Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.08.2021 (Kids Special)
Share:

By Village Missionary Movement

Sunday, 08-Aug-2021

ಧೈನಂದಿನ ಧ್ಯಾನ(Kannada) – 08.08.2021 (Kids Special)

 

ಚುರು-ಚುರುಕಾಗಿರು

 

"ಸೋಮಾರಿಯೇ, ಇರುವೆಯ ಹತ್ತಿರ ಹೋಗಿ ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ತಂದುಕೋ." - ಜ್ಞಾನೋಕ್ತಿಗಳು 6:6

 

ಬೆಳಿಗ್ಗೆ ಎದ್ದು ಅಮ್ಮ ಅಡುಗೆ ಕೆಲಸವನ್ನೆಲ್ಲಾ ಮುಗಿಸಿ ಬಿಟ್ಟು, ರೋಹಿತ್, ರೋಹಿತ್ ಎಂದು ಕರೆದರು. ರೋಹಿತ್ ಬೆಳಿಗ್ಗೆ ಎದ್ದ ಕೂಡಲೇ Cell-phone ನನ್ನು ಎತ್ತಿಕೊಂಡು ಆಟವಾಡುತ್ತಾ ಅಮ್ಮ ಕರೆದ ಶಬ್ದ ಕೂಡ ಕೇಳದೆ ಕೂತಿದ್ದನು. ಅಮ್ಮ ಅವನು ಇನ್ನೂ ನಿದ್ದೆಯಿಂದ ಎದ್ದಿಲ್ಲವೇನೋ ಎಂದು ತಿಳಿದು Tea ತೆಗೆದುಕೊಂಡು ಬಂದರು. ಏನು ರೋಹಿತ್ ಮೊದಲೆಲ್ಲಾ ಬೆಳಿಗ್ಗೆ ಎದ್ದ ಕೂಡಲೇ Brush ಮಾಡಿ Tea ಕೇಳುತ್ತಾ ಅಮ್ಮನನ್ನು ಹುಡುಕಿ ಬರುತ್ತಿದ್ದೆ, ಈಗೆಲ್ಲಾ ತುಂಬಾ ಮೋಸವಾಗಿಬಿಟ್ಟಿದ್ದೀಯ. Online class 2 Hours ಮುಗಿದ ಕೂಡಲೇ T.V. Cell phone ಎಂದು ಕುಳಿತುಕೊಂಡು ಬಿಡುತ್ತಿದ್ದೀಯಾ. ಊಟ Snacks, ನಿದ್ದೆ ಅಂಥಾ ದಿನಪೂರ್ತಿ ಸೋಮಾರಿತರ ಇದ್ದೀಯ. ಹೀಗೆಲ್ಲಾ ಇರಬಾರದು ಎಂದು ಹೇಳಿದ ಕೂಡಲೇ ರೋಹಿತ್ ಗೆ ಕೋಪ ಬಂತು.

 

Tea ತೆಗೆದುಕೊಂಡು, ಏನಮ್ಮ ನನ್ನ ಕೆಲಸವೆಲ್ಲ ನಾನೇ ತಾನೇ ಮಾಡಿಕೊಳ್ಳುತ್ತೇನೆ. Daily ಹಲ್ಲುಜ್ಜುತ್ತೇನೆ, ತಿನ್ನುತ್ತೇನೆ, Class attend ಮಾಡುತ್ತೇನೆ Test ಬರೆಯುತ್ತೇನೆ... ಹೋಗಿ ಮಮ್ಮಿ ಎಂದು ಹೇಳಿಬಿಟ್ಟು, ತೋಟದಲ್ಲಿ ಹೋಗಿ ಕುಳಿತುಕೊಂಡನು. ಸುಂದರವಾದ ಪಕ್ಷಿಗಳ ಶಬ್ದ, ಪ್ರಕೃತಿಯ ತಂಪಾದ ಗಾಳಿ ಬೀಸಲು ತೋಟದ ಅಂದಚೆಂದವನ್ನು ನೋಡಿ ಎಂಜಾಯ್ ಮಾಡುತ್ತಿದ್ದನು. ದಿಢೀರೆಂದು ಕಾಲಿಗೆ ಇರುವೆ ಕಚ್ಚಿ ಬಿಟ್ಟಿತು. ಸ್...ಸ್...ಆ...ಇರುವೆ ಕಚ್ಚಿಬಿಟ್ಟಿತೆ ಎಂದು ಕೆಳಗೆ ನೋಡಿದನು. ತುಂಬಾ ಇರುವೆಗಳು ಗುಂಪು ಗುಂಪಾಗಿದ್ದವು. ತನಗೆ ಕಚ್ಚಿದ್ದನ್ನು ನೆನೆಸಿಕೊಂಡು ಕಾಲಿನಿಂದ ಎಲ್ಲವನ್ನು ತುಳಿದು ಹಾಕಿದನು. ಇರುವೆಗಳು ಬೇರೆ ದಾರಿಯನ್ನು ಕಂಡುಹಿಡಿದು ಚುರು-ಚುರುಕಾಗಿ ಹೋಗಲು ಪ್ರಾರಂಭಿಸಿತು, ಕೆಲವು ಇರುವೆಗಳು ರೋಹಿತ್ ಕಾಲಿನಲ್ಲಿ ಹತ್ತಿ ಹೋದವು. ಇದನ್ನು ನೋಡಿದ ಕೂಡಲೇ ರೋಹಿತ್ ಪಾಠ ಕಲಿತುಕೊಂಡನು. ತುಳಿದು ಹಾಕಿದರೆ ಸತ್ತು ಹೋಗುವ ಇರುವೆ ಏನು ನಡೆದರೂ ತನಗಾಗಿ ಒಂದು ದಾರಿಯನ್ನು ಕಂಡುಹಿಡಿದು ಚುರು-ಚುರುಕಾಗಿ ಅದರ ಕೆಲಸವನ್ನು ಮಾಡುತ್ತಲೇ ಇದೆಯೇ ಎಂದು ಯೋಚಿಸಲು ಪ್ರಾರಂಭಿಸಿದನು. ಅಮ್ಮನ ಬಳಿ ಓಡಿಹೋಗಿ ಹೇಳಿದನು. ನಾನು ಇನ್ನುಮೇಲೆ ಇರುವೆಯಂತೆ ಚುರು-ಚುರುಕಾಗಿದ್ದು, ಒಳ್ಳೆಯ ಅಭ್ಯಾಸಗಳನ್ನು ಕಲಿತುಕೊಳ್ಳುತ್ತೇನೆ, ಸೋಮಾರಿಯಾಗಿ ಇರುವುದಿಲ್ಲ ಎಂದು ಹೇಳಿದನು ರೋಹಿತ್ ನನ್ನು ಅಮ್ಮ ಮೆಚ್ಚಿಕೊಂಡರು. ಇರುವೆ ಮೂಲಕ ರೋಹಿತ್ ನನ್ನು ಬದಲಾಯಿಸಿದ್ದಕ್ಕಾಗಿ ವಂದನೆ ಯೇಸುವೇ... ಎಂದು ಹೇಳಿದರು.

 

ಪುಟಾಣಿಗಳೇ! ನೀವು ಕೂಡ ಸೋಮಾರಿಗಳಂತೆ ತಿನ್ನುತ್ತಾ, ನಿದ್ದೆ ಮಾಡುತ್ತಾ, ನಿಮ್ಮ ತಂದೆ ತಾಯಿಗಳು ಹೇಳುವುದನ್ನು ಕೇಳದೇ ಇದ್ದೀರಾ? ಅದು ನಿಮ್ಮ Health ಗೆ ಒಳ್ಳೇದಲ್ಲ. ಆದ್ದರಿಂದ ಚಿಕ್ಕ ಮಕ್ಕಳಾದ ನೀವು School ಇದ್ದರೂ, Leave ಇದ್ದರೂ ಯಾವಾಗಲೂ ಚುರು-ಚುರುಕಾಗಿಯೇ ಇರಬೇಕು ಸರೀನಾ.

- Mrs. ಅನ್ಬು ಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş marsbahis casibom casibom giriş holiganbet holiganbet giriş jojobet jojobet giriş casibom çarkbet vizebet alobet alobet giriş amgbahis amgbahis giriş sweet bonanza casinomilyon jojobet betsalvador bahiscasino casibom casibom giriş jojobet jojobet giriş perabet perabet giriş holiganbet holiganbet giriş casibom casibom giriş casibom güncel giriş matbet matbet giriş superbetin superbetin giriş carkbet carkbet giris supertotobet supertotobet giriş superbetin superbetin giriş