Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.08.2021
Share:

By Village Missionary Movement

Thursday, 12-Aug-2021

ಧೈನಂದಿನ ಧ್ಯಾನ(Kannada) – 12.08.2021

 

ಯೋಚನೆ

 

"ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು; ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು." - ಕೀರ್ತನೆಗಳು 41:1

 

"C.M.S ನ ತಾಯಿ" ಎಂದು ಕರೆಯಲ್ಪಡುವ "ಇಂಗ್ರಿಡ್ ಕೌಸ್ಕಿ" ರವರು ಜರ್ಮನಿಯಿಂದ ಭಾರತಕ್ಕೆ ಬಂದವರು. ಇವರು CMS ನ ಸ್ಥಾಪಕರು. ಹೋರ್ಸ್ಟ್ ಕೌಸ್ಕಿಯವರ ಪತ್ನಿ. CMS ಅನಾಥರು ಮತ್ತು ದಿಕ್ಕಿಲ್ಲದ ಮಕ್ಕಳನ್ನು ಪರಾಂಬರಿಸುವ ಒಂದು ಚಾರಿಟಬಲ್ ಟ್ರಸ್ಟ್..ಇವರು ಬಡ, ಸರಳ, ಅಸಹಾಯಕ ಮತ್ತು ಅನಾಥ ಮಕ್ಕಳ ಅಗತ್ಯಗಳನ್ನು ಪೂರೈಸಲು ಮತ್ತು ಅವರನ್ನು ನೋಡಿಕೊಳ್ಳಲು ತನ್ನ ಜೀವನವನ್ನು ಸಮರ್ಪಿಕೊಂಡಿದ್ದಾರೆ. ಮಕ್ಕಳಿಗೆ ಆಹಾರ ಮತ್ತು ಬಟ್ಟೆಗಳನ್ನು ಒದಗಿಸಲಾಯಿತು ಮತ್ತು ಸ್ಥಳೀಯ ಶಾಲೆಗಳ ಮೂಲಕ ಶಿಕ್ಷಣ ನೀಡಲಾಯಿತು. ಆಧ್ಯಾತ್ಮಿಕ ಜೀವನಕ್ಕಾಗಿ ಭಾನುವಾರ ಶಾಲೆಗಳನ್ನು ನಡೆಸಲಾಯಿತು. ಒಮ್ಮೆ ಒಬ್ಬ ಹುಡುಗ ಅನಾರೋಗ್ಯದಿಂದ ಬಳಲುತ್ತಿದ್ದ. ಆಮೇಲೆ ಆ ಹುಡುಗನನ್ನು ನೋಡಿಕೊಳ್ಳುವುದಕ್ಕಾಗಿ ಇನ್‌ಗ್ರಿಡ್ ತನ್ನ ಸಮಯವನ್ನೆಲ್ಲಾ ಕಳೆದರು. ಮತ್ತು ಹುಡುಗ ವಾಂತಿ ಮಾಡಿದಾಗ, ಇಂಗ್ರಿಡ್ ಕೌಸ್ಕಿ ತನ್ನ ಕೈಯಲ್ಲಿ ವಾಂತಿಯನ್ನು ಹಿಡಿದುಕೊಂಡರು. ಅವರು ಅವನನ್ನು ಶುಚಿಗೊಳಿಸಿದರು ಆತನ ಕರವಸ್ತ್ರದಿಂದ ಒರೆಸಿದರು ಮತ್ತು ಅವನನ್ನು ಅಪ್ಪಿಕೊಂಡರು.ಇದು ದಿಕ್ಕಿಲ್ಲದವರ ಮೇಲೆ ಅವರಿಗಿದ್ದ ಪ್ರೀತಿಯ ಆಲೋಚನೆಯಾಗಿತ್ತು. ಇದು ಇಂದಿಗೂ ನಾವು ಅವರನ್ನು ನೆನೆಸಿಕೊಳ್ಳಲು ಕಾರಣವಾಗಿದೆ.

 

ಅನೇಕರು ಯೇಸು ಕ್ರಿಸ್ತನೊಂದಿಗೆ ಯೆರಿಕೋವಿಗೆ ಹೋದರು. ಆಗ ರಸ್ತೆಬದಿಯಲ್ಲಿ ಕುಳಿತಿದ್ದ ಇಬ್ಬರು ಕುರುಡರು, "... ದೇವರೇ, ದಾವೀದನ ಮಗನೇ, ನಮ್ಮನ್ನು ಕರುಣಿಸು!" ಎಂದು ಕರೆದರು, ಅವರು ಯೇಸುವನ್ನು ನೋಡಿ ಕರೆದರೂ, ಜನರು ಅವರನ್ನು ಕೀಳಾಗಿ ನೋಡಿ ಗದರಿಸುತ್ತಿದ್ದಾರೆ. ಆದರೆ ಯೇಸು ನಿಂತು ಅವರನ್ನು ಕರೆದು, "ನಾನು ನಿಮಗಾಗಿ ಏನು ಮಾಡಬೇಕೆಂದು ನೀವು ಬಯಸುತ್ತೀರಿ?" ಎಂದು ಕೇಳಿದರು. ಅವರು ನೋಡಲು ಬಯಸುತ್ತಾರೆ ಎಂದು ಯೇಸುವಿಗೆ ತಿಳಿದಿತ್ತು. ಆದರೂ ಆತನು ಅವರೊಂದಿಗೆ ಮಾತನಾಡಿ ಅವರ ಆಸೆಯನ್ನು ಪೂರೈಸುತ್ತಾರೆ.

 

ಪ್ರಿಯರೇ! ನಾನು ಕೂಡ ದಿಕ್ಕಿಲ್ಲದ ಸ್ಥಿತಿಯಲ್ಲಿ, ಮುರಿದು ಬಿದ್ದ ಸ್ಥಿತಿಯಲ್ಲಿ ಇದ್ದೇನೆ ಎಂದು ನೀವು ಭಾವಿಸುತ್ತೀದ್ದೀರಾ? ನಿಮಗೆ ಸಹಾಯ ಮಾಡಲು ಯೇಸು ಉಂಟು, ನಿಮ್ಮ ಶಬ್ದಕ್ಕೆ ಅವರು ತಕ್ಷಣ ಕಿವಿಗೊಟ್ಟು ನಿಮಗೆ ಸಹಾಯ ಮಾಡುವರು ಎಂದು ಮರೆತುಬಿಡ ಬೇಡಿರಿ. ಅದೇ ಸಮಯದಲ್ಲಿ ಅವರ ಮಕ್ಕಳಾಗಿರುವ ನಾವು ದಿಕ್ಕಿಲ್ಲದವರ ಬಗ್ಗೆ ಚಿಂತಿಸದೇ ಇರಬಹುದಾ? ದಿಕ್ಕಿಲ್ಲದವರ ಬಗ್ಗೆ ಯೋಚಿಸೋಣ. ಪರಲೋಕ ತಂದೆಯ ಮಕ್ಕಳಾಗಿರುವ ನಾವು ಭಾಗ್ಯವಂತರಾಗಿರೋಣ.

- Mrs. ಅನ್ಬು ಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ನಮ್ಮ ಮೋಕ್ಷ ಪ್ರಯಾಣ ದೈನಂದಿನ ಧ್ಯಾನ ಸಂದೇಶಗಳು 8 ಭಾಷೆಗಳಲ್ಲಿ ಹೊರಬರಲು ಸಹಾಯ ಮಾಡುತ್ತಿರುವ ಅನುವಾದಕರನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet