Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.08.2021
Share:

By Village Missionary Movement

Wednesday, 11-Aug-2021

ಧೈನಂದಿನ ಧ್ಯಾನ(Kannada) – 11.08.2021

 

ಬಿಡುವಿಗೆ ಬಿಡು

 

"ಸ್ವಲ್ಪಕಾಲ ಪಾಪಭೋಗಗಳನ್ನನುಭವಿಸುವದಕ್ಕಿಂತ ದೇವರ ಜನರೊಂದಿಗೆ ಕಷ್ಟವನ್ನನುಭವಿಸುವದೇ ಒಳ್ಳೇದೆಂದು ತೀರ್ಮಾನಿಸಿಕೊಂಡನು." - ಇಬ್ರಿಯರಿಗೆ 11:25

 

ಅನೇಕ ವರ್ಷಗಳ ಹಿಂದೆ ಅಮೇರಿಕಾ ದೇಶಕ್ಕೆ ಸೇರಿದವರೊಬ್ಬರು ಚೀನಾ ದೇಶದಲ್ಲಿ ಮಿಷನರಿಯಾಗಿ ಸೇವೆ ಮಾಡುತ್ತಿದ್ದರು. ಅವರಿಗೆ ಚೀನಾ ಭಾಷೆಯು ಚೆನ್ನಾಗಿ ತಿಳಿದಿತ್ತು ಆದ್ದರಿಂದ, ಹೆಸರುವಾಸಿಯಾದ ಎಣ್ಣೆ ಕಂಪನಿಯೊಂದು, ತನ್ನ ಪ್ರತಿನಿಧಿಯಾಗಿ ಅವರನ್ನು ನೇಮಿಸಲು ಬಯಸಿತು. ಆ ಮಿಷನರಿಯ ಸಂಬಳಕ್ಕಿಂತ ಹೆಚ್ಚು ಸಂಬಳವನ್ನು ಕೊಡುತ್ತೇವೆ ಎಂದು ಹೇಳಿದರು. ಮಿಷನರಿ ಆ ಕೆಲಸವನ್ನು ಮಾಡಲು ನಿರಾಕರಿಸಿದರು. ಅವರು ನಿರಾಕರಿಸಲು ಏನು ಕಾರಣ ಎಂದು ಕೇಳಲು, "ನಾನು ನಿತ್ಯ ಜೀವಕ್ಕಾಗಿ ಆತ್ಮಗಳನ್ನು ಸಂಪಾದಿಸುತ್ತಿದ್ದೇನೆ. ನರಕಾಗ್ನಿಗೆ ಹೋಗದಂತೆ ಜನರನ್ನು ಕಾಪಾಡುತ್ತಿದ್ದೇನೆ. ಈ ಉನ್ನತವಾದ ಕೆಲಸವನ್ನು ಬಿಟ್ಟು ಬಿಡಲು ಸಾಧ್ಯವಿಲ್ಲ.

 

ಮೋಶೆ ಅರಮನೆಯಲ್ಲಿ ಫರೋಹನ ಕುಮಾರ್ತೆಯ ಮಗನಾಗಿ ಬೆಳೆದಾಗ, ಈ ಲೋಕದ ಸುಖವನ್ನು ಎಷ್ಟು ಮಟ್ಟಿಗೆ ಅನುಭವಿಸಿರುತ್ತಾರೆ ಎಂದು ಯೋಚಿಸಿ ನೋಡಿರಿ. ಅಪೊಸ್ತಲ 7:22 ರಲ್ಲಿ, "...ಐಗುಪ್ತದೇಶದವರ ಸರ್ವವಿದ್ಯೆಗಳಲ್ಲಿಯೂ ಉಪದೇಶಹೊಂದಿ ಮಾತುಗಳಲ್ಲಿಯೂ ಕಾರ್ಯಗಳಲ್ಲಿಯೂ ಸಮರ್ಥನಾದನು" ಎಂದು ಬರೆಯಲ್ಪಟ್ಟಿದೆ. ಆದರೆ ಮೋಶೆ ದೊಡ್ಡವನಾದಾಗ ಐಗುಪ್ತದಲ್ಲಿ ದೇವರ ಮಕ್ಕಳು ಅನುಭವಿಸುತ್ತಿದ್ದ ಕಷ್ಟಗಳನ್ನು ನೋಡುತ್ತಾರೆ. ಐಗುಪ್ತದಲ್ಲಿರುವ ನಿಧಿ ಗಳಿಗಿಂತ, ದೇವರ ಮಕ್ಕಳೊಂದಿಗೆ ಕಷ್ಟವನ್ನು ಅನುಭವಿಸುವುದೇ ಒಳ್ಳೆಯದೆಂದು ಅದನ್ನೇ ಆರಿಸಿಕೊಂಡರು. ಆದ್ದರಿಂದ ಮೋಶೆ, ದಾಸರಾಗಿದ್ದ ದೇವರ ಸೈನ್ಯವನ್ನು ಐಗುಪ್ತದಿಂದ ಹೊರಡುವಂತೆ ಮಾಡಿದರು.

 

ಕ್ರಿಸ್ತನಲ್ಲಿ ಬಹು ಪ್ರೀತಿಯುಳ್ಳ ಪ್ರಿಯರೇ! ಮೇಲೆ ನೋಡಿದ ಇಬ್ಬರೂ ವೈಯಕ್ತಿಕ ವ್ಯಕ್ತಿಗಳೇ! ಆದರೆ ಕ್ರಿಸ್ತನ ಪ್ರೀತಿಯ ತಮ್ಮ ಮೂಲಕ ಜನರಿಗೆ ತಿಳಿಸಲ್ಪಡಬೇಕೆಂದು ತೀರ್ಮಾನಿಸಿ ತಮ್ಮನ್ನು ಸಮರ್ಪಿಸಿಕೊಂಡರು. ಅವರ ಪ್ರೀತಿಯ ಕಾರ್ಯ ಏನಂದರೆ, ಮನುಷ್ಯನು ತಾನು ಬಿದ್ದು ಬಿಟ್ಟಿರುವ ಪಾಪದ ಸ್ಥಿತಿಯಿಂದ ಮೇಲೆತ್ತಿ ಪರಲೋಕದ ಮಹಿಮೆಗೆ ಹೆಚ್ಚಿಸುವುದೇ! ಈ ರಕ್ಷಣೆಯ ಮಾರ್ಗವನ್ನು ಜನರಿಗೆ ತಿಳಿಸಲು ನಾವೂ ಕೂಡ ನಮ್ಮನ್ನು ಸಮರ್ಪಿಸಿಕೊಳ್ಳೋಣವಾ? ನಾವು ನಮ್ಮ ವೈಯಕ್ತಿಕ ಬಯಕೆಗಳನ್ನು ನೆರವೇರಿಸುವುದರಲ್ಲಿಯೇ ಇನ್ನೂ ಆಸಕ್ತಿ ತೋರಿಸುವವರಾಗಿರದೆ, ನಂಬಿಕೆ ಇಲ್ಲದೆ, ಒಂಟಿಯಾಗಿ,ಭಯದೊಂದಿಗೆ ಅಳುತ್ತಿರುವ ಅನೇಕರು ದೇವರ ಪ್ರೀತಿಯ ಯೋಜನೆಯನ್ನು ತಿಳಿದುಕೊಳ್ಳಲು, ನಮ್ಮ ಸಮಯವನ್ನು, ಪ್ರತಿಭೆಯನ್ನು, ನಮಗಿರುವ ಎಲ್ಲವನ್ನೂ ಉಪಯೋಗಿಸೋಣವಾ? ಅನೇಕರನ್ನು ನೀತಿಯ ಕಡೆಗೆ ತಿರುಗಿಸಿ ನಕ್ಷತ್ರಗಳಂತೆ ನಾವು ಎಂದೆಂದಿಗೂ ಪ್ರಕಾಶಿಸೋಣ! ಹಲ್ಲೇಲೂಯ!

- A. ಬ್ಯೂಲ

 

ಪ್ರಾರ್ಥನಾ ಅಂಶ:

ಗೆತ್ಸೇಮನೆ ಕ್ಯಾಂಪಸ್ ಗೆ ಬಂದು ಪ್ರತಿದಿನವೂ ಮಧ್ಯಾಹ್ನದ ಊಟವನ್ನು ತೆಗೆದುಕೊಂಡು ಹೋಗುತ್ತಿರುವ ವ್ಯಕ್ತಿಗಳು ಯೇಸುವಿನ ಪ್ರೀತಿಯನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino betcio bahiscasino atlasbet matbet matbet giriş bahiscasino celtabet queenbet casibom jojobet