Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.08.2021
Share:

By Village Missionary Movement

Friday, 06-Aug-2021

ಧೈನಂದಿನ ಧ್ಯಾನ(Kannada) – 06.08.2021

 

TATA ...BYE...BYE

 

"ನಾನು ನಿಮ್ಮನ್ನು ಅನಾಥರಾಗಿ ಬಿಡುವದಿಲ್ಲ; ನಿಮ್ಮ ಬಳಿಗೆ ಬರುತ್ತೇನೆ." - ಯೋಹಾನ 14:18

 

ಇಂದು ಜಗತ್ತಿನಲ್ಲಿರುವ ಸಂಬಂಧಗಳ ಬಗ್ಗೆ ನೆನೆಸಿಕೊಂಡರೇನೆ ಭಯವಾಗುತ್ತಿದೆ. ಬಹಳ ಸುಲಭವಾಗಿ ಒಂದು ಸಂಬಂಧಕ್ಕೆ Tata .. Bye ... Bye ... ಎಂದು ಹೇಳಿಬಿಡುತ್ತಾರೆ. ವಿಶೇಷವಾಗಿ ಪುರುಷರನ್ನು ನಂಬಿ ಮೋಸ ಹೋಗುವ ಮಹಿಳೆಯರು, ಮಹಿಳೆಯರನ್ನು ನಂಬಿ ಮೋಸ ಹೋಗುವ ಪುರುಷರು ಹೆಚ್ಚು. ಜೀವನದ ಕೊನೆಯವರೆಗೂ ಜೊತೆಯಲ್ಲೇ ಇರುತ್ತೇನೆ ಎಂದು ಹೇಳುತ್ತಾರೆ. ಆದರೆ ಅರ್ಧದಲ್ಲೇ Tata ಮಾಡಿ ಹೊರಟು ಹೋಗುತ್ತಾರೆ. ಅದಕ್ಕಿಂತ ಹೆಚ್ಚಾಗಿ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಲೆಕ್ಕಗಳನ್ನು ತೋರಿಸಿ ಆಸೆಯ ಮಾತುಗಳನ್ನು ಹೇಳಿ ತಮ್ಮ ಕೆಲಸ ಮುಗಿದ ನಂತರ Bye ... Bye... ಎಂದು ಹೇಳಿಬಿಡುತ್ತಾರೆ. ಇಂತಹ ವಿಷಯಗಳಿಂದ ನಾವು ನಮ್ಮನ್ನು, ನಮ್ಮ ಸಂತತಿಯನ್ನು ಕಾಪಾಡಿಕೊಳ್ಳಬೇಕು.

 

ಪರಿಶುದ್ಧ ಗ್ರಂಥದಲ್ಲಿ ಯೇಸು ಕ್ರಿಸ್ತನು ಈ ಭೂಲೋಕ ಜೀವನದ ದಿನಗಳು ನೆರವೇರಿದ ನಂತರ ಅವರು ಶಿಷ್ಯರಿಗೆ Tata ತೋರಿಸಿ ಬಿಟ್ಟು ಹೋಗಿಬಿಡಲಿಲ್ಲ. ಬದಲಾಗಿ ಸದಾಕಾಲ ನಮ್ಮ ಜೊತೆಯಲ್ಲೇ ಇರುವಂತೆ ಪವಿತ್ರಾತ್ಮನೆಂಬ ಒಬ್ಬ ಸಹಾಯಕನನ್ನು ನಮಗಾಗಿ ಕಳುಹಿಸಿದರು. "ನಿಮ್ಮ ಬಳಿಗೆ ಬರುತ್ತೇನೆ" ಎಂದೂ ಹೇಳಿದ್ದಾರೆ. ಯೇಸು ಕ್ರಿಸ್ತನು ತಾನು ಹೇಳಿದಂತೆಯೇ ತಂದೆಯ ಬಳಿಗೆ ಹೋಗಿ ಪವಿತ್ರಾತ್ಮನನ್ನು ಕಳುಹಿಸಿದರು. ಆ ಪವಿತ್ರಾತ್ಮನೇ ನಮಗೆ ಎಲ್ಲವನ್ನು ಉಪದೇಶಿಸಿ ಅನುದಿನವು ನಮ್ಮನ್ನು ನಡೆಸುತ್ತಿದ್ದಾರೆ.

 

ಇದನ್ನು ಓದುತ್ತಿರುವ ಸ್ನೇಹಿತರೇ! ಯೇಸು ಕ್ರಿಸ್ತನಂತೆ ಈ ಭೂಮಿಯಲ್ಲಿ ಯಾರೂ ಕೂಡ ನಮ್ಮನ್ನು ಪ್ರೀತಿಸಲು ಸಾಧ್ಯವೇ ಇಲ್ಲ. ಅವರು ನಮ್ಮನ್ನು ಅರ್ಧದಾರಿಯಲ್ಲೇ ಬಿಟ್ಟು, Tata...Bye...Bye... ಎಂದು ಹೇಳುವವರಲ್ಲ. ಕರ್ತನಾದ ಯೇಸುವಿಗೂ ಮತ್ತು ನಮಗೂ ಇರುವಂತಹ ಸಂಬಂಧಕ್ಕಾಗಿ ನಾವು ಸಂತೋಷಪಡಬೇಕು. ಕಾರಣ, ಆತನು ನಮ್ಮನ್ನು ಈ ಭೂಮಿಯಲ್ಲಿ ಬದುಕುವ ಜೀವನದಲ್ಲಿ ಮಾತ್ರವಲ್ಲದೆ ನಾವು ಪರಲೋಕ ರಾಜ್ಯವನ್ನು ಹೊಂದುವವರೆಗೂ ನಮ್ಮೊಂದಿಗಿದ್ದು ನಮ್ಮನ್ನು ನಡೆಸುತ್ತಾರೆ. ಹಾಗಾಗಿ ನಾವು ಚಿಂತಿಸುವ ಅಗತ್ಯವಿಲ್ಲ. ನಾವು ಯಾವ ಪರಿಸ್ಥಿತಿಯಲ್ಲಿದ್ದರೂ ನಮ್ಮನ್ನು ದೂರ ತಳ್ಳದೆ ಹತ್ತಿರ ಸೇರಿಸಿಕೊಂಡು ಮುನ್ನಡೆಸುವವರು ಯೇಸು ಮಾತ್ರವೇ, ಆದ್ದರಿಂದ ನಾವು ಆತನನ್ನೇ ಒರಗಿಕೊಂಡು ಜೀವಿಸೋಣ!

- T. ಶಂಕರರಾಜ್

 

ಪ್ರಾರ್ಥನಾ ಅಂಶ:

ಮಧ್ಯಪಾನದ ಚಟಕ್ಕೆ ದಾಸರಾಗಿರುವ ಜನರು ಬಿಡುಗಡೆ ಹೊಂದಲು ಪ್ರಾರಂಭಿಸಿರುವ Peace centre-ಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş kargabet kargabet giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş casibom çarkbet vizebet alobet alobet giriş amgbahis amgbahis giriş sweet bonanza casinomilyon jojobet betsalvador bahiscasino casibom casibom giriş jojobet jojobet giriş perabet perabet giriş holiganbet holiganbet giriş casibom casibom giriş casibom güncel giriş matbet matbet giriş superbetin superbetin giriş carkbet carkbet giris supertotobet supertotobet giriş