Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.08.2021
Share:

By Village Missionary Movement

Wednesday, 04-Aug-2021

ಧೈನಂದಿನ ಧ್ಯಾನ(Kannada) – 04.08.2021

 

ಕ್ರಿಸ್ತನ ಪ್ರೀತಿ

 

"ಮಹತ್ವಗಳಾಗಲಿ ಮೇಲಣ ಲೋಕವಾಗಲಿ ಕೆಳಗಣ ಲೋಕವಾಗಲಿ...ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು." - ರೋಮಾ 8:39

 

ಎರಡು ಕಾಲುಗಳು ಇಲ್ಲದ ಜಾನ್ಸನ್ ಎಂಬ ಯೌವನಸ್ಥನು ಕ್ರಿಸ್ತನ ಪ್ರೀತಿಯನ್ನು ತಿಳಿಯದೆ ಜೀವಿಸಿದರು. ಒಂದು ಭಾನುವಾರದಂದು ಆರಾಧನೆಗೆ ಬಂದ ಸಂದೇಶಕರೊಬ್ಬರು ಕ್ರಿಸ್ತನ ಪ್ರೀತಿಯನ್ನು ಹೇಳಿ ಪ್ರಾರ್ಥಿಸುವಾಗ, ಜಾನ್ಸನ್ ತನ್ನನ್ನು ಸಂಪೂರ್ಣವಾಗಿ ದೇವರಿಗೆ ಸಮರ್ಪಿಸಿಕೊಂಡರು. ಆರಾಧನೆ ಮುಗಿದ ಕೂಡಲೇ ತನ್ನ ಎರಡೂ ಕೈಗಳಿಂದ ತೆವಳುತ್ತಾ ಬಂದು ಬೋಧಕರ ಬಳಿ ತಾನು ಕೂಡ ಗ್ರಾಮದ ಸೇವೆಗೆ ಬರುತ್ತೇನೆಂದು ಹೇಳಿದರು. 3 ಗಂಟೆಗೆ ಹೋಗ ಬೇಕಾದ ಗ್ರಾಮದ ಸೇವೆಗೆ 2.,30 ಕ್ಕೆ ಬಂದುಬಿಟ್ಟರು. ಹಸ್ತಪ್ರತಿಗಳು, ಹೊಸ ಒಡಂಬಡಿಕೆಗಳು, ಬೈಬಲ್, ನೀರು ಹೀಗೆ ಎಲ್ಲವನ್ನೂ ವ್ಯಾನಿನಲ್ಲಿ ಹಾಕಿಕೊಂಡು ನಂತರ ಜಾನ್ಸನ್ ನನ್ನು ಎತ್ತಿ ಹತ್ತಿಸಿಕೊಂಡು ಹೊರಟರು. ಗ್ರಾಮಕ್ಕೆ ಬಂದ ಕೂಡಲೇ ಎಲ್ಲವನ್ನು ಒಂದು ಮರದ ಕೆಳಗೆ ಇಳಿಸಿ ಬಿಟ್ಟು, ಜಾನ್ಸನ್ ನನ್ನು ಮರದ ಕೆಳಗೆ ಕೂರಿಸಿ ಬಿಟ್ಟು ಇಬ್ಬರಿಬ್ಬರಾಗಿ ಬೇರ್ಪಟ್ಟು ಹೊರಟು ಹಸ್ತಪ್ರತಿಗಳನ್ನು ಕೊಟ್ಟು ಸುವಾರ್ತೆಯನ್ನು ಪ್ರಕಟಿಸಿ ಬಂದರು. ಅವರು ಹಿಂತಿರುಗಿ ಬಂದಾಗ, ಜಾನ್ಸನ್ ಅಲ್ಲಿರಲಿಲ್ಲ. ತುಂಬಾ ಹೊತ್ತು ಕಳೆದ ಮೇಲೆ ಜಾನ್ಸನ್ ಸಂತೋಷದಿಂದ ತನ್ನ ಕೈಗಳಿಂದ ತೆವಳುತ್ತಾ ಬಂದರು. ಒಬ್ಬರು ಓಡಿಹೋಗಿ ಎತ್ತಿಕೊಂಡು ಏನೆಂದು ಕೇಳಿದರೆ, "ಪಾಪಿಯಾದ ನನ್ನನ್ನು ಕ್ರಿಸ್ತನು ಎಷ್ಟು ಪ್ರೀತಿಸುತ್ತಿದ್ದಾರೆಂದು ಎಲ್ಲರಿಗೂ ಹೇಳಬಾರದಾ? ಆದ್ದರಿಂದ ನಾನು ಕೂಡ ಬಾಯಲ್ಲಿ ಹಸ್ತಪ್ರತಿಗಳನ್ನು ತೆಗೆದುಕೊಂಡು ಮನೆಮನೆಗೂ ಹೋಗಿ ಕ್ರಿಸ್ತನ ಪ್ರೀತಿಯನ್ನು ಎತ್ತಿ ಹೇಳಿದೆನು" ಎಂದರು.

 

ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಂಡ ಪೌಲನು, "ಮರಣವಾಗಲಿ, ಜೀವವಾಗಲಿ ಈಗಿನ ಸಂಗತಿಗಳಾಗಲಿ, ಮುಂದಣ ಸಂಗತಿಗಳಾಗಲಿ,ಮೇಲಣ ಲೋಕವಾಗಲಿ ಕೆಳಗಣ ಲೋಕವಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರವೆಂದು" ನಿಶ್ಚಯವಾಗಿ ಹೇಳಿದರು. 

 

ಹೌದು, ಪ್ರಿಯರೇ! ನೀವು ಕ್ರಿಸ್ತನ ಪ್ರೀತಿಯನ್ನು ಇಷ್ಟು ಮಟ್ಟಿಗೆ ಗ್ರಹಿಸಿದ್ದೀರ? ಅಥವಾ ಚಿಕ್ಕ ಚಿಕ್ಕ ಪರಿಸ್ಥಿತಿಗಳು, ಶಾರೀರಿಕ ಬಲಹೀನತೆಗಳನ್ನು ನೋಡುತ್ತಾ ಕ್ರಿಸ್ತನು ನನ್ನನ್ನು ಪ್ರೀತಿಸಲಿಲ್ಲ, ನನ್ನನ್ನು ತಳ್ಳಿಬಿಟ್ಟರು, ನನ್ನನ್ನು ಮರೆತು ಬಿಟ್ಟರು ಎಂದು ಹೇಳುತ್ತಿದ್ದೀರೋ? ಎರಡು ಕಾಲುಗಳೂ ಇಲ್ಲದ ಜಾನ್ಸನ್ ಕ್ರಿಸ್ತನ ಪ್ರೀತಿಯನ್ನು ಗ್ರಹಿಸಿ ಮನೆಮನೆಗೂ ಹೋಗಿ ಅದನ್ನು ಸಾರುತ್ತಾ ಬರುತ್ತಿದ್ದಾರೆ. ಪೌಲನು ಯಾವುದೇ ರೀತಿಯ ಪರಿಸ್ಥಿತಿಯಲ್ಲೂ ಕ್ರಿಸ್ತನ ಪ್ರೀತಿಯನ್ನು ಗ್ರಹಿಸಲು ಸಾಧ್ಯ ಎಂದೂ, ಅವರ ಪ್ರೀತಿಯ ಮುಲಕ ಎಂತಹ ಪರಿಸ್ಥಿತಿಗಳನ್ನೂ ಜಯಿಸಲು ಸಾಧ್ಯ ಎಂದು ಹೇಳುತ್ತಿದ್ದಾರೆ. ದೇವರ ಪ್ರೀತಿಯನ್ನು ಗ್ರಹಿಸಿರುವವರು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವೇ ಇಲ್ಲ. ನಾವು ರುಚಿನೋಡಿದ ಪ್ರೀತಿಯನ್ನು ಮತ್ತೊಬ್ಬರಿಗೂ ತಿಳಿಸಲು ಪ್ರಯಾಸ ಪಡೋಣ. ದೇಶವು ದೇವರನ್ನು ಅರಿತುಕೊಳ್ಳಲಿ.

- Mrs. ಅನ್ಬು ಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಪ್ರತಿದಿನವೂ YouTube, Face book ನಲ್ಲಿ ಹೊರಬರುತ್ತಿರುವ ದೈನಂದಿನ ಧ್ಯಾನವನ್ನು ಅನೇಕರು ನೋಡಿ ಆತ್ಮೀಕ ಜೀವನದಲ್ಲಿ ಬಲಗೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino betcio bahiscasino atlasbet matbet matbet giriş bahiscasino celtabet queenbet casibom jojobet