Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.08.2021
Share:

By Village Missionary Movement

Saturday, 07-Aug-2021

ಧೈನಂದಿನ ಧ್ಯಾನ(Kannada) – 07.08.2021

 

ಜಯ ಕೊಡುವ ದೇವರು

 

"ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?" - ರೋಮಾ 8:31

 

ಒಬ್ಬ ರೈತ ಮತ್ತು ಅವರ ಸ್ನೇಹಿತರು ಕಾಡಿನಲ್ಲಿ ಬಾತುಕೋಳಿಗಳನ್ನು ಹಿಡಿಯಲು ಹೋಗುತ್ತಿದ್ದರು. ಆ ಸಮಯದಲ್ಲಿ ಅವರು ದೇವರ ಬಗ್ಗೆ ಮಾತನಾಡುತ್ತಿದ್ದರು. ಆಗ ರೈತನ ಸ್ನೇಹಿತ, "ನೀವು ಯಾವಾಗಲೂ ನಿಮಗೂ-ಸೈತಾನನಿಗೂ ಮಧ್ಯೆ ನಡೆಯುವ ಹೋರಾಟದ ಬಗ್ಗೆಯೇ ಹೇಳುತ್ತಿರುತ್ತೀರಲ್ಲ. ಆದರೆ ನನಗೆ ಆ ರೀತಿ ಯಾವ ಹೋರಾಟಗಳು ಇಲ್ಲವೇ" ಎಂದು ಹೇಳಿದರು. ಅದಕ್ಕೆ ಆ ರೈತ, "ನಾವು ಈಗ ಬೇಟೆಯಾಡಲು ಹೋಗುತ್ತಿದ್ದೇವೆ. ಅದರಲ್ಲಿ ಎರಡು ಬಾತುಕೋಳಿಗಳು ಜಗಳವಾಡಿ, ಅದರಲ್ಲಿ ಒಂದು ಸತ್ತು ಹೋಗುತ್ತದೆ ಎಂದು ಅಂದುಕೊಳ್ಳೋಣ. ಮತ್ತೊಂದು ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸುತ್ತದೆ. ಇವುಗಳಲ್ಲಿ ನೀವು ಯಾವುದನ್ನು ಹಿಂಬಾಲಿಸುತ್ತೀರ" ಎಂದು ಕೇಳಿದರು. ಅದಕ್ಕೆ ಆ ಸ್ನೇಹಿತ, "ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದನ್ನೇ, ಏಕೆಂದರೆ ಸತ್ತು ಬಿದ್ದಿರುವುದನ್ನು ನಾವು ಯಾವಾಗ ಬೇಕಾದರೂ ಎತ್ತಿಕೊಳ್ಳಬಹುದೇ!" ಎಂದು ಹೇಳಿದರು. ಆಗ ರೈತ, "ನೀವು ಸತ್ತುಹೋದ ಬಾತುಕೋಳಿಗಳು ಎಂದು ಸೈತಾನನಿಗೆ ಗೊತ್ತು" ಎಂದು ಹೇಳಿದರು.

 

ಯೋಬನು ತನ್ನ ಕಾಲದಲ್ಲಿ ಜೀವಿಸಿದ ಎಲ್ಲರಿಗಿಂತ, ತಾನು ದೇವರೇ ಮೆಚ್ಚಿಕೊಳ್ಳುವ ಮಟ್ಟಿಗೆ ನೀತಿವಂತರಾಗಿ ಜೀವಿಸಿದರು. ಅಧಿಕ ಮೆಚ್ಚುಗೆಯನ್ನು ಪಡೆದರು. ಅವರನ್ನು ಕೂಡ ಸೈತಾನನು ಸುಮ್ಮನೆ ಬಿಡಲಿಲ್ಲ. ಅವರಿಗಿದ್ದ ಎಲ್ಲವನ್ನು ದೇವರ ಅನುಮತಿಯಿಂದ ಕಿತ್ತುಕೊಂಡನು. ಶೋಧನೆ ಮೇಲೆ ಶೋಧನೆ! ಯೋಬನು ಪ್ರಲಾಪಿಸುತ್ತಾ ತುಂಬಾ ಕಷ್ಟ ಪಟ್ಟರು. ಆದರೂ ಕರ್ತನು ಯೋಬನ ಮೊದಲನೆಯ ಸ್ಥಿತಿಗಿಂತಲೂ ಕಡೆಯ ಸ್ಥಿತಿಯನ್ನು ಹೀಗೆ ಹೆಚ್ಚಾಗಿ ಆಶೀರ್ವದಿಸಿದರು.

 

ಇದನ್ನು ಓದುತ್ತಿರುವ ಪ್ರಿಯರೇ! ಕರ್ತನ ಮಾರ್ಗದಲ್ಲಿ ನಡೆಯುವವರನ್ನೇ ಗುರಿ ಇಟ್ಟು, ಸೈತಾನನು ಯಾವಾಗಲೂ ದಾಳಿ ಮಾಡುತ್ತಲೇ ಇರುತ್ತಾನೆ. ಏಕೆಂದರೆ ನಾವು ಕರ್ತನಿಗಾಗಿ ಏನು ಬೇಕಾದರೂ ಮಾಡುವ ಧೈರ್ಯಶಾಲಿ ಗಳು ಎಂದು ಅವರನ್ನು ಹಾಗೆ ಸುಮ್ಮನೆ ಬಿಟ್ಟು ಬಿಟ್ಟರೆ, ಈ ಲೋಕವನ್ನೇ ಕದಲಿಸಿ ಬಿಡುತ್ತಾರೆ ಎಂದು ಅವನಿಗೆ ಗೊತ್ತು. ಆ ಭಯದಿಂದಲೇ ಅವನು ಯಾವಾಗಲೂ ನಮ್ಮೊಂದಿಗೆ ಹೋರಾಡುತ್ತಲೇ ಇರುತ್ತಾನೆ. ಆದರೆ ಅವನು ಸೋತು ಹೋದವನು, ಅವನು ಒಂದು ದಿನವೂ ನಮ್ಮನ್ನು ಜಯಿಸಲು ಆಗುವುದಿಲ್ಲ. ನಾವು ಹೋರಾಡಿ ಅವನನ್ನು ಜಯಿಸೋಣ. ಏಕೆಂದರೆ ಜಯಕ್ರಿಸ್ತನು ನಮ್ಮೊಂದಿಗೆ ನಮ್ಮ ಪಕ್ಕದಲ್ಲಿದ್ದಾರೆ. ಎಷ್ಟು ದೊಡ್ಡ ಹೋರಾಟ ಬಂದರೂ. ಹೀಗಾಯಿತೆ ಎಂದು ಚಿಂತಿಸಬೇಡಿರಿ. ಯೇಸುಕ್ರಿಸ್ತನ ಹೆಸರು ಹೇಳಿ ಗೆಲ್ಲೋಣ.

- Bro. ಹನೀಸ್ ಸಮುವೇಲ್

 

ಪ್ರಾರ್ಥನಾ ಅಂಶ:

ನಮ್ಮ ಗೆತ್ಸೇಮನೆ ಕ್ಯಾಂಪಸ್ ನಲ್ಲಿ ನಡೆಯುತ್ತಿರುವಂತಹ ಕಟ್ಟಡದ ಕೆಲಸಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş marsbahis casibom casibom giriş holiganbet holiganbet giriş jojobet jojobet giriş casibom çarkbet vizebet alobet alobet giriş amgbahis amgbahis giriş sweet bonanza casinomilyon jojobet betsalvador bahiscasino casibom casibom giriş jojobet jojobet giriş perabet perabet giriş holiganbet holiganbet giriş casibom casibom giriş casibom güncel giriş matbet matbet giriş superbetin superbetin giriş carkbet carkbet giris supertotobet supertotobet giriş superbetin superbetin giriş