್ಚಿಸಲ್ಪಟ್ಟನು.
ಇದನ್ನು ಓದುತ್ತಿರುವ ಸಹೋದರ, ಸಹೋದರಿಯೇ! ನನ್ನ ವಿದ್ಯಾರ್ಹತೆಗೆ ಸೂಕ್ತವಾದ ಕೆಲಸ ಸಿಗಲಿಲ್ಲವೇ ಎಂದು ಸುಸ್ತಾಗಿದ್ದೀರಾ? ನಮಗೆ ಸಿಕ್ಕ ಕೆಲಸವನ್ನು ಮಾಡೋಣ. ನೀವು ಕೆಲಸ ಮಾಡಲು ಸಿದ್ಧರಿದ್ದರೆ ಎಲ್ಲಿ ಬೇಕಾದರೂ ಕೆಲಸ ಮಾಡಬಹುದು. ಒಂದು ಕೆಲಸವನ್ನೂ ಮಾಡದಿರುವುದೇ ಕಡಿಮೆ ಗುಣಮಟ್ಟದ ಸ್ಥಿತಿ ಎಂಬುದನ್ನು ನಾವು ಅರಿತುಕೊಳ್ಳಬೇಕು. ಹೀನವಾದ ಕೆಲಸ ಎಂದರೆ ಕಳ್ಳತನ, ದರೋಡೆ ಮತ್ತು ವಂಚನೆಯಂತವುಳೇ! ಪ್ರಾಮಾಣಿಕವಾಗಿ ಮಾಡುವ ಯಾವ ಕೆಲಸವಾದರೂ ಶ್ರೇಷ್ಠವಾದದ್ದೇ. ಚಲಿಸುವ ಕಾರನ್ನು ತಿರುಗಿಸಬಹುದು, ನಿಂತಿರುವ ಕಾರನ್ನು ತಿರುಗಿಸಲು ಸಾಧ್ಯವಿಲ್ಲ. ಯೋಸೇಫನಂತೆ ನಮಗೆ ನೀಡಿದ ಕೆಲಸವನ್ನು ನಾವು ಉತ್ತಮವಾಗಿ ಮಾಡುವಾಗ ಕರ್ತನು ಜೊತೆಯಿದ್ದು ನಮ್ಮನ್ನು ಹೆಚ್ಚಿಸುವುದು ಖಚಿತ!
- L. ಅಲಗರಸಾಮಿ
ಪ್ರಾರ್ಥನಾ ಅಂಶ:
ಗೆತ್ಸೇಮನೆ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಕಟ್ಟಡ ಕೆಲಸಗಳ ಅವಶ್ಯಕತೆಗಳನ್ನು ಕರ್ತನು ಪೂರೈಸುವಂತೆ ಮತ್ತು ಅದನ್ನು ಆದಷ್ಟು ಬೇಗ ಕಟ್ಟಿ ಮುಗಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482